Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ವಿಂಡೀಸ್, ಜಿಂಬಾಬ್ವೆ ಇಲ್ಲ!

ಬೆಂಗಳೂರು, ಸೆ.30: ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರಲ್ಲಿ ಟೆಸ್ಟ್ ಆಡುವ 8 ದೇಶಗಳ ತಂಡಗಳು ಪಾಲ್ಗೊಳ್ಳಲಿವೆ. ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ಹೊರಗುಳಿಯಲಿವೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಬುಧವಾರ ಪ್ರಕಟಿಸಿದೆ.

2006ರ ನಂತರ ಇದೇ ಮೊದಲ ಬಾರಿಗೆ ಬಾಂಗ್ಲಾದೇಶ ತಂಡ ಚಾಂಪಿಯನ್ಸ್ ಟ್ರೋಫಿ ಆಡುವ ಅರ್ಹತೆ ಪಡೆದುಕೊಂಡಿದೆ. ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಆಯೋಜನೆಯಲ್ಲಿ ಜೂನ್ 1 ರಿಂದ 18, 2017ರ ತನಕ ಪಂದ್ಯಾವಳಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

All 8 teams confirmed for ICC Champions Trophy 2017; West Indies miss out

ಸೆಪ್ಟೆಂಬರ್ 30, 2015ರಂದು ಪ್ರಕಟಿಸಲಾದ ಟೆಸ್ಟ್ ಶ್ರೇಯಾಂಕ ಪಟ್ಟಿಯಂತೆ ಬಾಂಗ್ಲಾದೇಶ ತಂಡ 8ನೇ ಸ್ಥಾನದಲ್ಲಿದ್ದು ವೆಸ್ಟ್ ಇಂಡೀಸ್ 9ನೇ ಸ್ಥಾನಕ್ಕೆ ದೂಡಲ್ಪಟ್ಟಿದೆ. ಹಾಲಿ ಚಾಂಪಿಯನ್ ಟೀಂ ಇಂಡಿಯಾ ಎರಡನೇ ಸ್ಥಾನದಲ್ಲಿದ್ದರೆ, ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾವಿದೆ, ಮೂರನೇ ಸ್ಥಾನದಲ್ಲಿ 1998ರ ವಿನ್ನರ್ ದಕ್ಷಿಣ ಆಫ್ರಿಕಾ, ನಾಲ್ಕನೇ ಸ್ಥಾನದಲ್ಲಿ 2000ರ ಚಾಂಪಿಯನ್ ನ್ಯೂಜಿಲೆಂಡ್, ನಂತರದ ಸ್ಥಾನದಲ್ಲಿ 2002ರ ಚಾಂಪಿಯನ್ ಗಳಾದ ಶ್ರೀಲಂಕಾ ಅತಿಥೇಯ ಇಂಗ್ಲೆಂಡ್ ಇವೆ. ಕೊನೆ ಎರಡು ಸ್ಥಾನದಲ್ಲಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ಕಣಕ್ಕಿಳಿಯಲಿವೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರಲ್ಲಿ 15 ಪಂದ್ಯಗಳ ಟೂರ್ನಿಯಾಗಿದ್ದು, ಎರಡು ಗುಂಪಿನಲ್ಲಿ ತಲಾ ನಾಲ್ಕು ತಂಡಗಳು ಸೆಣಸಲಿವೆ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+