ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯಲ್ಲಿ ಭಾರತೀಯ ಮೂಲದ ಯುವ ಸ್ಪಿನ್ನರ್

Amar Virdi Hopes To Follow Monty Panesar Into England Team

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಇಂಗ್ಲೆಂಡ್‌ ತಂಡದಲ್ಲಿ ಭಾರತೀಯ ಮೂಲದ ಆಟಗಾರನೋರ್ವ ಅವಕಾಶವನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಆಫ್ ಸ್ಪಿನ್ನರ್ ಆಗಿ ಇಂಗ್ಲೆಂಡ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಿಂಚಿರುವ ಅಮರ್ ವಿರ್ಡಿ ಇಂಗ್ಲೆಂಡ್ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ವಿರ್ಡಿ ಸ್ಥಾನ ಪಡೆದರೆ ಮಾಂಟಿ ಪೆನೆಸರ್ ಮತ್ತು ರವಿ ಬೋಪಾರ ನಂತರ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಮೂರನೇ ಸಿಖ್ ಆಟಗಾರನಾಗಲಿದ್ದಾರೆ. 21ರ ಹರೆಯದ ವಿರ್ಡಿ ತಮ್ಮ ವೃತ್ತಿ ಜೀವನದಲ್ಲಿ ಕೇವಲ 23 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ವೆಸ್ಟ್ ಇಂಡೀಸ್ ವಿರುದ್ಧ ಜುಲೈ 8ರಿಂದ ಆರಂಭವಾಗಲಿರುವ ಟೆಸ್ಟ್ ತಂಡಕ್ಕೆ ಆಯ್ಕೆಯಾಗುವ ವಿಶ್ವಾಸದಲ್ಲಿದ್ದಾರೆ.

ಪಾಕ್ ನಾಯಕ ಬಾಬರ್ ಅಝಮ್‌ಗೆ ಸಾನಿಯಾ ಮಿರ್ಜಾ ಬೆದರಿಕೆ ಹಾಕಿದ್ದೇಕೆ?ಪಾಕ್ ನಾಯಕ ಬಾಬರ್ ಅಝಮ್‌ಗೆ ಸಾನಿಯಾ ಮಿರ್ಜಾ ಬೆದರಿಕೆ ಹಾಕಿದ್ದೇಕೆ?

ಇನ್ನು ಅಮರ್ ವಿರ್ಡಿಗೆ ಇಂಗ್ಲೆಂಡ್ ತಂಡದಲ್ಲಿ ದೊಡ್ಡ ಸ್ಪರ್ಧೆಯೇ ಇದೆ. ಟೆಸ್ಟ್ ತಂಡಕ್ಕೆ ಪ್ರವೇಶಿಸಲು ಜಾಕ್ ಲೀಚ್, ಡೊಮ್ ಬೆಸ್, ಮ್ಯಾಟ್ ಪಾರ್ಕಿನ್ಸ್ನ್ ಮತ್ತು ಮೊಯಿನ್ ಅಲಿ ಅವರಂತ ಅನುಭವಿ ಸ್ಪಿನ್ನರ್‌ಗಳನ್ನು ಹಿಂದಿಕ್ಕಬೇಕಾಗಿದೆ.

ವೆಸ್ಟ್ ಇಂಡೀಸ್ ಸರಣಿಗೆ ಆಯ್ಕೆ ಮಾಡಿರುವ ಅಂತಿಮ 30 ಆಟಗಾರರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಅಮರ್ ವಿರ್ಡಿ 'ನಿಸ್ಸಂಶಯವಾಗಿ ನಾನು ಆಡುವ ಸಲುವಾಗಿಯೇ ಈ ಅಂತಿಮ 30ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದೇನೆ, ತಂಡದಲ್ಲಿ ಸ್ಥಾನವನ್ನು ಪಡೆಯಲು ಕಠಿಣ ಪರಿಶ್ರಮವನ್ನು ಪಡುತ್ತಿದ್ದೇನೆ' ಎಂದಿದ್ದಾರೆ.

 ಟೀಮ್ ಇಂಡಿಯಾಗೆ ಹೊಸ ಕಿಟ್ ಪ್ರಾಯೋಜಕತ್ವ? : ನೈಕಿ ಜೊತೆಗಿನ ಒಪ್ಪಂದ ಅಂತ್ಯ ಸಾಧ್ಯತೆ ಟೀಮ್ ಇಂಡಿಯಾಗೆ ಹೊಸ ಕಿಟ್ ಪ್ರಾಯೋಜಕತ್ವ? : ನೈಕಿ ಜೊತೆಗಿನ ಒಪ್ಪಂದ ಅಂತ್ಯ ಸಾಧ್ಯತೆ

ಮೊದಲ ಟೆಸ್ಟ್ ಪಂದ್ಯದಲ್ಲಿ ನಾನು ಖಂಡಿತವಾಗಿಯೂ ಆಡಲು ಬಯಸುತ್ತೇನೆ, ಅಥವಾ ತಂಡದಲ್ಲಿ ನಾನು ಇರಬೇಕು ಎಂದು ವಿರ್ಡಿ ಹೇಳಿದ್ದಾರೆ. 23 ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರು 28.78ರ ಸರಾಸರಿಯಲ್ಲಿ 69 ವಿಕೆಟ್‌ಗಳನ್ನು ಪಡೆದಿರುವ ಅಮರ್ ವಿರ್ಡಿ ತಾನು ಯಾವಾಗಲೂ ವಿಕೆಟ್ ಪಡೆಯಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

Story first published: Sunday, June 28, 2020, 15:45 [IST]
Other articles published on Jun 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X