ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊಹ್ಲಿ ಜೊತೆ ಮೈಂಡ್ ಗೇಮ್ ಆಡಿದ್ದೆ: ಅಮೀರ್

ನವದೆಹಲಿ, ಅಕ್ಟೋಬರ್ 17: ಕಳೆದ ವರ್ಷ ಚಾಂಪಿಯನ್ಸ್ ಟ್ರೋಫಿ ಫೈನಲ್ ವೇಳೆ ಟೀಮ್ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಜೊತೆ ಮೈಂಡ್ ಗೇಮ್ ಆಡಿದ್ದನ್ನು ಪಾಕಿಸ್ತಾನ್ ವೇಗಿ ಮೊಹಮ್ಮದ್ ಅಮೀರ್ ಅವರು ಬಿಚ್ಚಿಟ್ಟಿದ್ದಾರೆ. ಈ ಪಂದ್ಯದಲ್ಲಿ ಭಾರತ ತಂಡ ಪಾಕ್ ಎದುರು ಭಾರೀ ಅಂತರದಿಂದ ಸೋತಿತ್ತು.
18 ಜೂನ್ 2017ರಂದು ಲಂಡನ್ ನ ಕೆನ್ನಿಂಗ್ಟನ್ ಓವಲ್ ನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಇದರಲ್ಲಿ ಭಾರತ 180 ರನ್ ಗಳಿಂದ ಹೀನಾಯವಾಗಿ ಸೋತಿತ್ತು. ವಿರಾಟ್ ಕೊಹ್ಲಿ ಕೇವಲ 5 ರನ್ ಗಳಿಸಿ ಅಮೀರ್ ಗೆ ವಿಕೆಟ್ ಒಪ್ಪಿಸಿದ್ದರು.
ಒಂದು ವೇಳೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಎಂಎಸ್ ಧೋನಿ ಅತೀ ಕಡಿಮೆ ರನ್ ಗೆ ಔಟಾಗದೆ ಇರುತ್ತಿದ್ದರೆ ಪಾಕಿಸ್ತಾನಕ್ಕೆ ಮೊದಲ ಚಾಂಪಿಯನ್ಸ್ ಟ್ರೋಫಿ ಲಭಿಸಲು ಭಾರತ ಬಿಡದಿರುವ ಸಾಧ್ಯತೆಯಿತ್ತು.

ಭಾರತಕ್ಕೆ ಹೀನಾಯ ಸೋಲು
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟಿದ್ದ ಪಾಕಿಸ್ತಾನ 50 ಓವರ್ ಗಳಲ್ಲಿ 4 ವಿಕೆಟ್ ಕಳೆದು ಭರ್ಜರಿ 338 ರನ್ ಪೇರಸಿತ್ತು. ಇದರಲ್ಲಿ ಫಖರ್ ಜಮಾನ್ ಅವರ ಶತಕ (114 ರನ್) ಕೂಡ ಸೇರಿತ್ತು. ಚೇಸಿಂಗ್ ಗೆ ಇಳಿದ ಭಾರತ 30.3 ಓವರ್ ಗೆ ಎಲ್ಲಾ ವಿಕೆಟ್ ಕಳೆದು 158 ರನ್ ಪೇರಿಸುವುದರೊಂದಿಗೆ ಶರಣಾಗಿತ್ತು.

ಅಮೀರ್ ಗೆ ಮೂರು ವಿಕೆಟ್
ನಿರ್ಣಾಯಕ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ್ದ ಅಮೀರ್ ಕೇವಲ 16 ರನ್ನಿಗೆ ಭಾರತದ 3 ವಿಕೆಟ್ ಗಳನ್ನು ಉರುಳಿಸಿದ್ದರು. ಇದರಲ್ಲಿ ಆರಂಭಿಕರಾದ ರೋಹಿತ್ ಶರ್ಮಾ (0) , ಶಿಖರ್ ಧವನ್ (21) ಮತ್ತು ವಿರಾಟ್ ಕೊಹ್ಲಿ ವಿಕೆಟ್ ಗಳು ಅಮೀರ್ ಲಭಿಸಿದ್ದವು. ಇದು ಭಾರತ ಒತ್ತಡಕ್ಕೀಡಾಗುವಂತೆ ಮಾಡಿತ್ತು.

ತಬ್ಬಿಬ್ಬಾಗಿಸಿದ್ದೆ
ಈ ಸಂದರ್ಭವನ್ನು ಸ್ಮರಿಸಿಕೊಂಡ ಅಮೀರ್, 'ವಿರಾಟ್ ಕೊಹ್ಲಿ ಬ್ಯಾಟಿಂಗ್ ಗೆ ಬಂದಾಗ ನಾನು ಇನ್ ಸ್ವಿಂಗ್ (ಸ್ವಿಂಗ್ ಗೆ ವಿರುದ್ಧ) ಬೌಲಿಂಗ್ ಎಸೆದೆ. ರೋಹಿತ್ ಶರ್ಮಾ ಕೂಡ ನನ್ನ ಇನ್ ಸ್ವಿಂಗ್ ದಾಳಿಗೆ ಬಲಿಯಾದರು. ನನ್ನೀ ಮೈಂಡ್ ಗೇಮ್ ಗೆ ಭಾರತ ಅವತ್ತು ಶರಣಾಗಿತ್ತು' ಎಂದಿದ್ದಾರೆ.

ಪಾಕ್ ಚಾಲಾಕಿ ಆಟ
ಅವತ್ತು ನಿಜಕ್ಕೂ ಪಾಕಿಸ್ತಾನ ಚಾಲಾಕಿ ಆಟ ಆಡಿತ್ತು. ಅದಕ್ಕೆ ತಕ್ಹಾಗೆ ಇತ್ತ ಭಾರತ ಕೂಡ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತ್ತು. ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ (76 ರನ್) ಏಕಾಂಗಿ ಹೋರಾಟ ಮಾಡಿದ್ದು ಬಿಟ್ಟರೆ ಉಳಿದೆಲ್ಲರೂ 22ರೊಳಗೆ ಪೆವಿಲಿಯನ್ ಗೆ ನಡೆದಿದ್ದರು. ಅದರಲ್ಲೂ ಎಂಎಸ್ ಧೋನಿ 4, ಕೇದಾರ್ ಜಾಧವ್ 9, ಅಶ್ವಿನ್, ಭುವನೇಶ್ವರ್, ಜಸ್‌ಪ್ರೀತ್ ಬೂಮ್ರಾ ತಲಾ 1ರನ್ ಗೆ ಔಟಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications