For Quick Alerts
ALLOW NOTIFICATIONS  
For Daily Alerts
 

ಭಾರತೀಯ ಕ್ರಿಕೆಟ್‌ ಇತಿಹಾಸದ ಈ ಕಾಕತಾಳೀಯ ಸಂಗತಿ ನಿಮ್ಮನ್ನು ಅಚ್ಚರಿಗೀಡುಮಾಡುತ್ತೆ!

Amazing interesting coincidence in India Cricket Histery

ಬೆಂಗಳೂರು: ಕಾಕಾತಾಳೀಯ ಸಂಗತಿಗಳೆಂದರೆ ಯಾವತ್ತಿಗೂ ಹಾಗೇನೆ. ಅವು ಘಟಿಸೋ ಸಂಗತಿಗಳು ನಮ್ಮನ್ನು ಬೆರಗುಗೊಳಿಸುತ್ತಿರುತ್ತವೆ. ಪರೀಕ್ಷೆಗೆ ಓದಿಕೊಂಡು ಹೋಗಿರದ ದಿನವೇ ಜೋರು ಮಳೆ ಸುರಿದು ಪರೀಕ್ಷೆ ರದ್ದಾಗುತ್ತದೆ, ಮೇಲೆ ಹಾರಿ ಹೋಗುತ್ತಿದ್ದ ಏಕಾಂಗಿ ಕಾಗೆ ಕೆಳಗೆ ಅಷ್ಟೆಲ್ಲಾ ಜಾಗವಿದ್ದರೂ ನಮ್ಮ ಪಾಡಿಗೆ ನಡೆಯುತ್ತಿದ್ದ ನಮ್ಮ ಮೇಲೆಯೇ ಗಲೀಜು ಮಾಡುತ್ತದೆ. ಕಾಕತಾಳೀಯ ಸಂಗತಿಗಳು ಬದುಕಿನಲ್ಲಿ ಇಂಥದ್ದು ಸಾಕಷ್ಟು ನಡೆಯುತ್ತಿರುತ್ತವೆ.

ಕ್ರಿಕೆಟ್‌ ಮೈದಾನದಲ್ಲೂ ಇಂಥದ್ದೇ ಸಾಕಷ್ಟು ಕಾಕತಾಳೀಯ ಸಂಗತಿಗಳು ನಡೆದಿವೆ, ನಡೆಯುತ್ತಲೂ ಇವೆ. ಒಬ್ಬ ಬ್ಯಾಟ್ಸ್‌ಮನ್‌ ಒಬ್ಬನೇ ಬೌಲರ್‌ಗೆ ಪದೇ ಪದೇ ಔಟಾಗೋದು, ಕ್ರಿಕೆಟರ್ ಒಬ್ಬ ಗಳಿಸಿದ ಸ್ಕೋರೂ ಆತನ ಜನ್ಮ ದಿನಾಂಕವೂ ಸೇಮ್ ಟು ಸೇಮ್ ಇರೋದು ಹೀಗೆಲ್ಲಾ ನಡೆದಿದ್ದಿದೆ. ಆದರೆ ಇಲ್ಲಿ ಬರೆದಿರುವ ಕಾಕತಾಳೀಯ ಸಂಗತಿ ನಿಮ್ಮನ್ನು ಇನ್ನೂ ಅಚ್ಚರಿಗೀಡು ಮಾಡುತ್ತದೆ.

ಒಡಿಐನಲ್ಲಿ ಸಚಿನ್ ಚೊಚ್ಚಲ 200 ರನ್

ಒಡಿಐನಲ್ಲಿ ಸಚಿನ್ ಚೊಚ್ಚಲ 200 ರನ್

ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ ಒಂದು ಬಾರಿ ದ್ವಿಶತಕ ಬಾರಿಸಿದ್ದಾರೆ. ಸಚಿನ್ ದ್ವಿಶತಕ ಬಾರಿಸಿದ್ದು 2010ರಲ್ಲಿ. ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸಚಿನ್ ಅಜೇಯ 200 ರನ್ ಬಾರಿಸಿದ್ದರು. ಈ ಪಂದ್ಯದಲ್ಲಿ ಭಾರತ 153 ರನ್‌ನಿಂದ ಗೆದ್ದಿತ್ತು. ಅಚ್ಚರಿ ಇದಲ್ಲ, ಕೆಳಗೆ ನೋಡಿ!

ಪಂದ್ಯ ಗೆಲ್ಲಿಸಿದ್ದ ಸೆಹ್ವಾಗ್

ಪಂದ್ಯ ಗೆಲ್ಲಿಸಿದ್ದ ಸೆಹ್ವಾಗ್

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ ಆಗಿ ಗಮನ ಸೆಳೆದಿದ್ದ ವೀರೇಂದ್ರ ಸೆಹ್ವಾಗ್ ಕೂಡ ಏಕದಿನ ಕ್ರಿಕೆಟ್‌ನಲ್ಲಿ ಒಂದು ಬಾರಿ ದ್ವಿಶತಕ ಬಾರಿಸಿದ್ದಾರೆ. 2011ರಲ್ಲಿ ಇಂಧೋರ್‌ನಲ್ಲಿ ನಡೆದಿದ್ದ ವೆಸ್ಟ್‌ ಇಂಡೀಸ್ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಸೆಹ್ವಾಗ್ 149 ಎಸೆತಗಳಿಗೆ 219 ರನ್ ಬಾರಿಸಿದ್ದರು. ವಿಶೇಷವೆಂದರೆ ಸೆಹ್ವಾಗ್ ಒಡಿಐನಲ್ಲಿ ಮೊದಲ ದ್ವಿಶತಕ ಬಾರಿಸಿದ್ದ ಈ ಪಂದ್ಯದಲ್ಲೂ ಭಾರತ 153 ರನ್‌ಗಳಿಂದ ಗೆದ್ದಿತ್ತು.

ಹಿಟ್‌ಮ್ಯಾನ್ ದ್ವಿಶತಕದ ಅಚ್ಚರಿ

ಹಿಟ್‌ಮ್ಯಾನ್ ದ್ವಿಶತಕದ ಅಚ್ಚರಿ

ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹೆಸರಿನಲ್ಲಿ ಒಡಿಐನಲ್ಲಿ ಅತ್ಯಧಿಕ ವೈಯಕ್ತಿಕ ರನ್ (264) ವಿಶ್ವದಾಖಲೆಯಿದೆ. ಒಟ್ಟು ಮೂರು ಬಾರಿ ರೋಹಿತ್ ದ್ವಿಶತಕ ಬಾರಿಸಿದ್ದಾರೆ. ಇದರಲ್ಲಿ ರೋಹಿತ್ ವಿಶ್ವ ದಾಖಲೆಯ ದ್ವಿಶತಕ ಬಾರಿಸಿದ್ದ 2014ರ ಶ್ರೀಲಂಕಾ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಮತ್ತೊಂದು ಅಚ್ಚರಿ ನಡೆದಿತ್ತು. ಆವತ್ತು ಕೂಡ ಭಾರತ 153 ರನ್‌ಗಳಿಂದ ಗೆದ್ದಿತ್ತು. ಅಂದು ಶರ್ಮಾ 173 ಎಸೆತಗಳಿಗೆ 264 ರನ್ ಬಾರಿಸಿದ್ದರು.

Story first published: Monday, June 21, 2021, 21:44 [IST]
Other articles published on Jun 21, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+