ಅಮೆರಿಕದಲ್ಲಿ ಸಚಿನ್ ಹಾಗೂ ಸೆಹ್ವಾಗ್ ಮತ್ತೊಮ್ಮೆ ಬ್ಯಾಟಿಂಗ್
ಬೆಂಗಳೂರು, ಅ.27: ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಶೇನ್ ವಾರ್ನ್ ಅವರ ಕನಸಿನ ಕ್ರಿಕೆಟ್ ಟೂರ್ನಿ 'ಆಲ್ ಸ್ಟಾರ್ ಕ್ರಿಕೆಟ್ ಲೀಗ್' ನಲ್ಲಿ ಮತ್ತೊಮ್ಮೆ ಸಚಿನ್ ಹಾಗೂ ಸೆಹ್ವಾಗ್ ಓಪನಿಂಗ್ ಮಾಡುವ ಸಾಧ್ಯತೆಯಿದೆ. ಯುಎಸ್ಎ ನಲ್ಲಿ ಮುಂದಿನ ತಿಂಗಳು ಟೂರ್ನಿ ಆರಂಭಗೊಳ್ಳಲಿದೆ.
ಕಳೆದ ವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಲೋಕಕ್ಕೆ ಗುಡ್ ಬೈ ಹೇಳಿದ ಸೆಹ್ವಾಗ್ ಅವರು ಇಂಡಿಯನ್ ಪ್ರಿಮಿಯರ್ ಲೀಗ್ ನಿಂದಲೂ
ನಿವೃತ್ತಿ ಹೊಂದಿದ್ದರು. ಅದರೆ, ಹರ್ಯಾಣ ಪರ ರಣಜಿ ಕ್ರಿಕೆಟ್ ನಲ್ಲಿ ಆಡಿದ್ದಲ್ಲದೆ ಕರ್ನಾಟಕ ವಿರುದ್ಧ ಭರ್ಜರಿ ಶತಕ ಬಾರಿಸಿದ್ದರು. ದುಬೈನಲ್ಲಿ ಮಾಸ್ಟರ್ ಲೀಗ್ ಉದ್ಘಾಟನೆಗೆ ಸೆಹ್ವಾಗ್ ತೆರಳಿದ್ದ ಸಂದರ್ಭದಲ್ಲೇ ಅವರ ನಿವೃತ್ತಿ ಬಗ್ಗೆ ಸುದ್ದಿ ಹಬ್ಬಿತ್ತು. [ಸಚಿನ್ ಬ್ಲಾಸ್ಟರ್ಸ್ vs ವಾರ್ನ್ ವಾರಿಯರ್ಸ್ ಫುಲ್ ಗೈಡ್]
ಈಗ ಸಚಿನ್ ಹಾಗೂ ವಾರ್ನ್ ಆಯೋಜನೆಯ ಆಲ್ ಸ್ಟಾರ್ ಲೀಗ್ ನಲ್ಲಿ ಸೆಹ್ವಾಗ್ ಆಡುವುದು ಮಂಗಳವಾರ ಖಚಿತವಾಗಿದೆ. ಆಲ್ ಸ್ಟಾರ್ ಲೀಗ್ ಗೆ ಸೆಹ್ವಾಗ್ ಎಂಟ್ರಿ ಕೊಡುತ್ತಿರುವ ಸುದ್ದಿಯನ್ನು ಸ್ವತಃ ಸಚಿನ್ ಅವರೇ ಟ್ವೀಟ್ ಮಾಡಿದ್ದಾರೆ.[ಸಚಿನ್ -ವಾರ್ನ್ ಸರಣಿಯಲ್ಲಿ ಬರಾಕ್ ಒಬಾಮಾ ಬ್ಯಾಟಿಂಗ್]
ನವೆಂಬರ್ 7ರಿಂದ ಆರಂಭವಾಗಲಿರುವ ಸಚಿನ್ ಬ್ಲಾಸ್ಟರ್ಸ್ ಹಾಗೂ ವಾರ್ನೆ ವಾರಿಯರ್ಸ್ ನಡುವಿನ ಮೂರು ಪಂದ್ಯಗಳಲ್ಲಿ ಆಡಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕೂಡಾ ಉತ್ಸುಕರಾಗಿದ್ದಾರೆ ಎಂಬ ಸುದ್ದಿ ಇದೆ. ಇನ್ನಷ್ಟು ವಿವರಗಳನ್ನು ಟ್ವೀಟ್ ನಲ್ಲಿ ನೋಡಿ...

ಟ್ವೆಂಟಿ20 ಕದನದಲ್ಲಿ ಮಾಜಿ ಕ್ರಿಕೆಟರ್ಸ್
ಸಚಿನ್ ತೆಂಡೂಲ್ಕರ್, ಶೇನ್ ವಾರ್ನ್ ಅಲ್ಲದೆ ಬ್ರಿಯಾನ್ ಲಾರಾ, ರಿಕಿ ಪಾಂಟಿಂಗ್, ರಾಹುಲ್ ದ್ರಾವಿಡ್, ವಾಸಿಂಅಕ್ರಂ ಸೇರಿದಂತೆ ಅನೇಕ ಮಾಜಿ ಕ್ರಿಕೆಟರ್ಸ್ ಟ್ವೆಂಟಿ20 ಕದನದಲ್ಲಿ ಪಾಲ್ಗೊಳ್ಳಲಿದ್ದಾರೆ. ನ್ಯೂಯಾರ್ಕ್ ನಲ್ಲಿ ನವೆಂಬರ್ 7ರಿಂದ ಟೂರ್ನಿ ಆರಂಭಗೊಳ್ಳಲಿದೆ. ಜೊತೆಗೆ ಕುಮಾರ್ ಸಂಗಕ್ಕಾರ, ಮಹೇಲ ಜಯವರ್ದನೆ, ಮುತ್ತಯ್ಯ ಮುರಳೀಧರನ್, ವಿವಿಎಸ್ ಲಕ್ಷ್ಮಣ್ ಸೇರಿದಂತೆ ಅನೇಕ ಆಟಗಾರರು ಆಡಲಿದ್ದಾರೆ.
ಸೆಹ್ವಾಗ್ ಗೆ ಸುಸ್ವಾಗತ ಕೋರಿದ ಸಚಿನ್
ಸೆಹ್ವಾಗ್ ಗೆ ಸುಸ್ವಾಗತ ಕೋರಿದ ಸಚಿನ್
ಸೆಹ್ವಾಗ್ ರನ್ನು ಸ್ವಾಗತಿಸಿದ ಶೇನ್ ವಾರ್ನ್
ಸೆಹ್ವಾಗ್ ರನ್ನು ಸ್ವಾಗತಿಸಿದ ಶೇನ್ ವಾರ್ನ್, ನಿಮ್ಮನ್ನು ನ್ಯೂಯಾರ್ಕ್ ನಲ್ಲಿ ಭೇಟಿ ಮಾಡುವೆ ಎಂದಿದ್ದಾರೆ.

ಕ್ರೀಡಾಂಗಣಗಳು
* ಸಿಟಿ ಫೀಲ್ಡ್, ನ್ಯೂಯಾರ್ಕ್ (45,000 ಪ್ಲಸ್ ಸೀಟು ಸಾಮರ್ಥ್ಯ)
* ಮಿನಿಟ್ ಮೇಡ್ ಪಾರ್ಕ್, ಹೋಸ್ಟನ್, ಟೆಕ್ಸಾಸ್ (40,000 ಪ್ಲಸ್ ಸೀಟು ಸಾಮರ್ಥ್ಯ) * ಡಡ್ಜರ್ಸ್ ಸ್ಟೇಡಿಯಂ, ಲಾಸ್ ಏಂಜಲೀಸ್ (56,000 ಪ್ಲಸ್ ಸಾಮರ್ಥ್ಯ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications