ಅಮೆರಿಕದಲ್ಲಿ ಕ್ರಿಕೆಟ್ ಹಬ್ಬ ಶುರು, ಸಚಿನ್ ತಂಡಕ್ಕೆ ಸೋಲು
ನ್ಯೂಯಾರ್ಕ್, ನ.08: ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಶೇನ್ ವಾರ್ನ್ ಅವರ ಕನಸಿನ ಕ್ರಿಕೆಟ್ ಟೂರ್ನಿ 'ಆಲ್ ಸ್ಟಾರ್ ಕ್ರಿಕೆಟ್ ಲೀಗ್' ಗೆ ನವೆಂಬರ್ 7ರಂದು ಚಾಲನೆ ಸಿಕ್ಕಿದೆ. ಈ ಮೂಲಕದ ಅಮೆರಿಕದಲ್ಲಿ ಕ್ರಿಕೆಟ್ ಹಬ್ಬ ಶುರುವಾಗಿದೆ. ಮೂರು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಸಚಿನ್ ಬ್ಲಾಸ್ಟರ್ಸ್ ತಂಡವನ್ನು ವಾರ್ನ್ ವಾರಿಯರ್ಸ್ ತಂಡ 6 ವಿಕೆಟ್ ಗಳಿಂದ ಸೋಲಿಸಿದೆ.
ನ್ಯೂಯಾರ್ಕ್ನ ಸಿಟಿ ಫೀಲ್ಡ್ ಬೇಸ್ ಬಾಲ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ 20 ಪಂದ್ಯದಲ್ಲಿ ಕ್ರಿಕೆಟ್ ಲೋಕದ ದಿಗ್ಗಜರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಟಾಸ್ ಗೆದ್ದ ವಾರ್ನ್ ಮೊದಲು ಫೀಲ್ಡ್ ಆಯ್ಕೆ ಮಾಡಿಕೊಂಡರು.
ಸಚಿನ್ ಬ್ಲಾಸ್ಟರ್ಸ್ ತಂಡ ನೀಡಿದ್ದ 141ರನ್ ಟಾರ್ಗೆಟ್ ಅನ್ನು 17.2 ಓವರ್ ಗಳಲ್ಲಿ ವಾರಿಯರ್ಸ್ ತಂಡ ಮುಟ್ಟಿ ಜಯಭೇರಿ ಬಾರಿಸಿತು. ಉತ್ತಮ ಬೌಲಿಂಗ್ ಮಾಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಶೇನ್ ವಾರ್ನ್ ಹಾಗೂ ರಿಕಿ ಪಾಂಟಿಂಗ್ 48ರನ್ , ಕುಮಾರ್ ಸಂಗಕ್ಕಾರ 41ರನ್ ಗೆಲುವಿಗೆ ಕಾರಣವಾಯಿತು.
ಸೆಹ್ವಾಗ್ ಬ್ಯಾಟಿಂಗ್, ವಾರ್ನ್ ಬೌಲಿಂಗ್, ಅಖ್ತರ್ ವೇಗ, ವೆಟ್ಟೋರಿ ಸ್ಪಿನ್, ರಿಕಿ, ಸಂಗಕ್ಕಾರ ಹಾಗೂ ರೋಡ್ಸ್ ರನ್ ಚೇಸ್ ಪ್ರೇಕ್ಷಕರನ್ನು ರಂಜಿಸಿತು.

ಸಚಿನ್ ಹಾಗೂ ಸೆಹ್ವಾಗ್ ಬ್ಯಾಟಿಂಗ್
ಸಚಿನ್ ಹಾಗೂ ಸೆಹ್ವಾಗ್ ಅವರು ಪ್ರೇಕ್ಷಕರ ಹರ್ಷೋದ್ಗಾರದೊಂದಿಗೆ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದರು. ಇತ್ತೀಚೆಗೆ ನಿವೃತ್ತಿ ಘೋಷಿಸಿದ ಸೆಹ್ವಾಗ್ ಅವರು 22 ಎಸೆತಗಳಲ್ಲಿ 55 (3x4,6x6) ರನ್ ಗಳಿಸಿ ಪ್ರೇಕ್ಷಕರನ್ನು ರಂಜಿಸಿದರು. ವೆಟ್ಟೋರಿ ಬೌಲಿಂಗ್ ನಲ್ಲಿ ಸೆಹ್ವಾಗ್ ಕ್ಲೀನ್ ಬೋಲ್ಡ್ ಆದರು. 20 ಓವರ್ ಗಳಲ್ಲಿ 140/8 ಸ್ಕೋರ್ ಮಾಡಿತು. ಒಟ್ಟು 9 ಸಿಕ್ಸರ್, 5 ಬೌಂಡರಿ ಕಂಡು ಬಂದಿತು.

ವಿವಿಎಸ್ ಲಕ್ಷ್ಮಣ್, ಬ್ರಿಯಾನ್ ಲಾರಾ ನಿರಾಶೆ
ತೆಂಡೂಲ್ಕರ್ 26ರನ್ ಗಳಿಸಿದರೆ, ವಿವಿಎಸ್ ಲಕ್ಷ್ಮಣ್, ಬ್ರಿಯಾನ್ ಲಾರಾ ನಿರಾಶೆ ಮೂಡಿಸಿದರು. ಸೌರವ್ ಗಂಗೂಲಿ ಅವರು ಮೊದಲ ಪಂದ್ಯವಾಡಲಿಲ್ಲ. ಮಹೇಲ ಜಯವರ್ದನೆ 15 ಎಸೆತಗಳಲ್ಲಿ 18ರನ್ ಗಳಿಸಿ ಸೈಮಂಡ್ ಗೆ ವಿಕೆಟ್ ಒಪ್ಪಿಸಿದರು. ಹೂಪರ್, ಪೊಲ್ಲಾಕ್ ತಲಾ 11 ರನ್ ಗಳಿಸಿದರು. ಆಂಬ್ರೋಸ್ ಬ್ಯಾಟಿಂಗ್ ರಂಜನೆ ನೀಡಿತು.

ವಾರ್ನ್ ಪಡೆ ಬೌಲಿಂಗ್ ಸೂಪರ್
ವಾಸಿಂ ಅಕ್ರಂ 4 ಓವರ್ ಗಳಲ್ಲಿ 16ರನ್ ಇತ್ತು ವಿಕೆಟ್ ಪಡೆಯದಿದ್ದರೂ 13 ಡಾಟ್ ಬಾಲ್ ಎಸೆದರು .ಸೈಮಂಡ್ 2 ಓವರ್ ಗಳಲ್ಲಿ 15ರನ್ನಿತ್ತು 3 ವಿಕೆಟ್ ಪಡೆದರು. ವೆಟ್ಟೋರಿ 13ಕ್ಕೆ1, 11 ಡಾಟ್ ಬಾಲ್ ಎಸೆದಿದ್ದಲ್ಲದೆ 4 ಓವರ್ ಗಳಲ್ಲಿ 20ರನ್ನಿತ್ತು ವಾರ್ನ್ 3 ವಿಕೆಟ್ ಗಳಿಸಿದರು. ವಾಲ್ಶ್ 2 ಓವರ್ ಗಳಲ್ಲಿ 30 ರನ್ ನೀಡಿ ದುಬಾರಿಯಾದರು.

ಸಚಿನ್ ವಿಕೆಟ್ ಪಡೆದ ವಾರ್ನ್
ವಾರ್ನ್ ಎಸೆತದಲ್ಲಿ ಭಾರಿ ಹೊಡೆತಕ್ಕೆ ಯತ್ನಿಸಿದ ಸಚಿನ್ ಅವರು ನೀಡಿದ ಕ್ಯಾಚನ್ನು ಜಾಕ್ ಕಾಲಿಸ್ ಅದ್ಭುತವಾಗಿ ಹಿಡಿದರು. ತೆಂಡೂಲ್ಕರ್, ಲಾರಾ ಹಾಗೂ ಲಕ್ಷ್ಮಣ್ ಅವರ ವಿಕೆಟ್ ಪಡೆದ ವಾರ್ನ್ ಅವರು ರನ್ ವೇಗಕ್ಕೆ ಬ್ರೇಕ್ ಹಾಕಿದರು. ಸೆಹ್ವಾಗ್ ನೀಡಿದ್ದ ಉತ್ತಮ ಆರಂಭದ ಲಾಭ ಪಡೆಯುವಲಿ ಬ್ಲಾಸ್ಟರ್ ವಿಫಲವಾಯಿತು.

ವಾರಿಯರ್ಸ್ ಬ್ಯಾಟಿಂಗ್
ವಾರಿಯರ್ಸ್ ಪರ ಕಾಲಿಸ್ ಹಾಗೂ ಹೇಡನ್ ಅವರು ಆರಂಭಿಕ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿದರು. ಸಚಿನ್ ಪಡೆಯ ವೇಗಿ ಶೋಯಿಬ್ ಅಖ್ತರ್ ಅವರು ಬಿರುಗಾಳಿ ವೇಗದಿಂದ ಹೇಡನ್ ರನ್ನು ಕಾಡಿಸಿ 4 ರನ್ ಗಳಿಸಿದ್ದಾಗ ವಿಕೆಟ್ ಕಿತ್ತರು. ಕಾಲಿಸ್ 13 ರನ್ ಗಳಿಸಿದ್ದಾಗ ಮುರಳಿ ಎಸೆತದಲ್ಲಿ ರನ್ ಔಟ್ ಆದರು. ಸೈಮಂಡ್ಸ್ 1 ರನ್ ಗಳಿಸಿ ಔಟಾದರೆ, ಪಾಂಟಿಂಗ್, ಸಂಗಕ್ಕಾರ ಹಾಗೂ ರೋಡ್ಸ್ ಉತ್ತಮ ಆಟವಾಡಿದರು.

ಪಾಂಟಿಂಗ್ ಉತ್ತಮ ಬ್ಯಾಟಿಂಗ್
38 ಎಸೆತಗಳಲ್ಲಿ ರಿಕಿ ಪಾಂಟಿಂಗ್ 48ರನ್ ಹಾಗೂ ಸಂಗಕ್ಕಾರ 29 ಎಸೆತಗಳಲ್ಲಿ 41ರನ್ ಗಳಿಸಿ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಜಾಂಟಿ ರೋಡ್ಸ್ 14ಎಸೆತಗಳಲ್ಲಿ 20ರನ್ ಅದರಲ್ಲೂ ಸಚಿನ್ ಬೌಲಿಂಗ್ ನಲ್ಲಿ ಸಿಕ್ಸರ್ ಬಾರಿಸಿ ವಾರ್ನ್ ತಂಡಕ್ಕೆ ಜಯ ತಂದಿತ್ತರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications