Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಿಗ್‌ಬಿ ಅಮಿತಾಬ್, ಅಭಿಷೇಕ್‌ಗೆ ಕೊರೊನಾ ವೈರಸ್: ಶೀಘ್ರ ಗುಣಮುಖರಾಗಲು ಹಾರೈಸಿದ ಸಚಿನ್

Amitabh & Abhishek Bachchan Test Covid 19 Positive: Sachin Tendulkar Wish Speedy Recovery

ಬಾಲಿವುಡ್‌ನ ದಿಗ್ಗಜ ಬಿಗ್‌ಬಿ ಅಮಿತಾಬ್ ಬಚ್ಚನ್ ಕುಟುಂಬ ಕೊರೊನಾ ವೈರಸ್ ಆತಂಕಕ್ಕೆ ಒಳಗಾಗಿದೆ. ಸ್ವತಃ ಅಮಿತಾಬ್‌ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರೂ ಕೊರೊನಾ ವೈರಸ್‌ಗೆ ತುತ್ತಾಗಿರುವುದು ನಿನ್ನೆ ಬಂದ ವರದಿಯಲ್ಲಿ ದೃಢಪಟ್ಟಿದ್ದು ಇಬ್ಬರೂ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಮಿತಾಬ್ ಕುಟುಂಬ ಕೊರೊನಾ ವೈರಸ್‌ನಿಂದ ಶೀಘ್ರ ಗುಣಮುಖರಾಗಲು ಪ್ರಾರ್ಥಿಸಿದ್ದಾರೆ. ಅಭಿಷೇಕ್ ಬಚ್ಚನ್ ತಮ್ಮ ಕೊರೊನಾ ವರದಿ ದೃಡಪಟ್ಟಿರುವ ಬಗ್ಗೆ ಟ್ವಿಟ್ಟರ್‌ನಲ್ಲಿ ಖಚಿತಪಡಿಸಿ ಟ್ವೀಟ್ ಮಾಡಿರುವುದಕ್ಕೆ ಸಚಿನ್ ಪ್ರತಿಕ್ರಿಯಿಸಿದ್ದಾರೆ.

ಅಭಿಷೇಕ್ ಮಾಡಿದ ಟ್ವೀಟ್‌ಗೆ ಸಚಿನ್ ತೆಂಡೂಲ್ಕರ್ "ಬಲಿಷ್ಠವಾಗಿರು ನನ್ನ ಗೆಳೆಯ. ನಿಮ್ಮ ಹಾಗೂ ನಿಮ್ಮ ಕುಟುಂಬದ ಆರೋಗ್ಯಕ್ಕೆ ನಾನು ಪ್ರಾರ್ಥಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಸಚಿನ್ ಅಮಿತಾಬ್ ಬಚ್ಚನ್ ಟ್ವೀಟ್‌ಗೂ ಪ್ರತಿಕ್ರಿಯಿಸಿದ್ದರು. "ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಅಮಿತ್ ಜೀ, ಶೀಘ್ರ ಗುಣಮುಖರಾಗಲು ಪ್ರಾರ್ಥಿಸುತ್ತೇನೆ" ಎಂದು ಸಚಿನ್ ಅಮಿತಾಬ್ ಬಚ್ಚನ್ ಟ್ವೀಟ್‌ಗೂ ಪ್ರತಿಕ್ರಿಯಿಸಿದ್ದರು.

ಕೊರೊನಾ ವೈರಸ್‌ನ ಸಣ್ಣ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ತಪಾಸಣೆಗೆ ಒಳಗಾಗಿದ್ದೆವು. ಅದರ ವರದಿ ಬಂದಿದ್ದು ಕೊರೊನಾ ವೈರಸ್ ದೃಢಪಟ್ಟಿದೆ. ಹೀಗಾಗಿ ಕಳೆದ ಹತ್ತು ದಿನಗಳಲ್ಲಿ ತಮ್ಮ ಸಂಪರ್ಕದಲ್ಲಿ ಇದ್ದವರು ದಯವಿಟ್ಟು ಪರೀಕ್ಷಿಸಿ ಎಂದು ಅಮಿತಾಬ್ ಹಾಗೂ ಅಭಿಷೇಕ್ ಟ್ವೀಟ್ ಮಾಡಿದ್ದರು.

ಅಮಿತಾಬ್ ಬಚ್ಚನ್ ಪತ್ನಿ ಜಯಾ ಬಚ್ಚನ್, ಸೊಸೆ ಐಶ್ವರ್ಯಾ ರೈ ಹಾಗೂ ಮೊಮ್ಮಗಳು ಆರಾಧ್ಯ ವರದಿಗಳು ಕೂಡ ಬಂದಿದ್ದು ಕೊರೊನಾ ವೈರಸ್ ನೆಗೆಟಿವ್ ಎಂದು ದೃಢಪಟ್ಟಿದೆ. ಸದ್ಯ ಇವರು ಮುಂಬೈನ ತಮ್ಮ ನಿವಾಸದಲ್ಲಿ ಹೋಮ್ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

Story first published: Monday, July 13, 2020, 10:07 [IST]
Other articles published on Jul 13, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+