ಅಲೆಕ್ಸಾಂಡರ್ ಜ್ವೆರೆವ್ ಫ್ರೆಂಚ್ ಓಪನ್ ಚಾಂಪಿಯನ್
ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಪುರುಷರ ಸಿಂಗಲ್ಸ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ. ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಅಲೆಕ್ಸಾಂಡರ್ ಜ್ವೆರೆವ್, ಇಟಲಿಯ ಫ್ಲೇವಿಯೊ ಕೊಬೊಲ್ಲಿ ಅವರನ್ನು ಮಣಿಸಿದರು. ಈ ಮೂಲಕ 29 ವರ್ಷದ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಮೊದಲ ಬಾರಿಗೆ ಗ್ರ್ಯಾನ್ ಸ್ಲ್ಯಾಮ್ ಗೆದ್ದು ಬೀಗಿದ್ದಾರೆ.
ಭಾನುವಾರ ನಡೆದ ಅಂತಿಮ ಸುತ್ತಿನ ಕಾದಾಟದಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಅಮೋಘ ಪ್ರದರ್ಶನ ನೀಡಿದರು. ಇವರು 6-1, 4-6, 6-4, 6-7, 6-1 ರಿಂದ ಇಟಲಿಯ ಆಟಗಾರನನ್ನು ಮಣಿಸಿದರು. ಐದು ಸೆಟ್ ವರೆಗೆ ನಡೆದ ಪಂದ್ಯ ನಾಲ್ಕು ಗಂಟೆ ಹಾದಿನಾರು ನಿಮಿಷ ನಡೆಯಿತು. ಈ ಗೆಲುವಿನ ಮೂಲಕ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಯನ್ನು ಜರ್ಮನಿಯ ಆಟಗಾರ ಮೊದಲ ಬಾರಿಗೆ ಎತ್ತಿ ಬೀಗಿದರು. ಇದಕ್ಕೂ ಮೊದಲು ಇವರು 2025ರ ಆಸ್ಟ್ರೇಲಿಯನ್ ಓಪನ್ ಫೈನಲ್ ತಲುಪಿದ್ದರು. ಆದರೆ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗಿದ್ದರು. ಅಲ್ಲದೆ 2020ರ ಯುಎಸ್ ಓಪನ್‌ನಲ್ಲೂ ರನ್ನರ್ ಅಪ್ ಆಗಿದ್ದರು.

ಅಲೆಕ್ಸಾಂಡರ್ ಜ್ವೆರೆವ್ ಸೆಮಿಫೈನಲ್ ಪಂದ್ಯದಲ್ಲಿ 7-5, 6-2, 3-6, 6-3 ರಿಂದ ಜಕುಬ್ ಮೆನ್ಶಿಕ್ ಅವರನ್ನು ಮಣಿಸಿ ಫೈನಲ್‌ಗೆ ಪ್ರವೇಶಿಸಿದ್ದರು. ಇನ್ನು ಇಟಲಿಯ ಫ್ಲೇವಿಯೊ ಕೊಬೊಲ್ಲಿ ಅವರು ತಮ್ಮದೇ ದೇಶದ ಯಾಟಿಯೊ ಅರ್ನಾಲ್ಡಿ ವಿರುದ್ಧ ವಾಕ್‌ಓವರ್ ಪಡೆದು ಫೈನಲ್‌ಗೆ ಪ್ರವೇಶ ಪಡೆದಿದ್ದರು.
ಜಿದ್ದಿನಿಂದ ಕೂಡಿದ್ದ ಪಂದ್ಯ
ಪಂದ್ಯದ ಆರಂಭದಲ್ಲೇ ಅಬ್ಬರಿಸಿದ ಜ್ವೆರೆವ್ ಕೇವಲ 35 ನಿಮಿಷಗಳಲ್ಲಿ 6-1 ರಿಂದ ಮೊದಲ ಸೆಟ್ ಗೆದ್ದುಕೊಂಡರು. ಮೊದಲ ಬಾರಿಗೆ ಗ್ರಾಂಡ್ ಸ್ಲಾಮ್ ಫೈನಲ್ ತಲುಪಿದ್ದ ಇಟಲಿಯ 10ನೇ ಶ್ರೇಯಾಂಕದ ಆಟಗಾರ ಕೊಬೊಲ್ಲಿ, ಎರಡನೇ ಸೆಟ್‌ನಲ್ಲಿ (6-4) ಅದ್ಭುತ ಪ್ರದರ್ಶನ ನೀಡಿದರು. ನಾಲ್ಕನೇ ಸೆಟ್ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದು, ಕೊಬೊಲ್ಲಿ ಟೈ-ಬ್ರೇಕರ್‌ನಲ್ಲಿ 7-6 (5) ರಿಂದ ಗೆದ್ದು ಪಂದ್ಯವನ್ನು ಐದನೇ ಸೆಟ್‌ಗೆ ಕೊಂಡೊಯ್ದರು. ಅಂತಿಮ ಸೆಟ್‌ನಲ್ಲಿ ಜ್ವೆರೆವ್ ತಮ್ಮ ಅನುಭವದ ಆಟ ಪ್ರದರ್ಶಿಸಿ, ಪಂದ್ಯವನ್ನು ಸುಲಭವಾಗಿ ಗೆದ್ದರು.
1996ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಬೋರಿಸ್ ಬೇಕರ್ ಗೆದ್ದ ನಂತರ, ಗ್ರಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದ ಮೊದಲ ಜರ್ಮನ್ ಪುರುಷ ಆಟಗಾರ ಎಂಬ ಹೆಗ್ಗಳಿಕೆಗೆ ಜ್ವೆರೆವ್ ಪಾಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications