ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನದೇ ಆದ ಬಿರುಸಿನ ಆಟ ಹಾಗೂ ಬಿಗುವಿನ ದಾಳಿಯಿಂದ ಹೆಸರುವಾಸಿಯಾಗಿದ್ದ ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್‌ರೌಂಡರ್ 37 ವರ್ಷ ಆಂಡ್ರೆ ರಸೆಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ಧಾರೆ. ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯ ಆರಂಭಿಕ ಎರಡು ಪಂದ್ಯಗಳು ಸಬಿನಾ ಪಾರ್ಕ್‌ನಲ್ಲಿ ನಡೆಯಲಿವೆ. ಈ ಪಂದ್ಯ ರಸೆಲ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಕೊನೆಯ ಪಂದ್ಯವಾಗಿರಲಿದೆ. ವಿಂಡೀಸ್ ಕ್ರಿಕೆಟ್ ಸಂಸ್ಥೆ ಸ್ಟಾರ್ ಆಟಗಾರನಿಗೆ ಗೌರವ ಸೂಚಿಸಿದೆ.
ಆಂಡ್ರಿ ರಸೆಲ್ ತಮ್ಮ ನಿವೃತ್ತಿಯ ಬಗ್ಗೆ ಸಮಾಜಿಕ ತಾಣದಲ್ಲಿ ತಿಳಿಸಿದ್ದಾರೆ. ವೆಸ್ಟ್ ಇಂಡೀಸ್ ಪರ ಆಡುವುದು ನನಗೆ ದೊಡ್ಡ ವಿಷಯ. ಚಿಕ್ಕವನಿದ್ದಾಗ ಈ ಮಟ್ಟದ ಕ್ರಿಕೆಟ್ ಆಡಲು ಬಯಸಿದ್ದೆ. ಆದರೆ ಆಡುತ್ತೇನೆ ಎಂದು ಭಾವಿಸಿರಲಿಲ್ಲ. ಕ್ರಿಕೆಟ್ ಆಟ ನನಗೆ ಸ್ಪೂರ್ತಿ ನೀಡಿದೆ. ವೆಸ್ಟ್ ಇಂಡೀಸ್ ತಂಡದ ಜೆರ್ಸಿ ತೊಟ್ಟು ಮೈದಾನಕ್ಕೆ ಇಳಿಯುವುದು ದೊಡ್ಡ ಸಾಧನೆ. ಮನೆಯಲ್ಲಿ ಕುಟುಂಬ ಮತ್ತು ಸ್ನೇಹಿತರ ಜೊತೆ ಕಾಲ ಕಳೆಯಲು ನಾನು ಇಷ್ಟಪಡುತ್ತೇನೆ. ನಾನು ಇಷ್ಟ ಪಡುವ ಕ್ರಿಕೆಟ್ ಆಟದ ಮೂಲಕ ಮುಂದಿನ ಪೀಳಿಗೆಗೆ ಮಾದರಿಯಾಗಲು ಬಯಸುವೆ ಎಂದು ತಿಳಿಸಿದ್ದಾರೆ.

ಆಂಡ್ರೆ ರಸೆಲ್ 2011ರಿಂದ ವೆಸ್ಟ್ ಇಂಡೀಸ್ ತಂಡದ ಪರ ಕ್ರಿಕೆಟ್ ಆಡುತ್ತಿದ್ದಾರೆ. ಅಲ್ಲದೆ ಇವರ ಅಮೋಘ ಆಟದ ಬಲದಿಂದ ಇವರು ಕೆರಿಬಿಯನ್ ತಂಡಕ್ಕೆ ಆಧಾರವಾಗಿದ್ದಾರೆ. ರಸೆಲ್ ವೆಸ್ಟ್ ಇಂಡೀಸ್ ಕಂಡ ಸ್ಟಾರ್ ಪ್ಲೇಯರ್‌ಗಳಲ್ಲಿ ಒಬ್ಬರು. ಇವರು ಆಡಿರುವ 56 ಏಕದಿನ ಪಂದ್ಯಗಳಲ್ಲಿ 27ರ ಸರಾಸರಿಯಲ್ಲಿ 1034 ರನ್ ಕಲೆ ಹಾಕಿದ್ದಾರೆ. ಈ ವೇಳೆ 4 ಅರ್ಧಶತ ಸಿಡಿಸಿದ್ದಾರೆ. ಇನ್ನು ವಿಂಡೀಸ್ ಪರ 84 ಟಿ20 ಪಂದ್ಯಗಳಲ್ಲಿ 1078 ರನ್ ಕಲೆ ಹಾಕಿದ್ದಾರೆ. ಇವರು 163.08 ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದ್ದಾರೆ. ಇವರು ಈ ಫಾರ್ಮೆಟ್‌ನಲ್ಲಿ ಬಾರಿಸಿದ 71 ರನ್ ಗರಿಷ್ಠ ರನ್ ಆಗಿದೆ.
ಶ್ರೀಲಂಕಾದಲ್ಲಿ 2026ರ ಫೆಬ್ರವರಿಯಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೂ ಸರಿಯಾಗಿ ಏಳು ತಿಂಗಳ ಮೊದಲೇ ರಸೆಲ್ ನಿವೃತ್ತಿ ಘೋಷಿಸಿರುವುದು ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಇತ್ತೀಚಿನ ದಿನಗಳಲ್ಲಿ ವೆಸ್ಟ್ ಇಂಡೀಸ್ ಪರ ನಿವೃತ್ತಿ ಘೋಷಿಸಿದ ಎರಡನೇ ಆಟಗಾರ ರಸೆಲ್ ಆಗಿದ್ದಾರೆ. ಇವರಿಗಿಂತಲೂ ಮುನ್ನ ನಿಕೋಲಸ್ ಪೂರನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

ಆಂಡ್ರೆ ರಸೆಲ್ 2012 ಹಾಗೂ 1016ರಲ್ಲಿ ಐಸಿಸಿ ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದಾರೆ. ಇವರು ವಿಂಡೀಸ್ ಪರ ಏಕೈಕ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ರಸೆಲ್ ಟಿ20 ಲೀಗ್‌ನ ಸ್ಟಾರ್ ಆಟಗಾರ. ಇವರು ಇವರೆಗೆ ಆಡಿದ 561 ಪಂದ್ಯಗಳಲ್ಲಿ 9,316 ರನ್‌ಗಳನ್ನು ಸಿಡಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 33 ಅರ್ಧಶತಕಗಳು ಸೇರಿವೆ. ಇವರು ಅಮೋಘ ಬೌಲಿಂಗ್ ದಾಳಿಗೆ 485 ವಿಕೆಟ್ ಲಭಿಸಿವೆ.