Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೈಮಂಡ್ಸ್‌ ಕಾರು ಅಪಘಾತದಲ್ಲಿ ಬದುಕುಳಿದ ಪ್ರೀತಿಯ ನಾಯಿ: ತನ್ನ ಮಾಲೀಕನನ್ನ ಬಿಟ್ಟು ಹೋಗಲು ಹಿಂದೇಟು

Andrew symonds

ಇತ್ತೀಚೆಗಷ್ಟೇ ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆ್ಯಂಡ್ರ್ಯೂ ಸೈಮಂಡ್ಸ್‌ ಕುರಿತಾಗಿ ಮನಕಲಕುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಅಪಘಾತಕ್ಕೊಳಗಾದ ಆ್ಯಂಡ್ರ್ಯೂ ಸೈಮಂಡ್ಸ್‌ ಕಾರಿನಲ್ಲಿದ್ದ ಆತನ ಪ್ರೀತಿಯ ನಾಯಿ ಸಾವಿನಿಂದ ಬಚಾವಾಗಿದೆ.

ಈ ದುರಂತದಲ್ಲಿ ಅದೃಷ್ಟವಶಾತ್ ಬಚಾವ್ ಆಗಿರುವ ನಾಯಿ, ತನ್ನ ಮಾಲೀಕನ ಮೃತದೇಹವನ್ನು ಬಿಟ್ಟು ಹೋಗಲು ಸಿದ್ಧವಿರಲಿಲ್ಲವಂತೆ. ಕ್ವೀನ್ಸ್‌ಲ್ಯಾಂಡ್‌ನ ಟೌನ್ಸ್‌ವಿಲ್ಲೆ ಪ್ರದೇಶದ ಹೊರವಲಯದಲ್ಲಾದ ಕಾರು ಅಪಘಾತದಲ್ಲಿ ಸೈಮಂಡ್ಸ್ ವಿಧಿವಶರಾದರು. ಅಪಘಾತಕ್ಕೆ ಕಾರಣ ಏನು ಎಂಬುದನ್ನ ಪೊಲೀಸರು ತನಿಖೆ ನಡೆಸುತ್ತಿರುವಂತೆಯೇ ಈ ಘಟನೆಯ ವಿವರಗಳು ಹೊರಬರುತ್ತಿವೆ.

ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರು ಪ್ರಕಾರ ಸೈಮಂಡ್ಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಬಹಿರಂಗಪಡಿಸಿದರು. ಸೈಮಂಡ್ಸ್ ಅವರ ಎರಡು ನಾಯಿಗಳು ಕಾರಿನಲ್ಲಿ ಅವನ ಜೊತೆಯಲ್ಲಿದ್ದವು ಮತ್ತು ಬದುಕುಳಿಯುವಲ್ಲಿ ಯಶಸ್ವಿಯಾದವು ಎಂದು ಬಹಿರಂಗಪಡಿಸಿದ್ದಾರೆ. ಆದಾಗ್ಯೂ, ಅವರ ಮಾಲೀಕನ ಮರಣವು ಆ ಎರಡು ನಾಯಿಗಳಿಗೆ ನಿಜಕ್ಕೂ ದೊಡ್ಡ ಆಘಾತವನ್ನುಂಟು ಮಾಡಿದ್ದು, ಒಂದು ನಾಯಿಯಂತು ಸೈಮಂಡ್ಸ್‌ನ ಮೃತ ದೇಹವನ್ನು ಬಿಡಲು ಸಿದ್ಧವಿರಲಿಲ್ಲ.

46 ವರ್ಷಕ್ಕೆ ಇಹಲೋಕ ತ್ಯಜಿಸಿರುವ ಆ್ಯಂಡ್ರ್ಯೂ ಸೈಮಂಡ್ಸ್‌ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7,000ಕ್ಕೂ ಹೆಚ್ಚು ರನ್‌ಗಳಿಸಿದ್ದಾರೆ. ಆಸ್ಟ್ರೇಲಿಯಾ ಎರಡು ಬಾರಿ ವಿಶ್ವಕಪ್ ಗೆಲುವಿನಲ್ಲಿ ಸೈಮಂಡ್ಸ್‌ ಪ್ರಮುಖ ಪಾತ್ರವಹಿಸಿದ್ರು. 1998ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಈ ಆಲ್‌ರೌಂಡರ್ ಟೆಸ್ಟ್‌ನಲ್ಲಿ ಎರಡು ಶತಕ ಸಹ ದಾಖಲಿಸಿದ್ದಾರೆ.

ಇನ್ನು ಐಪಿಎಲ್‌ನಲ್ಲಿ ಆಸಿಸ್ ಮಾಜಿ ಕ್ರಿಕೆಟಿಗ 39 ಪಂದ್ಯಗಳಲ್ಲಿ 974 ರನ್ ಜೊತೆಗೆ 20 ವಿಕೆಟ್‌ಗಳ ಸಹ ಕಬಳಿಸಿದ್ದರು.

ಚಾಹಲ್ ಅವರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಹೇಳಿದ್ದೇನು | Oneindia Kannada

Story first published: Monday, May 16, 2022, 16:18 [IST]
Other articles published on May 16, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+