Champions Trophy: ಅಫ್ಘಾನಿಸ್ತಾನ ತಂಡದಿಂದ ಮಿಸ್ಟರಿ ಸ್ಪಿನ್ನರ್ ಔಟ್
ಫೆಬ್ರವರಿ 19 ರಿಂದ ಪ್ರಾರಂಭವಾಗುವ ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಒಂದರ ನಂತರ ಒಂದರಂತೆ ಕೆಟ್ಟ ಸುದ್ದಿಗಳು ಬರುತ್ತಿವೆ. ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಭಾರತಕ್ಕೆ ಶಾಕ್ ನೀಡಿದರು. ಈಗ ಅಫ್ಘಾನಿಸ್ತಾನಕ್ಕೆ ಕೆಟ್ಟ ಸುದ್ದಿ ಬಂದಿದೆ. ತಂಡದ ಸ್ಪಿನ್ ಮಾಸ್ಟರ್ ಅಲ್ಲಾ ಘಜನ್‌ಫರ್ ಅವರನ್ನು 2025ರ ಚಾಂಪಿಯನ್ಸ್ ಟ್ರೋಫಿ ತಂಡದಿಂದ ಕೈಬಿಡಲಾಗಿದೆ. ಇದನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯೇ (ಎಸಿಬಿ) ದೃಢಪಡಿಸಿದೆ.
ಅಫ್ಘಾನಿಸ್ತಾನದ ಯುವ ಸ್ಪಿನ್ ಬೌಲರ್ ಅಲ್ಲಾ ಘಜನ್‌ಫರ್ ಗಾಯಗೊಂಡಿರುವ ಕಾರಣ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ. ಅವರು ಜಿಂಬಾಬ್ವೆ ಪ್ರವಾಸದ ಸಮಯದಲ್ಲಿ ಗಾಯಗೊಂಡಿದ್ದರು. ಇದೀಗ ಚೇತರಿಕೆ ಹಂತದಲ್ಲಿರುವ ಅವರಿಗೆ ಸುಮಾರು 4 ತಿಂಗಳು ಬೆಡ್ ರೆಸ್ಟ್ ಬೇಕಾಗಿದೆ. ಹೀಗಾಗಿ ಅಫ್ಘಾನಿಸ್ತಾನ ತಂಡದಿಂದ ಕೈ ಬಿಡಲಾಗಿದೆ. ಅಲ್ಲಾ ಘಜನ್‌ಫರ್ ಬದಲಿಗೆ ಮೀಸಲು ಆಟಗಾರ ನಂಗ್ಯಾಲ್ ಖರೋಟಿ ಅವರನ್ನು ತಂಡದಲ್ಲಿ ಸೇರಿಸಲಾಗಿದೆ ಎಂದು ಎಸಿಬಿ ತಿಳಿಸಿದೆ.

ಘಜನ್‌ಫರ್ ಹೊರತುಪಡಿಸಿ, ಮುಜೀಬ್ ಉರ್ ರೆಹಮಾನ್ ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಏಕದಿನ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ ಎಂದು ಎಸಿಬಿ ಮಾಹಿತಿ ಹಂಚಿಕೊಂಡಿದೆ. ಈ ಬಾರಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಹಲವು ತಂಡಗಳ ಸ್ಟಾರ್ ಆಟಗಾರರು ಹೊರಗುಳಿದಿದ್ದಾರೆ. ಆಸ್ಟ್ರೇಲಿಯಾ ತಂಡದ ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವುಡ್, ಮಿಚೆಲ್ ಮಾರ್ಷ್, ಕ್ಯಾಮರೂನ್ ಗ್ರೀನ್ ಮತ್ತು ಮಿಚೆಲ್ ಮಾರ್ಷ್, ಟೀಮ್ ಇಂಡಿಯಾದ ಜಸ್ಪ್ರೀತ್ ಬುಮ್ರಾ ಈ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ಘಜನ್‌ಫರ್ ಯಾರು?
ಅಲ್ಲಾ ಘಜನ್‌ಫರ್ ಅಫ್ಘಾನಿಸ್ತಾನದ ಪ್ರಮುಖ ಸ್ಪಿನ್ನರ್‌ಗಳಲ್ಲಿ ಒಬ್ಬರು. ಕೇವಲ 18 ವರ್ಷ ವಯಸ್ಸಿನ ಘಜನ್‌ಫರ್, ಡಿಸೆಂಬರ್ 2024 ರಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇದಾದ ನಂತರ ಅವರು ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಎಲ್ಲರ ಚಿತ್ತ ಕದ್ದಿದ್ದಾರೆ. ಅವರು ಇಲ್ಲಿಯವರೆಗೆ ಕೇವಲ 11 ಏಕದಿನ ಪಂದ್ಯಗಳನ್ನು ಆಡಿದ್ದು, 21 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಅತ್ಯುತ್ತಮ ಪ್ರದರ್ಶನವೆಂದರೆ 26 ರನ್‌ಗಳಿಗೆ 6 ವಿಕೆಟ್‌ಗಳು. ತಂಡದಲ್ಲಿ ಸ್ಥಾನ ಪಡೆಯಲು ಚಾಂಪಿಯನ್ಸ್ ಟ್ರೋಫಿ ಅವರಿಗೆ ಒಂದು ಸುವರ್ಣಾವಕಾಶವಾಗಿತ್ತು. ಆದರೆ ಗಾಯಗೊಂಡಿರುವ ಪರಿಣಾಮ ಹೊರಗುಳಿಬೇಕಾಗಿದೆ.
ಅಫ್ಘಾನಿಸ್ತಾನ ತಂಡ
ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮತ್ ಶಾ (ಉಪನಾಯಕ), ರಹಮಾನಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ಸೆಡಿಕುಲ್ಲಾ ಅಟಲ್, ಅಜ್ಮತುಲ್ಲಾ ಉಮರ್ಜೈ, ಮೊಹಮ್ಮದ್ ನಬಿ, ಗುಲ್ಬಾದಿನ್ ನಯಬ್, ರಶೀದ್ ಖಾನ್, ನಂಗ್ಯಾಲ್ ಖರೋಟಿ, ನೂರ್ ಅಹ್ಮದ್, ಫಜಲ್ ಹಕ್ ಫಾರೂಕಿ, ನವೀದ್ ಜದ್ರಾನ್ ಮತ್ತು ಫರೀದ್ ಅಹ್ಮದ್ ಮಲಿಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications