For Quick Alerts
ALLOW NOTIFICATIONS  
For Daily Alerts
 

ಸಚಿನ್ ಬ್ಲಾಸ್ಟರ್ಸ್ vs ವಾರ್ನ್ ವಾರಿಯರ್ಸ್ ಫುಲ್ ಗೈಡ್

By Mahesh

ಬೆಂಗಳೂರು, ಅ.07: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ಶೇನ್ ವಾರ್ನ್ ಅವರ ಕನಸಿನ ಕ್ರಿಕೆಟ್ ಟೂರ್ನಿಯ ವಿನ್ಯಾಸ ಈಗ ಪ್ರಕಟವಾಗಿದೆ. ಅಮೆರಿಕದ ನೆಲದಲ್ಲಿ ಬೇಸ್ ಬಾಲ್ ಅಲ್ಲದೆ, ಕ್ರಿಕೆಟ್ ಚೆಂಡು ಇನ್ಮುಂದೆ ಹೆಚ್ಚಾಗಿ ಪುಟಿದೇಳಲಿದೆ. ಸಚಿನ್ ತಂಡದಲ್ಲಿ ಯಾರಿದ್ದಾರೆ? ವಾರ್ನ್ ಪಡೆ ಹೇಗಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.

ಬಹುನಿರೀಕ್ಷಿತ 'ಕ್ರಿಕೆಟ್ ಆಲ್ ಸ್ಟಾರ್ ಸರಣಿ' ಅಮೆರಿಕದ ಮೂರು ನಗರಗಳಲ್ಲಿ ನವೆಂಬರ್ ನಿಂದ ನಡೆಯಲಿದೆ. ಸಚಿನ್ ಹಾಗೂ ವಾರ್ನ್ ತಂಡಕ್ಕೆ ಹೆಸರು ಸಿಕ್ಕಿದ್ದು, ಸಚಿನ್ ಬ್ಲಾಸ್ಟರ್ಸ್ ಹಾಗೂ ವಾರ್ನೆ ವಾರಿಯರ್ಸ್ ನಡುವಿನ ಕದನಕ್ಕೆ ಕ್ರಿಕೆಟ್ ಪ್ರೇಮಿಗಳು ಕಾದಿದ್ದಾರೆ. ಯಾವ ತಂಡಕ್ಕೆ ಯಾವ ಆಟಗಾರರು ಎಂಬುದು ಇನ್ನೂ ನಿರ್ಧಾರವಾಗಿಲ್ಲ, ವೇಳಾಪಟ್ಟಿ ಮಾತ್ರ ಪ್ರಕಟಿಸಲಾಗಿದೆ.

All you need to know about All Stars Series

ಸಚಿನ್ ತೆಂಡೂಲ್ಕರ್, ಶೇನ್ ವಾರ್ನ್ ಅಲ್ಲದೆ ಬ್ರಿಯಾನ್ ಲಾರಾ, ರಿಕಿ ಪಾಂಟಿಂಗ್, ರಾಹುಲ್ ದ್ರಾವಿಡ್, ವಾಸಿಂ ಅಕ್ರಂ ಸೇರಿದಂತೆ ಅನೇಕ ಮಾಜಿ ಕ್ರಿಕೆಟರ್ಸ್ ಟ್ವೆಂಟಿ20 ಕದನದಲ್ಲಿ ಪಾಲ್ಗೊಳ್ಳಲಿದ್ದಾರೆ. ನ್ಯೂಯಾರ್ಕ್ ನಲ್ಲಿ ನವೆಂಬರ್ 7ರಿಂದ ಟೂರ್ನಿ ಆರಂಭಗೊಳ್ಳಲಿದೆ. [ಆಲ್ ಸ್ಟಾರ್ ಲೀಗ್ ಗೆ ಐಸಿಸಿ ಮಾನ್ಯತೆ]

ಅಮೆರಿಕದಲ್ಲಿ ಕ್ರಿಕೆಟ್ ಕ್ರೀಡೆಯನ್ನು ಇನ್ನಷ್ಟು ಜನಪ್ರಿಯಗೊಳಿಸುವುದು ನಮ್ಮ ಗುರಿ. ಬೇಸ್​ಬಾಲ್ ಬ್ಯಾಟ್ ಜತೆ ಜೊತೆಗೇ ಕ್ರಿಕೆಟ್ ಬ್ಯಾಟ್ ಕೂಡ ಅವರ ಪ್ರಮುಖ ಆಯ್ಕೆಯಾಗಬೇಕು ಎಂದು ಸಚಿನ್ ಹೇಳಿದ್ದಾರೆ.

ಮುಂಬರುವ ನವೆಂಬರ್​ನಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಜತೆಗೂಡಿ 10 ದಿನಗಳ ಕಾಲ ಮೂರು ನಗರಗಳಲ್ಲಿ ನಡೆಯುವ ಕ್ರಿಕೆಟ್ ಆಲ್ ಸ್ಟಾರ್ ಪ್ರದರ್ಶನ ಪ್ರವಾಸದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸುಮಾರು 25 ವರ್ಷಗಳ ಕಾಲ ಕ್ರಿಕೆಟ್ ಆಡಿದ ಅನುಭವವಿರುವ ಆಟಗಾರರು ಈ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟೂರ್ನಿಯ ಮಾರ್ಗದರ್ಶಿ ಇಲ್ಲಿದೆ:

ತಂಡಗಳು:
* ಸಚಿನ್ ಅವರ ಬ್ಲಾಸ್ಟರ್ಸ್
* ವಾರ್ನ್ ಅವರ ವಾರಿಯರ್ಸ್

 Sachin's Blasters Vs Warne's Warriors

ಪಾಲ್ಗೊಳ್ಳಲಿರುವ ಆಟಗಾರರು:
* ಸಚಿನ್ ತೆಂಡೂಲ್ಕರ್ (ಭಾರತ)
* ಶೇನ್ ವಾರ್ನ್ (ಆಸ್ಟ್ರೇಲಿಯಾ)
* ಸೌರವ್ ಗಂಗೂಲಿ (ಭಾರತ)
* ವಿವಿಎಸ್ ಲಕ್ಷ್ಮಣ್ (ಭಾರತ)
* ಶಾನ್ ಪೊಲ್ಲಾಕ್ (ದಕ್ಷಿಣ ಆಫ್ರಿಕಾ)
* ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ)
* ಲ್ಯಾನ್ಸ್ ಕ್ಲುಸ್ನೆರ್ (ದಕ್ಷಿಣ ಆಫ್ರಿಕಾ)
* ಜಾಂಟಿ ರೋಡ್ಸ್ (ದಕ್ಷಿಣ ಆಫ್ರಿಕಾ)
* ಮಹೇಲ ಜಯವರ್ದನೆ (ಶ್ರೀಲಂಕಾ)
* ಕುಮಾರ್ ಸಂಗಕ್ಕಾರ (ಶ್ರೀಲಂಕಾ)
* ಮುತ್ತಯ್ಯ ಮುರಳಿಧರನ್ (ಶ್ರೀಲಂಕಾ)
* ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ)
* ಗ್ರಹಾಂ ಸ್ವಾನ್ (ಇಂಗ್ಲೆಂಡ್)
* ಕೊರ್ಟ್ನಿ ವಾಲ್ಶ್ (ವೆಸ್ಟ್ ಇಂಡೀಸ್)
* ಅಲಾನ್ ಡೊನಾಲ್ಡ್ (ದಕ್ಷಿಣ ಆಫ್ರಿಕಾ)
* ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)
* ಕರ್ಟ್ಲಿ ಅಂಬ್ರೋಸ್ (ವೆಸ್ಟ್ ಇಂಡೀಸ್)
* ಕಾರ್ಲ್ ಹೂಪರ್ (ವೆಸ್ಟ್ ಇಂಡೀಸ್)
* ಡೇನಿಯಲ್ ವೆಟ್ಟೋರಿ (ನ್ಯೂಜಿಲೆಂಡ್)
* ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)
* ಬ್ರಾಡ್ ಹಡ್ಡೀನ್ (ಆಸ್ಟ್ರೇಲಿಯಾ)
* ಗ್ಲೆನ್ ಮೆಗ್ರಾ (ಆಸ್ಟ್ರೇಲಿಯಾ)
* ಮೈಕಲ್ ವಾಗನ್ (ಇಂಗ್ಲೆಂಡ್)
* ವಾಸೀಂ ಅಕ್ರಮ್ (ಪಾಕಿಸ್ತಾನ)
* ಮೋಯಿನ್ ಖಾನ್ (ಪಾಕಿಸ್ತಾನ)
* ಶೋಯಿಬ್ ಅಕ್ತರ್ (ಪಾಕಿಸ್ತಾನ)
* ಸಕ್ಲೇನ್ ಮುಷ್ತಾಕ್ (ಪಾಕಿಸ್ತಾನ)

ಕ್ರೀಡಾಂಗಣಗಳು:
* ಸಿಟಿ ಫೀಲ್ಡ್, ನ್ಯೂಯಾರ್ಕ್ (45,000 ಪ್ಲಸ್ ಸೀಟು ಸಾಮರ್ಥ್ಯ)
* ಮಿನಿಟ್ ಮೇಡ್ ಪಾರ್ಕ್, ಹೋಸ್ಟನ್, ಟೆಕ್ಸಾಸ್ (40,000 ಪ್ಲಸ್ ಸೀಟು ಸಾಮರ್ಥ್ಯ)
* ಡಡ್ಜರ್ಸ್ ಸ್ಟೇಡಿಯಂ, ಲಾಸ್ ಏಂಜಲೀಸ್ (56,000 ಪ್ಲಸ್ ಸಾಮರ್ಥ್ಯ)

* ಪಂದ್ಯ 1:
ನವೆಂಬರ್ 7: 1 PM ಈಸ್ಟರ್ನ್ ಟೈಮ್ (10.30 PM IST)
* ಪಂದ್ಯ 2: ನವೆಂಬರ್ 11: 2 PM ಈಸ್ಟರ್ನ್ ಟೈಮ್ (12.30 PM IST ಮುಂದಿನ ದಿನಕ್ಕೆ)
* ಪಂದ್ಯ 3: ನವೆಂಬರ್ 7: 6.30 PM ಈಸ್ಟರ್ನ್ ಟೈಮ್ (7.30 PM ISTಮುಂದಿನ ದಿನಕ್ಕೆ)
* ನವೆಂಬರ್ 7 ನ್ಯೂಯಾರ್ಕ್ ನಲ್ಲಿ ಪಂದ್ಯ ಆರಂಭ ನವೆಂಬರ್ 14ರಂದು ಲಾಸ್ ಏಂಜಲೀಸ್ ನಲ್ಲಿ ಮುಕ್ತಾಯ.
* ಆನ್ ಲೈನ್ ಟಿಕೆಟ್ ಬುಕ್ಕಿಂಗ್ ವಿವರ ಗಳಿಗೆ ಕ್ಲಿಕ್ ಮಾಡಿ
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+