Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

alzarri joseph: ಮಾಜಿ ಆರ್‌ಸಿಬಿ ಪ್ಲೇಯರ್‌ಗೆ ಐಸಿಸಿ ದಂಡ

ಆರ್‌ಸಿಬಿ ಮಾಜಿ ಆಟಗಾರನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ( ಐಸಿಸಿ) ಛಾಟಿ ಬೀಸಿದೆ. ವೆಸ್ಟ್ ಇಂಡೀಸ್ ವೇಗದ ಬೌಲರ್ ಅಲ್ಜಾರಿ ಜೋಸೆಫ್ ವಿರುದ್ಧ ಐಸಿಸಿ ಮಂಗಳವಾರ ಕಠಿಣ ಕ್ರಮ ಕೈಗೊಂಡಿದೆ. ಬಾಂಗ್ಲಾದೇಶ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ವಿಂಡೀಸ್‌ ಪ್ಲೇಯರ್‌ ಅಲ್ಜಾರಿ ಜೋಸೆಫ್‌ ದೋಷಿ ಎಂಬುದು ಸಾಬೀತಾಗಿದೆ. ಈ ಹಿನ್ನೆಲೆ ಐಸಿಸಿ ಜೋಸೆಫ್‌ ವಿರುದ್ಧ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಂಡಿದೆ. ಇವರಿಗೆ ಪಂದ್ಯದ ಶುಲ್ಕದ ಶೇ.25ರಷ್ಟು ದಂಡ ವಿಧಿಸಿದೆ.

ಬಾಂಗ್ಲಾದೇಶ, ವೆಸ್ಟ್‌ ಇಂಡೀಸ್ ಪ್ರವಾಸದಲ್ಲಿದೆ. ಈ ವೇಳೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದೆ. ಉಭಯ ದೇಶಗಳ ನಡುವಣ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ವಿಂಡೀಸ್ ಪ್ಲೇಯರ್‌ ನಾಲ್ಕನೇ ಅಂಪೈರ್‌ ಜೊತೆ ವಾಗ್ವಾದ ನಡೆಸಿ ಆಕ್ಷೇಪಾರ್ಹ ಪದ ಬಳಸಿದ್ದಾರೆ. ಅಲ್ಲದೆ ಮೈದಾನದಲ್ಲಿ ಇವರು ಸ್ಪೈಕ್‌ ಶೂ ಧರಿಸಿ ಇಳಿದಿದ್ದರು. ಇದನ್ನು ಕಂಡು ಅಂಪೈರ್‌ ಅವರೊಂದಿಗೆ ಮಾತಿಗೆ ಇಳಿದರು. ಈ ವೇಳೆ ಅವರೊಂದಿಗೆ ಅವರು ಮಾತುಕತೆ ನಡೆಸಿದ್ದಾರೆ. ಈ ಹಿನ್ನೆಲೆಯ ಅವರಿಗೆ ದಂಡ ವಿಧಿಸಲಾಗಿದೆ.

alzarri joseph Fined by ICC for Code of Conduct Violation in 1st ODI Against Bangladesh

ತಪ್ಪು ಒಪ್ಪಿಕೊಂಡ ಜೋಸೆಫ್‌

ಜೋಸೆಫ್‌ ತಮ್ಮ ಮೇಲಿನ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ತಮ್ಮ ಮೇಲೆ ವಿಧಿಸಿದ್ದ ದಂಡವನ್ನು ಸ್ವೀಕರಿಸಿದ್ದಾರೆ. ಐಸಿಸಿ ಜೋಸೆಫ್‌ ಅವರ ವರ್ತನೆಯನ್ನು ನೀತಿ ಸಂಹಿತೆಯ ಸೆಕ್ಷನ್‌ 2.3 ರ ಉಲ್ಲಂಘಿಸಲಾಗಿದೆ. ಇವರಿಗೆ ಪಂದ್ಯದ ಶುಲ್ಕದ ಶೇಕಡಾ 25 ರಷ್ಟು ದಂಡವನ್ನು ವಿಧಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಜೋಸೆಫ್‌ ಇದೇ ಮೊದಲ ಬಾರಿಗೆ ಇಂತಹ ಅಪರಾದ ಮಾಡಿದ್ದರಿಂದ ಅವರ ಖಾತೆಗೆ ಒಂದು ಡಿಮೆರಿಟ್‌ ಅಂಕವನ್ನು ಸಹ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.

ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಅಲ್ಜಾರಿ ಜೋಸೆಫ್‌ ಅವರು ಅಮೋಘ ಪ್ರದರ್ಶನ ನೀಡಿ ಮಿಂಚಿದ್ದರು. ಇವರು ಮೊದಲ ಟೆಸ್ಟ್‌ನಲ್ಲಿ 5 ವಿಕೆಟ್‌, ಎರಡನೇ ಟೆಸ್ಟ್‌ನಲ್ಲಿ 4 ವಿಕೆಟ್‌ ಕಬಳಿಸಿದ್ದರು. ಅಲ್ಲದೆ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಇವರು 2 ವಿಕೆಟ್‌ ಕಬಳಿಸಿ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದ್ದರು.

ಅಲ್ಜಾರಿ ಜೋಸೆಫ್‌ ಅವರನ್ನು ಐಪಿಎಲ್‌ 2024ರಲ್ಲಿ ಆರ್‌ಸಿಬಿ ಪರ ಆಡಿ ಸೈ ಎನಿಸಿಕೊಂಡಿದ್ದರು. ಇವರು ಆಡಿದ ಮೂರು ಪಂದ್ಯಗಳಲ್ಲಿ 1 ವಿಕೆಟ್‌ ಕಬಳಿಸಿದ್ದರು. ಐಪಿಎಲ್‌ 2025ರ ಮೆಗಾ ಹರಾಜಿನಲ್ಲಿ ಇವರು ಅನ್‌ಸೋಲ್ಡ್‌ ಆಗಿದ್ದರು. ಇವರನ್ನು ಕೊಳ್ಳಲು ಯಾವುದೇ ಫ್ರಾಂಚೈಸಿ ಮನಸ್ಸು ಮಾಡಲಿಲ್ಲ.

ಜೋಸೆಫ್‌ ಸಾಧನೆ

28 ವರ್ಷದ ಅಲ್ಜಾರಿ ಜೋಸೆಫ್‌ ಅವರು ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಯಲ್ಲಿ ವೆಸ್ಟ್‌ ಇಂಡೀಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರು ವಿಂಡೀಸ್ ಪರ ಆಡಿದ 37 ಟೆಸ್ಟ್‌ ಪಂದ್ಯಗಳಲ್ಲಿ 111 ವಿಕೆಟ್‌ ಪಡೆದರೆ, 74 ಏಕದಿನ ಪಂದ್ಯಗಳಲ್ಲಿ 121 ವಿಕೆಟ್‌, 35 ಟಿ20 ಪಂದ್ಯಗಳಲ್ಲಿ 52 ವಿಕೆಟ್‌ ಕಬಳಿಸಿದ್ದಾರೆ.

Story first published: Tuesday, December 10, 2024, 21:25 [IST]
Other articles published on Dec 10, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+