Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಲಿಮಿನೇಟರ್‌ನಲ್ಲಿ ಎಚ್ಚರ ಆರ್‌ಸಿಬಿ! ಹೈದ್ರಾಬಾದ್ ಕಳೆದ 3 ಪಂದ್ಯ ಗೆದ್ದಿರೋದು ಟಾಪ್ 3 ತಂಡಗಳ ವಿರುದ್ಧ..

Alert RCB: SRH Won The Last 3 Matches Against The Top 3 Teams!

ಸನ್‌ರೈಸರ್ಸ್ ಹೈದ್ರಾಬಾದ್ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ ಕೊನೆಯ ಲೀಗ್‌ ಪಂದ್ಯದಲ್ಲಿ ಟೇಬಲ್ ಟಾಪರ್ ಮುಂಬೈ ಇಂಡಿಯನ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದ್ದು ನಿಮಗೆಲ್ಲಾ ತಿಳಿದಿದೆ. ಡೇವಿಡ್ ವಾರ್ನರ್ ಪಡೆ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ತನ್ನ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಮುಂಬೈ ಇಂಡಿಯನ್ಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಹೈದ್ರಾಬಾದ್ ನಾಯಕ ಡೇವಿಡ್ ವಾರ್ನರ್ ಮತ್ತು ವೃದ್ದಿಮಾನ್ ಸಾಹಾ ವಿಕೆಟ್ ಕೈ ಚೆಲ್ಲದೆ ಸನ್‌ರೈಸರ್ಸ್ ಹೈದ್ರಾಬಾದ್‌ಗೆ 10 ವಿಕೆಟ್‌ಗಳ ಭರ್ಜರಿ ಗೆಲುವನ್ನು ತಂದುಕೊಟ್ಟರು. ಈ ಗೆಲುವಿನ ಮೂಲಕ ಸನ್‌ರೈಸರ್ಸ್ ಹೈದ್ರಾಬಾದ್ ಪ್ಲೇ ಆಫ್ ಪ್ರವೇಶಿಸಿದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೇರಿತು.

ಆದರೆ ಈ ಗೆಲುವಿನ ಬಳಿಕ ಸನ್‌ರೈಸರ್ಸ್ ಹೈದ್ರಾಬಾದ್ ಎಷ್ಟು ಅಪಾಯಕಾರಿ ತಂಡ ಎಂಬುದು ಮುಂಬೈಗೆ ಅಷ್ಟೇ ಪ್ಲೇ ಆಫ್‌ಗೆ ತಲುಪಿದ ಎಲ್ಲಾ ತಂಡಗಳಿಗೆ ಅರಿವಾದಂತಿದೆ. ಏಕೆಂದರ್ ಡೇವಿಡ್ ವಾರ್ನರ್ ಸೈನ್ಯ ಕಳೆದ ಮೂರು ಪಂದ್ಯ ಗೆದ್ದಿರೋದು ಬಲಿಷ್ಠ ತಂಡಗಳ ವಿರುದ್ಧ ಅನ್ನೋದನ್ನು ಮರೆಯುವ ಹಾಗಿಲ್ಲ.

ವಿಶೇಷ ಏನಂದ್ರೆ ಸನ್‌ರೈಸರ್ಸ್ ಹೈದ್ರಾಬಾದ್ ಕಳೆದ ಮೂರು ಪಂದ್ಯ ಗೆದ್ದಿರೋದು ಪ್ರಸ್ತುತ ಪ್ಲೇ ಆಫ್ ಹಂತ ಪ್ರವೇಶಿಸಿರುವ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ. ಸತತ ಮೂರು ಪಂದ್ಯಗಳ ಗೆಲುವು ಹೈದ್ರಾಬಾದ್ ಆತ್ಮವಿಶ್ವಾಸವನ್ನು ದುಪ್ಪಟ್ಟುಗೊಳಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಳೆದ ಪಂದ್ಯದಲ್ಲಿ 88ರನ್‌ಗಳ ಗೆಲುವು ಸಾಧಿಸಿದ್ರೆ, ಆರ್‌ಸಿಬಿ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿದೆ. ಇನ್ನೂ ಮುಂಬೈ ಇಂಡಿಯನ್ಸ್‌ಗೆ 10 ವಿಕೆಟ್‌ಗಳ ಹೀನಾಯ ಸೋಲಿನ ಮುಖ ತೋರಿಸಿದೆ.

ಎಸ್‌ಆರ್‌ಹೆಚ್‌ ಈ ಗೆಲುವಿನ ಹುರುಪನ್ನು ಕಂಡಿರುವ ಕ್ರಿಕೆಟ್ ಪಂಡಿತರು, ಎಸ್‌ಆರ್‌ಹೆಚ್‌ 2016ರ ಸೀಸನ್‌ನಲ್ಲಿ ಮೂರು ಪಂದ್ಯಗಳನ್ನು ಗೆದ್ದು ಚಾಂಪಿಯನ್ ಆಗಿದ್ದರ ಪ್ರದರ್ಶನಕ್ಕೆ ಹೋಲಿಸುತ್ತಿದ್ದಾರೆ. ಹೀಗಾಗಿ ಎಸ್‌ಆರ್‌ಹೆಚ್‌ ಎದುರಾಳಿ ಆರ್‌ಸಿಬಿ ನವೆಂಬರ್ 06ರಂದು ಅಬುಧಾಬಿಯಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ತುಂಬಾನೆ ಎಚ್ಚರಿಕೆಯಿಂದ ಪಂದ್ಯವನ್ನ ಆಡಬೇಕಿದೆ. ಏಕೆಂದರೆ ಆರ್‌ಸಿಬಿ ಕೂಡ ಈ ಬಾರಿಯಾದ್ರೂ ಚೊಚ್ಚಲ ಕಪ್‌ ಗೆಲ್ಲಬೇಕೆಂದು ಪಣತೊಟ್ಟಿದೆ.

Story first published: Thursday, November 5, 2020, 9:41 [IST]
Other articles published on Nov 5, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+