For Quick Alerts
ALLOW NOTIFICATIONS  
For Daily Alerts
 

MLC 2023: ಪಾಕ್‌ನ ಅತ್ಯುತ್ತಮ ವೇಗಿಯ ಎಸೆತಕ್ಕೆ ಬೃಹತ್ ಸಿಕ್ಸರ್ ಬಾರಿಸಿದ ಆಂಡ್ರೆ ರಸೆಲ್: ವಿಡಿಯೋ

ಅಮೆರಿಕಾದ ಮೇಜರ್ ಕ್ರಿಕೆಟ್ ಲೀಗ್ ಟೂರ್ನಿಯ 8ನೇ ಪಂದ್ಯ ರೋಚಕ ಹೈಸ್ಕೋರಿಂಗ್ ಪಂದ್ಯವಾಗಿ ಅಂತ್ಯಕಂಡಿದೆ. ಒಟ್ಟಾರೆ 40 ಓವರ್‌ಗಳಲ್ಲಿ 403 ರನ್‌ಗಳು ಹರಿದು ಬಂದಿದ್ದು ಅಭಿಮಾನಿಗಳಿಗೆ ರೋಚಕ ಅನುಭವ ನೀಡಿದೆ. ಈ ಪಂದ್ಯದಲ್ಲಿ ಸ್ಯಾನ್‌ ಫ್ರ್ಯಾನ್ಸಿಸ್ಕೋ ಯೂನಿಕಾರ್ನ್ ಗೆಲುವು ಸಾಧಿಸಿದ್ದು ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿದೆ.

ಮತ್ತೊಂದೆಡೆ ಇದು ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡಕ್ಕೆ ಸತತ ಮೂರನೇ ಸೋಲಾಗಿದೆ. ಕೆಕೆಆರ್ ಫ್ರಾಂಚೈಸಿಗೆ ಈ ನೂತನ ಕ್ರಿಕೆಟ್‌ ಲೀಗ್‌ನಲ್ಲಿ ಉತ್ತಮ ಆರಂಬ ದೊರೆತಿಲ್ಲ. ಹಾಗಿದ್ದರೂ ಈ ಪಂದ್ಯದಲ್ಲಿ LAKR ತಂಡ ಮುರಿಯದ 6ನೇ ವಿಕೆಟ್‌ಗೆ ಅದ್ಭುತ ಜೊತೆಯಾಟ ನೀಡುವ ಮೂಲಕ ಹೋರಾಟ ಪ್ರದರ್ಶಿಸಿದ್ದು ತಂಡದ ಸ್ಟಾರ್ ಆಟಗಾರರಾದ ಆಂಡ್ರೆ ರಸೆಲ್ ಹಾಗೂ ಸುನಿಲ್ ನರೈನ್. ಈ ಜೋಡಿ 41 ಎಸೆತಗಳಲ್ಲಿ 75 ರನ್‌ಗಳನ್ನು ಬಾರಿಸುವ ಮೂಲಕ ಹೋರಾಟ ಪ್ರದರ್ಶಿಸಿತು.

Andre Russell hits biggest sixer of MLC to Pakistan’s Best T20 Bowler Haris Rauf

ಹಾಗಿದ್ದರೂ ಈ ಪಂದ್ಯದಲ್ಲಿ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡ 21 ರನ್‌ಗಳ ಅಂತರದ ಸೋಲು ಅನುಭವಿಸಿದೆ. ನರೈನ್ 3 ಸಿಕ್ಸರ್ ನೆರವಿನಿಂದ 17 ಎಸೆತಗಳಲ್ಲಿ 28 ರನ್‌ಗಳನ್ನು ಬಾರಿಸಿದರೆ ಆಂಡ್ರೆ ರಸೆಲ್ ಆಕ್ರಮಣಕಾರಿಯಾಗಿ ಆಡಿ 26 ಎಸೆತಗಳಲ್ಲಿ 42 ರನ್ ಬಾರಿಸಿದರು. ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದ ಅವರು ಒಂದು ಟೂರ್ನಿಯಲ್ಲಿಯೇ ಅತ್ಯಂತ ಬೃಹತ್ ಸಿಕ್ಸರ್ ಎನಿಸಿಕೊಂಡಿದೆ.

ವೆಸ್ಟ್ ಇಂಡೀಸ್‌ನ ಈ ಆಲ್ ರೌಂಡರ್ ತನ್ನ ಬಲದಿಂದ ಬೃಹತ್ ಸಿಕ್ಸರ್‌ಗಳನ್ನು ಸುಲಭವಾಗಿ ಬಾರಿಸುವ ಸಾಮರ್ಥ್ಯವನ್ನು ಹೊಂದಿದ್ದು ಈ ಪಂದ್ಯದಲ್ಲಿಯೂ ಅದನ್ನು ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಎದುರಾಳಿ ಸ್ಯಾನ್‌ ಫ್ರ್ಯಾನ್ಸಿಸ್ಕೋ ಯೂನಿಕಾರ್ನ್ ತಂಡದಲ್ಲಿ ಆಡುತ್ತಿರುವ ಹ್ಯಾರಿಸ್ ರೌಫ್ ಅವರ ಒಂದು ಎಸೆತವನ್ನು ಲೆಗ್ ಸೈಡ್‌ನತ್ತ ಭರ್ಜರಿ 108 ಮೀಟರ್ ದೂರಕ್ಕೆ ಬಾರಿಸಿದ್ದಾರೆ. ಇದು ಟೂರ್ನಿಯಲ್ಲಿಯೇ ಅತ್ಯಂತ ಬೃಹತ್ ಸಿಕ್ಸರ್ ಆಗಿದೆ.

ಈ ಪಂದ್ಯದ ಅಂತಿಮ ಎರಡು ಓವರ್‌ಗಳಲ್ಲಿ ಕೆಕೆಆರ್ ಮಾಲೀಕತ್ವದ ಎಲ್‌ಎಕೆಆರ್ ತಂಡಕ್ಕೆ 12 ಎಸೆತಗಳಲ್ಲಿ 50 ರನ್‌ಗಳ ಅಗತ್ಯವಿತ್ತು. ಹ್ಯಾರಿಸ್ ರೌಫ್ ಎಸೆದ 19ನೇ ಓವರ್‌ನ ಮೊದಲ ಎಸೆತವನ್ನೇ ದೂರಕ್ಕೆ ಅಟ್ಟುವ ಮೂಲಕ ತಮ್ಮ ಹೋರಾಟವಿನ್ನೂ ಚಾಲ್ತಿಯಲ್ಲಿದೆ ಎನ್ನುವುದನ್ನು ಸಾರಿದರು ರಸೆಲ್. ಈ ಮೂಲಕ ಬ್ರಾವೀ ಅವರ 106 ಮೀಟರ್‌ಗಳ ಸಿಕ್ಸರ್‌ಅನ್ನು ಹಿಂದಿಕ್ಕಿದ್ದಾರೆ. ಆದರೆ ಇದರಿಂದಾಗಿ ತಂಡಕ್ಕೆ ಹೆಚ್ಚೇನೂ ಲಾಭವಾಗಿಲ್ಲ. ಬೃಹತ್ ಮೊತ್ತವನ್ನು ಬೆನ್ನಟ್ಟಿದ ತಂಡ 195/5 ರನ್‌ಗಳಿಗೆ ತನ್ನ ಹೋರಾಟವನ್ನು ಅಂತ್ಯಗೊಳಿಸಿದೆ.

ಇನ್ನು ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ ಸ್ಯಾನ್ ಫ್ರಾನ್ಸಿಸ್ಕೋ ತಂಡಕ್ಕೆ ಮ್ಯಾಥ್ಯೂ ವೇಡ್ ಅವರ ಸ್ಪೋಟಕ ಪ್ರದರ್ಶನದಿಂದಾಗಿ ಭರ್ಜರಿ ಆರಂಬ ದೊರೆಯಿತು. 41 ಎಸೆತಗಳಲ್ಲಿ ಐದು ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 78 ರನ್ ಬಾರಿಸಿದರು. ಮಾರ್ಕಸ್ ಸ್ಟೋಯ್ನಿಸ್ 18 ಎಸೆತಗಳಲ್ಲಿ 37 ರನ್ ಹಾಗೂ ಕೋರಿ ಆಂಡರ್ಸನ್ 20 ಎಸೆತಗಳಲ್ಲಿ 39 ರನ್ ಬಾರಿಸುವ ಮೂಲಕ ಉತ್ತಮ ಕೊಡುಗೆ ನೀಡಿದರು. ಇದರ ಪರಿಣಾಮ ಎಸ್‌ಎಫ್‌ಯು ತಂಡ ಭರ್ಜರಿ 212/7 ರನ್‌ಗಳನ್ನು ಕಲೆಹಾಕಿತ್ತು.

Story first published: Wednesday, July 19, 2023, 14:32 [IST]
Other articles published on Jul 19, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+