IPL Auction 2024: 77 ಆಟಗಾರರಿಗೆ 263 ಕೋಟಿ: 3 ಆಟಗಾರರಿಗೆ 52.05 ಕೋಟಿ
ಐಪಿಎಲ್ ಹರಾಜಿನಲ್ಲಿ ಆಸ್ಟ್ರೇಲಿಯಾ ಆಟಗಾರರ ಆಟದ ಮೇಲೆ ಮಾಲೀಕರು ಹೆಚ್ಚಿನ ವಿಶ್ವಾಸವನ್ನು ಇಟ್ಟಿದ್ದು, ಹೆಚ್ಚಿನ ಹಣವನ್ನು ಈ ಆಟಗಾರರಿಗೆ ಹೂಡಿದ್ದಾರೆ. ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾವನ್ನು ಮಣಿಸಿದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಸ್ಟಾರ್ ಮಿಚೆಲ್ ಸ್ಟಾರ್ಕ್ ಹರಾಜಿನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ.
ಬಹು ನಿರೀಕ್ಷೆಯಂತೆ ಮಿಚೆಲ್ ಸ್ಟಾರ್ಕ್ ಅವರನ್ನು ಕೊಳ್ಳಲು ಆರಂಭದಿಂದಲೂ ಎಲ್ಲ ತಂಡಗಳು ಮುಂದಾದವು. ಇವರಿಗೆ ಹಣ ಹೂಡಲು ಆರಂಭದಲ್ಲಿ ಮುಂಬೈ ಹಾಗೂ ಡೆಲ್ಲಿ ತಂಡಗಳು ಬಾಜಿ ಅಖಾಡಕ್ಕೆ ಎಂಟ್ರಿ ನೀಡಿದವು. 9.60 ಕೋಟಿಯ ವರೆಗೂ ಬಿಡ್ ಮಾಡಿದ ಮುಂಬೈ ಅಖಾಡದಿಂದ ಹಿಂದೆ ಸರಿಯಿತು. ನಂತರ ಗುಜರಾತ್ ಹಾಗೂ ಕೋಲ್ಕತಾ ನೈಟರ್ ರೈಡರ್ಸ್ ತಂಡಗಳು ಈ ಪ್ಲೇಯರ್ ಮೌಲ್ಯವನ್ನು ಹೆಚ್ಚಿಸಿದವು.

ಇದಾದ ಬಳಿಕ ಗುಜರಾತ್ ಟೈಟಾನ್ಸ್ ಕೂಡ ಪ್ರವೇಶಿಸಿತು. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ಬಿಡ್ಡಿಂಗ್ ಮುಂದುವರಿಸಿದರು, ಆದರೆ ಅಂತಿಮವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಮಿಚೆಲ್ ಸ್ಟಾರ್ಕ್ ಅವರನ್ನು 24.75 ಕೋಟಿ ರೂ.ಗೆ ಖರೀದಿಸಿತು.
ಮಿಚೆಲ್ ಸ್ಟಾರ್ಕ್ ಅಂತಿಮವಾಗಿ ಇತಿಹಾಸದ ಪುಟದಲ್ಲಿ ತಮ್ಮದೇ ಹೆಸರನ್ನು ನಮೂದಿಸಿದರು. ಸ್ಟಾರ್ಕ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಮಿಚೆಲ್ ಸ್ಟಾರ್ಕ್ ಅವರನ್ನು ದಾಖಲೆಯ 24.75 ಕೋಟಿ ರೂ.ಗೆ ಖರೀದಿಸಿತು. ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮ್ಮಿನ್ಸ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ 20.50 ಕೋಟಿ ರೂ.ಗೆ ಖರೀದಿಸಿದೆ.

ವಿಶ್ವಕಪ್ ಫೈನಲ್‌ನಲ್ಲಿ ಶತಕ ಸಿಡಿಸಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ 6.80 ಕೋಟಿ ರೂ. ಬಿಡ್ ಮಾಡಿದೆ.
ಪ್ಯಾಟ್ ಕಮ್ಮಿನ್ಸ್ ಮೂಲ ಬೆಲೆ 2 ಕೋಟಿ ರೂ. ಚೆನ್ನೈ ಸೂಪರ್ ಕಿಂಗ್ಸ್ ಪ್ಯಾಟ್ ಕಮಿನ್ಸ್‌ಗೆ ಮೊದಲ ಬಿಡ್ ಮಾಡಿತು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಪ್ಯಾಟ್ ಕಮ್ಮಿನ್ಸ್‌ಗಾಗಿ ಹರಾಜು ಹಾಕುತ್ತಲೇ ಇದ್ದವು. ಇದಾದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಪ್ರವೇಶಿಸಿದವು. ಅಂತಿಮವಾಗಿ, ಸನ್‌ರೈಸರ್ಸ್ ಹೈದರಾಬಾದ್ ಪ್ಯಾಟ್ ಕಮಿನ್ಸ್ ಅವರನ್ನು 20.50 ಕೋಟಿ ರೂ.ಗೆ ಕಮಿನ್ಸ್‌ರನ್ನು ಖರೀದಿಸಿತು.

ಟ್ರಾವಿಸ್ ಹೆಡ್‌ಗಾಗಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಬಿಡ್ಡಿಂಗ್ ವಾರ್ ನಡೆದಿತ್ತು. ಇಬ್ಬರೂ ನಿರಂತರವಾಗಿ ಹರಾಜು ಕೂಗುತ್ತಾ ಸಾಗಿದರು. ಆದರೆ ಅಂತಿಮವಾಗಿ ಸನ್ ರೈಸರ್ಸ್ ಹೈದರಾಬಾದ್ 6.80 ಕೋಟಿ ರೂ. ಈ ಮೂಲಕ ಟ್ರಾವಿಸ್ ಹೆಡ್ ಸನ್ ರೈಸರ್ಸ್ ಹೈದರಾಬಾದ್ ನ ಭಾಗವಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications