For Quick Alerts
ALLOW NOTIFICATIONS  
For Daily Alerts
 

Andre Russell: ಟಿ20 ಕ್ರಿಕೆಟ್‌ನಲ್ಲಿ ಆಂಡ್ರೆ ರಸೆಲ್ ಹೊಸ ಮೈಲಿಗಲ್ಲು

ವೆಸ್ಟ್ ಇಂಡೀಸ್ ತಂಡದ ಸ್ಪೋಟಕ ಆಲ್‌ರೌಂಡರ್ ಆಂಡ್ರೆ ರಸೆಲ್ ಟಿ20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ರಸೆಲ್ ಪ್ರಸ್ತುತ ಅಂತಾರಾಷ್ಟ್ರೀಯ ಟಿ20 ಲೀಗ್‌ನಲ್ಲಿ ಆಡುತ್ತಿದ್ದಾರೆ. ಫೆಬ್ರವರಿ 1 ರಂದು ಇಂಟರ್ನ್ಯಾಷನ್ ಟಿ20 ಲೀಗ್‌ನ ಅಬುಧಾಬಿ ನೈಟ್ ರೈಡರ್ಸ್ ಮತ್ತು ಗಲ್ಫ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಅವರು ದೊಡ್ಡ ಸಾಧನೆ ಮಾಡಿದ್ದಾರೆ. ಅಬುಧಾಬಿ ನೈಟ್ ರೈಡರ್ಸ್ ತಂಡದ ಪರ ಆಡುತ್ತಿರುವ ರಸೆಲ್ ಕೇವಲ 9 ರನ್‌ಗಳಿಗೆ ಔಟಾಗುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಗಲ್ಫ್ ಜೈಂಟ್ಸ್ ತಂಡ ಟಾಮ್ ಕರ್ರನ್ ಎಸೆತದಲ್ಲಿ ಬೌಂಡರಿ ಬಾರಿಸಿದ ನಂತರ, ರಸೆಲ್ ಟಿ20 ಕ್ರಿಕೆಟ್‌ನಲ್ಲಿ 9000 ರನ್‌ಗಳನ್ನು ಪೂರೈಸಿದರು. ಈ ಮೂಲಕ ರಸೆಲ್ ಚುಟುಕು ಕ್ರಿಕೆಟ್‌ನಲ್ಲಿ ವೇಗವಾಗಿ 9000 ರನ್‌ ಪೂರೈಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಸಾಧನೆಯ ಪಟ್ಟಿಯಲ್ಲಿ ವಿಶ್ವದ ಒಟ್ಟು 25 ಆಟಗಾರರಿದ್ದಾರೆ.

Andre Russell becomes fastest to score 9000 runs in T20 cricket

ಟಿ20ಯಲ್ಲಿ ಕ್ರಿಕೆಟ್‌ನಲ್ಲಿ ಆಂಡ್ರೆ ರಸೆಲ್ 9000 ರನ್ ಪೂರ್ಣಗೊಳಿಸಲು ಕೇವಲ 5,321 ಎಸೆತಗಳನ್ನು ತೆಗೆದುಕೊಂಡರು. ರಸೆಲ್‌ಗಿಂತ ಮೊದಲು ಟಿ20ಯಲ್ಲಿ ವೇಗವಾಗಿ 9000 ರನ್ ಪೂರೈಸಿದ ದಾಖಲೆ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಹೆಸರಿನಲ್ಲಿತ್ತು. ಮ್ಯಾಕ್ಸಿ 5915 ಎಸೆತಗಳಲ್ಲಿ 9000 ರನ್ ಪೂರೈಸಿದರು. ರಸೆಲ್ ಮತ್ತು ಮ್ಯಾಕ್ಸಿ ನಂತರ, ಟಿ20ಯಲ್ಲಿ 9000 ರನ್ ಪೂರೈಸಿದ ಬ್ಯಾಟರ್‌ಗಳೆಂದರೆ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಮತ್ತು ವೆಸ್ಟ್ ಇಂಡೀಸ್‌ನ ಕೀರಾನ್ ಪೊಲಾರ್ಡ್ (5988) ಮತ್ತು ಕ್ರಿಸ್ ಗೇಲ್.

ರಸೆಲ್ ಟಿ20 ದಾಖಲೆ

ರಸೆಲ್ ಟಿ20 ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಆಟಗಾರ. ರಸೆಲ್ ಬ್ಯಾಟ್ ಹಿಡಿದು ಕ್ರೀಸ್ ಗೆ ಬಂದರೆ, ಎದುರಾಳಿ ತಂಡದ ಬೌಲರ್ ಯಾರೇ ಆಗಿದ್ದರೂ ದಂಡಿಸದೆ ಬಿಡುವುದಿಲ್ಲ. ರಸೆಲ್ ಇದುವರೆಗೆ 536 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 26.79 ರ ಸರಾಸರಿ ಮತ್ತು 169.15 ರ ಸ್ಟ್ರೈಕ್ ರೇಟ್‌ನಲ್ಲಿ 9004 ರನ್ ಕಲೆ ಹಾಕಿದ್ದು, 2 ಶತಕ ಮತ್ತು 31 ಅರ್ಧ ಶತಕಗಳು ಸೇರಿವೆ. ಕೆರಿಬಿಯನ್‌ನ ಮಾಜಿ ಆಟಗಾರ ಕ್ರಿಸ್ ಗೇಲ್ ಶಾರ್ಟ್ ಫಾರ್ಮ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಗೇಲ್ 463 ಪಂದ್ಯಗಳಲ್ಲಿ 144.75 ಸ್ಟ್ರೈಕ್ ರೇಟ್‌ನಲ್ಲಿ 14562 ರನ್ ಗಳಿಸಿದ್ದಾರೆ. ಇದರಲ್ಲಿ 22 ಶತಕಗಳು ಮತ್ತು 88 ಅರ್ಧ ಶತಕಗಳು ಸೇರಿವೆ.

ಟಿ20ಯಲ್ಲಿ ರಸೆಲ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ದಾಖಲೆ ಹೊಂದಿದ್ದಾರೆ. ಬಲಗೈ ಮಧ್ಯಮ ವೇಗದ ಬೌಲರ್ ರಸೆಲ್ 25.55 ಸರಾಸರಿ ಮತ್ತು 8.71 ಎಕಾನಮಿಯಲ್ಲಿ 466 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 36 ವರ್ಷ ವಯಸ್ಸಿನ ರಸೆಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಇನ್ನೂ ನಿವೃತ್ತಿಯಾಗಿಲ್ಲ. ಆದರೆ ಅವರು ಹೆಚ್ಚಾಗಿ ದೇಶೀಯ ಕ್ರಿಕೆಟ್ ಮತ್ತು ವಿದೇಶಿ ಟಿ20 ಲೀಗ್‌ಗಳನ್ನು ಆಡುತ್ತಾರೆ. ಈ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಮಾಡಿದ್ದಾರೆ.

Story first published: Tuesday, February 4, 2025, 8:00 [IST]
Other articles published on Feb 4, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+