ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ ಟಿ 20 ಫುಲ್ ಗೈಡ್
ದುಬೈ,ಮ, ಜೂ.08: ಐಪಿಎಲ್, ಐಸಿಎಲ್ ಹಾಗೂ ಬಿಗ್ ಬ್ಯಾಷ್, ಕೆರಬಿಯನ್ ಲೀಗ್ ನಂತರ ಮತ್ತೊಂದು ಟಿ20 ಸಮರ ಆರಂಭವಾಗುತ್ತಿರುವ ವಿಷಯ ಕ್ರಿಕೆಟ್ ಅಭಿಮಾನಿಗಳೇ ಗೊತ್ತೇ ಇದೆ. ಈಗ ಮಾಸ್ಟರ್ಸ್ ಕ್ರಿಕೆಟ್ ಲೀಗ್ ಟೂರ್ನಿಯನ್ನು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಡೀನ್ ಜೋನ್ಸ್ ಅವರ ಕಂಪನಿ ಹಾಗೂ ಜಿಎಂ ಸ್ಫೋರ್ಟ್ಸ್ ಆಯೋಜಿಸುತ್ತಿದ್ದಾರೆ. ಈ ಟೂರ್ನಿಯ ಬಗ್ಗೆ ಮಾರ್ಗದರ್ಶಿ ಇಲ್ಲಿದೆ.
ದುಬೈನಲ್ಲಿ ಇತ್ತೀಚೆಗೆ ಎಂಸಿಎಲ್ ಲೋಗೋ ಅನಾವರಣಗೊಂಡಿತ್ತು. ಬ್ರಿಯಾನ್ ಲಾರಾ, ಆಡಂ ಗಿಲ್ ಕ್ರಿಸ್ಟ್ , ಅಲಾನ್ ಬಾರ್ಡರ್, ರಮೀಜ್ ರಾಜಾ ಸೇರಿದಂತೆ ಮಾಜಿ ಆಟಗಾರರು ಮತ್ತೊಮ್ಮೆ ಬ್ಯಾಟ್ ಬೀಸಲಿದ್ದಾರೆ.
ಮಾಸ್ಟರ್ ಕ್ರಿಕೆಟ್ ಲೀಗ್ ಗೆ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಅನುಮತಿ ನೀಡಿರುವುದರಿಂದ ಈ ಲೀಗ್ ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮಾನ್ಯತೆ ಕೂಡಾ ಸಿಕ್ಕಿದೆ. [ಐಪಿಎಲ್, ಐಸಿಎಲ್, ಬಿಗ್ ಬ್ಯಾಷ್ ನಂತರ ಎಂಸಿಎಲ್]

ಮಾಸ್ಟರ್ಸ್ ಕ್ರಿಕೆಟ್ ಲೀಗ್ ಟಿ 20 ಟೂರ್ನಿಯ ಮಾರ್ಗದರ್ಶಿ ಇಲ್ಲಿದೆ:
ಟೂರ್ನಿಯ ಹೆಸರು: ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ (ಎಂಸಿಎಲ್)
ಟೂರ್ನಿ ಆಯೋಜಕರು: ಡೀನ್ ಜೋನ್ಸ್ ಅವರ ಕಂಪನಿ ಹಾಗೂ ಜಿಎಂ ಸ್ಫೋರ್ಟ್ಸ್ 10 ವರ್ಷಕ್ಕೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಮಾನ್ಯತೆ.
ಪಂದ್ಯಗಳು ಎಲ್ಲಿ ನಡೆಯಲಿವೆ?
* ಅಬುದಾಬಿ, ಶೇಕ್ ಝೈದ್ ಕ್ರಿಕೆಟ್ ಸ್ಟೇಡಿಯಂ,
* ದುಬೈ, ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ
* ಶಾರ್ಜಾ, ಶಾರ್ಜಾ ಕ್ರಿಕೆಟ್ ಸ್ಟೇಡಿಯಂ
ಯಾವಾಗ ಆರಂಭ?
ಫೆಬ್ರವರಿ 2016ರಿಂದ ಆರಂಭ 2 ವಾರಗಳ ಕಾಲ ಟಿ 20 ಮಾದರಿ ಪಂದ್ಯಗಳು.
ತಂಡಗಳು
ಒಟ್ಟು 6 ತಂಡಗಳು, ಪ್ರತಿ ತಂಡದಲ್ಲೂ 15 ಆಟಗಾರರಿರುತ್ತಾರೆ ( 2 ಐಕಾನ್ ಆಟಗಾರರು ಪ್ಲಸ್ 13). ಐಪಿಎಲ್ ಮಾದರಿಯಲ್ಲೇ ಫ್ರಾಂಚೈಸಿ ಆಟಗಾರರ ಹರಾಜು ನಡೆಯಲಿದೆ.
ಒಟ್ಟು ಎಷ್ಟು ಆಟಗಾರರು
ಒಟ್ಟಾರೆ 90 ಆಟಗಾರರು (ಎಲ್ಲರೂ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತಿ ಹೊಂದಿರಬೇಕು)
ಐಕಾನ್ ಆಟಗಾರರು
ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಡಂ ಗಿಲ್ ಕ್ರಿಸ್ಟ್, ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಂ ಮತ್ತು ದಕ್ಷಿಣ ಆಫ್ರಿಕಾ ಆಲ್‍ರೌಂಡರ್ ಜ್ಯಾಕ್ ಕಾಲೀಸ್. [ಸಚಿನ್- ವಾರ್ನ್ ಲೀಗ್ ಗೆ ಐಸಿಸಿ ಮಾನ್ಯತೆ]
ಎಂಸಿಎಲ್ ಅಧ್ಯಕ್ಷ: ಅಬ್ದುಲ್ ರಹಮಾನ್ ಫಲಕ್ನಾಜ್
ಎಂಸಿಎಲ್ ಚೇರ್ಮನ್ : ಜಾಫರ್ ಶಾ
ಎಂಸಿಎಲ್ ಟ್ವಿಟ್ಟರ್ : @MCL2020UAE
ಎಂಸಿಎಲ್ ಹ್ಯಾಶ್ ಟ್ಯಾಗ್ : #MCL2020UAE
(ಒನ್ ಇಂಡಿಯಾ ಕನ್ನಡ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications