Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ವಿಶೇಷ ಅಭಿಮಾನಿ', ಸಹ ಆಟಗಾರರ ಜೊತೆ ಹುಟ್ಟುಹಬ್ಬ ಆಚರಿಸಿದ ರಸೆಲ್

ಪಂದ್ಯ ಮುಗಿದ ಬಳಿಕ ರಸೆಲ್ ಮಾಡಿದ್ದೇನು ಗೊತ್ತಾ..!?
Andre Russell celebrates his 31st birthday with KKR ‘special fan’ and teammates

ಕೋಲ್ಕತ್ತಾ, ಏಪ್ರಿಲ್ 29: ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಭಾನುವಾರ (ಏಪ್ರಿಲ್ 28) ನಡೆದ ಐಪಿಎಲ್ ಪಂದ್ಯದಲ್ಲಿ ಆ್ಯಂಡ್ರೆ ರಸೆಲ್ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 34 ರನ್‌ ಜಯ ಗಳಿಸಿತ್ತು. ಪಂದ್ಯದಲ್ಲಿ ಕೆಕೆಆರ್ ಪೇರಿಸಿದ 232 ರನ್ 2019ರ ಐಪಿಎಲ್‌ನಲ್ಲಿ ತಂಡವೊಂದು ದಾಖಲಿಸಿದ ಅತ್ಯಧಿಕ ಮೊತ್ತವಾಗಿಯೂ ಗುರುತಿಸಿಕೊಂಡಿತ್ತು.

ಕೆಕೆಆರ್ ಗೆಲುವಿಗೆ ಕಾರಣರಾದ ರಸೆಲ್ ಪಂದ್ಯದ ಬಳಿಕ ಅಂದರೆ ಏಪ್ರಿಲ್ 29ರಂದು ತಮ್ಮ ಹುಟ್ಟುಹಬ್ಬವನ್ನು ವಿಶೇಷ ಅಭಿಮಾನಿ ಮತ್ತು ಸಹ ಆಟಗಾರರ ಜೊತೆ ಆಚರಿಸಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೆಕೆಆರ್ ಪ್ರತಿ ಪಂದ್ಯದ ವೇಳೆಯೂ ಈಡನ್ ಗಾರ್ಡನ್ ಮೈದಾನದಲ್ಲಿ ಹಾಜರಿರುವ, ಸೆರೆಬ್ರಲ್ ಪಾಲ್ಸಿ(ದೇಹದ ಅಂಗಾಂಗಳು ಸ್ವಾಧೀನ ಕಳೆದುಕೊಳ್ಳುವ ರೀತಿಯ ಖಾಯಿಲೆ)ಯಿಂದ ಬಳಲುತ್ತಿರುವ ಕೆಕೆಆರ್ ಅಭಿಮಾನಿ ಹರ್ಶುಲ್ ಗೋಯೆಂಕಾ ಜೊತೆ ಕೂಡ ಒಂದಷ್ಟು ಹೊತ್ತು ಕಳೆದ ರಸೆಲ್, ಅಭಿಮಾನಿಗಳ ಪ್ರೀತಿಗೂ ಪಾತ್ರರಾದರು.

ಸಹ ಆಟಗಾರರ ಜೊತೆ ತಮಾಷೆಯಾಗಿರುವ ರಸೆಲ್ ಹುಟ್ಟುಹಬ್ಬ ಆಚರಣೆ ವೇಳೆ ಒಂದಿಷ್ಟು ಕೆಕೆಆರ್ ತಂಡದ ಸಹ ಆಟಗಾರರು ರಸೆಲ್ ಮುಖಕ್ಕೆ ಕೇಕ್ ಮೆತ್ತಿ ಗಮ್ಮತ್ತು ಮಾಡಿದರೆ, ಇನ್ನೊಂದಿಷ್ಟು ಮಂದಿ ಈ ಗಮ್ಮತ್ತನ್ನು ವಿಡಿಯೋದಲ್ಲಿ ಸೆರೆ ಹಿಡಿಯುವುದರಲ್ಲಿ ಬ್ಯುಸಿಯಾಗಿದ್ದರು. ಈ ವಿಡಿಯೋ ಕೂಡ ಟ್ವಿಟರ್‌ನಲ್ಲಿ ಓಡಾಡುತ್ತಿದೆ.

Story first published: Monday, April 29, 2019, 18:19 [IST]
Other articles published on Apr 29, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+