ಕೋಲ್ಕತ್ತಾ, ಏ. 6: ಐಪಿಎಲ್ ಕ್ರಿಕೆಟ್ ಹಬ್ಬಕ್ಕೆ ಭಾರತ ಸಜ್ಜಾಗಿದೆ. ಎಂಟನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಗೆ ಕೋಲ್ಕತ್ತಾದ ಸಾಲ್ಟ್ ಲೇಕ್ ಮೈದಾನದಲ್ಲಿ ಏಪ್ರಿಲ್ 7 ರಂದು ಸಂಜೆ ಅದ್ದೂರಿ ಚಾಲನೆ ದೊರೆಯಲಿದೆ.
ಬಾಲಿವುಡ್ ತಾರೆಯರು ಕಾರ್ಯಕ್ರಮದ ರಂಗು ಹೆಚ್ಚಿಸಲಿದ್ದಾರೆ. ನಟ ಸೈಫ್ ಅಲಿ ಖಾನ್ ಕಾರ್ಯಕ್ರಮ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ.[ಐಪಿಎಲ್ ಉದ್ಘಾಟನೆಯಲ್ಲಿ ಅನುಷ್ಕಾ ಹೆಜ್ಜೆ]

ಬಾಲಿವುಡ್ ತಾರೆಗಳಾದ ಶಾಹೀದ್ ಕಲೂರ್, ಅನುಷ್ಕಾ ಶರ್ಮಾ, ಹೃತ್ತಿಕ್ ರೋಶನ್, ಫರಾನ್ ಅಖ್ತರ್ ಹಾಗೂ ಅವರ ತಂಡ ವಿವಿಧ ಪ್ರದರ್ಶನ ನೀಡಲಿದ್ದು ಉದ್ಘಾಟನಾ ಕಾರ್ಯಕ್ರಮದ ಅಮಲು ಹೆಚ್ಚಿಸಲಿದೆ.
ಉದ್ಘಾಟನೆ ವೇಳೆ ಎಲ್ಲ 8 ತಂಡದ ನಾಯಕರು ಹಾಜರಿರಲಿದ್ದು ಕ್ರಿಕೆಟ್ ಸ್ಫೂರ್ತಿ ಕಾಪಾಡುವ ಪ್ರತಿಜ್ಞೆ ಸ್ವೀಕರಿಸಲಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಟ್ರೋಫಿಯನ್ನು ಹಿಂದಿರುಗಿಸಲಿದ್ದಾರೆ.[ಐಪಿಎಲ್ 8: 47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್]
ಎರಡು ತಾಸಿನ ಉದ್ಘಾಟನಾ ಕಾರ್ಯಕ್ರಮ ಸರಿಯಾಗಿ 7.30ಕ್ಕೆ ಆರಂಭವಾಗಲಿದ್ದು, 5 ಗಂಟೆಯಿಂದ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಆನ್ ಲೈನ್ ಮೂಲಕ ಟಿಕೆಟ್ ಖರೀದಿಸಬಹುದಾಗಿದ್ದು ಸೋನಿ ಮಾಕ್ಸ್ ಮತ್ತು ಸೋನಿ ಸಿಕ್ಸ್ ನಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗುತ್ತದೆ.
ಉದ್ಘಾಟನಾ ಸಂಜೆಯ ವಿವರಗಳು
ದಿನಾಂಕ: ಏಪ್ರಿಲ್ 7
ಸಮಯ: ಸಂಜೆ 7.30
ಸ್ಥಳ: ಸಾಲ್ಟ್ ಲೇಕ್ ಮೈದಾನ, ಕೋಲ್ಕತ್ತಾ
ನೇರ ಪ್ರಸಾರ: ಸೋನಿ ಮಾಕ್ಸ್ ಮತ್ತು ಸೋನಿ ಸಿಕ್ಸ್
ಎಲ್ಲ ಎಂಟು ತಂಡಗಳ ನಾಯಕರ ಉಪಸ್ಥಿತಿ