1000 ಏಕದಿನ ಪಂದ್ಯವನ್ನಾಡಿದ ಭಾರತ: ವೆಂಕಟೇಶ್ ಪ್ರಸಾದ್ ಪ್ರಕಾರ ಸಾರ್ವಕಾಲಿಕ ಬೆಸ್ಟ್ ಪ್ಲೇಯಿಂಗ್ 11

ಭಾರತ ಇತ್ತೀಚೆಗಷ್ಟೇ ಏಕದಿನ ಕ್ರಿಕೆಟ್‌ನಲ್ಲಿ 1000ನೇ ಏಕದಿನ ಪಂದ್ಯವನ್ನಾಡುವ ಮೂಲಕ ಹೊಸ ಮೈಲುಗಲ್ಲು ಸ್ಥಾಪಿಸಿತು. 1974ರಿಂದ ಇಲ್ಲಿಯವರೆಗೆ ಸಹಸ್ರ ಪಂದ್ಯಗಳನ್ನಾಡಿದ ವಿಶ್ವದ ಏಕೈಕ ರಾಷ್ಟ್ರ ಎನಿಸಿಕೊಂಡಿದೆ. ಇಂತಹ ಐತಿಹಾಸಿಕ ಸಾಧನೆ ವೇಳೆ ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಸಾರ್ವಕಾಲಿಕ ಪ್ಲೇಯಿಂಗ್ 11 ಆಟಗಾರರನ್ನ ಹೆಸರಿಸಿದ್ದಾರೆ.
ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯವನ್ನಾಡುವ ಮೂಲಕ ಭಾರತ 1000ನೇ ಏಕದಿನ ಪಂದ್ಯನ್ನಾಡಿದ ದಾಖಲೆ ಬರೆದಿದೆ. ರೋಹಿತ್ ಶರ್ಮಾ ಪೂರ್ಣ ಪ್ರಮಾಣದ ನಾಯಕನಾಗಿ ಮೊದಲ ಪಂದ್ಯ ಇದಾಗಿದೆ.
ಇಷ್ಟು ದೊಡ್ಡ ಮಟ್ಟಿನ ಏಕದಿನ ಕ್ರಿಕೆಟ್ ಇತಿಹಾಸವುಳ್ಳ ಭಾರತದ ಕುರಿತಾಗಿ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಸಾಮಾಜಿಕ ಜಾಲತಾಣದಲ್ಲಿ ಭಾರತದ ಆಲ್‌ಟೈಂ ಪ್ಲೇಯಿಂಗ್ 11 ಆಟಗಾರರನ್ನ ಹೆಸರಿಸಿದ್ದಾರೆ. ಕೆಲ ಆಟಗಾರರನ್ನ ಹೊರತುಪಡಿಸಿ ಇದರಲ್ಲಿ ಬಹುತೇಕರು ಸಹ ಆಟಗಾರರಾಗಿದ್ದಾರೆ.

ಸಚಿನ್-ಸೆಹ್ವಾಗ್ ಓಪನರ್ಸ್
ಭಾರತದ ಪರ 161 ಏಕದಿನ ಪಂದ್ಯವನ್ನಾಡಿರುವ ಪ್ರಸಾದ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಲೆಜೆಂಡರಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್‌ರನ್ನ ಓಪನಿಂಗ್ ಜೋಡಿಯಾಗಿ ಆಯ್ಕೆ ಮಾಡಿದ್ದಾರೆ. ವಿರಾಟ್ ಕೊಹ್ಲಿಯನ್ನ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಆಯ್ಕೆ ಮಾಡಿದ್ದು, ಮೂರು ವಿಶ್ವಕಪ್‌ನಲ್ಲಿ ಭಾರತದ ನಾಯಕನಾಗಿ ತಂಡವನ್ನ ಮುನ್ನಡೆಸಿದ್ದ ಮೊಹಮ್ಮದ್ ಅಜರುದ್ದೀನ್‌ರನ್ನ ನಾಲ್ಕನೇ ಕ್ರಮಾಂಕಕ್ಕೆ ಆಯ್ಕೆ ಮಾಡಿದ್ದಾರೆ.

ಧೋನಿ-ಯುವರಾಜ್‌ಗೆ ಸಾರ್ವಕಾಲಿಕ ತಂಡದಲ್ಲಿ ಸ್ಥಾನ
ಪ್ರಸಾದ್ ನಂತರ ಎರಡು ಬಾರಿ ವಿಶ್ವಕಪ್ ವಿಜೇತ ಯುವರಾಜ್ ಸಿಂಗ್ ಅವರನ್ನು ನಂ.5 ರಲ್ಲಿ ಆಯ್ಕೆ ಮಾಡಿದ್ದಾರೆ. ಯುವರಾಜ್ ಭಾರತ ಕಂಡಂತಹ ಶ್ರೇಷ್ಠ ಏಕದಿನ ಕ್ರಿಕೆಟ್ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ . ಜೊತೆಗೆ ಭಾರತದ 2011ರ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಆಟಗಾರರಾಗಿದ್ದರು. ಯುವರಾಜ್ ನಂತರ ಎಂ.ಎಸ್.ಧೋನಿ ನಂ.6ಕ್ಕೆ ಆಯ್ಕೆಯಾಗಿದ್ದಾರೆ.
ಧೋನಿ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಎಲ್ಲಾ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕರಾಗಿದ್ದಾರೆ.
ಅವರು ಕರೆದಾಗ ಆರ್‌ಸಿಬಿ ಬಿಟ್ಟು ಬೇರೆ ತಂಡ ಸೇರಲು ಸಿದ್ಧನಾಗಿದ್ದೆ ಆದರೆ ಈ ಕಾರಣದಿಂದ ಆಗಲಿಲ್ಲ ಎಂದ ಕೊಹ್ಲಿ

ಕಪಿಲ್ ದೇವ್, ಕುಂಬ್ಳೆ-ಭಜ್ಜಿ
ಆಲ್‌ರೌಂಡರ್ ಸ್ಥಾನದಲ್ಲಿ ಯುವರಾಜ್ ಜೊತೆಗೆ ಕಪಿಲ್ ದೇವ್, ಸ್ಪಿನ್ನರ್‌ಗಳ ಕೋಟಾದಲ್ಲಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ, ಟರ್ಬನೇಟರ್ ಖ್ಯಾತಿಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಸ್ಥಾನ ಪಡೆದಿದ್ದಾರೆ.
ಭಾರತದ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಅವರನ್ನು ವೆಂಕಟೇಶ್ ಪ್ರಸಾದ್ ಆಯ್ಕೆ ಮಾಡಿದ್ದು, ತನ್ನನ್ನು ಹೊರತುಪಡಿಸಿದ ವೇಗದ ಬೌಲರ್‌ನ ಕೊನೆಯ ಆಯ್ಕೆಯಾಗಿ 2011 ರ ವಿಶ್ವಕಪ್‌ನಲ್ಲಿ ಹೆಚ್ಚು ವಿಕೆಟ್ (21) ಪಡೆದ ಜಹೀರ್ ಖಾನ್‌ಗೆ ಅವಕಾಶ ನೀಡಿದ್ದಾರೆ.
IPL ಹರಾಜು 2022: ಸಿಎಸ್‌ಕೆ ಸಂಭಾವ್ಯ ಸ್ಕ್ವಾಡ್ ಹೀಗಿದೆ

ವೆಂಕಟೇಶ್ ಪ್ರಸಾದ್ ಸಾರ್ವಕಾಲಿಕ ಓಡಿಐ ಪ್ಲೇಯಿಂಗ್ 11
ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಮೊಹಮ್ಮದ್ ಅಜರುದ್ದೀನ್, ಯುವರಾಜ್ ಸಿಂಗ್, ಎಂಎಸ್ ಧೋನಿ, ಕಪಿಲ್ ದೇವ್, ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ಜಾವಗಲ್ ಶ್ರೀನಾಥ್, ಜಹೀರ್ ಖಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications