ಪಾಕ್ ಕೋಚ್ ಆಗಿ ಮಿಸ್ಬಾ ಬದಲು ಫ್ಲವರ್ ಆಯ್ಕೆಯಾಗಲಿದ್ದಾರೆ: ಅಖ್ತರ್

ಕರಾಚಿ: ಪಾಕಿಸ್ತಾನ ಹಿರಿಯರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಪಾಕ್ ಮಾಜಿ ಕ್ರಿಕೆಟರ್ ಮಿಸ್ಬಾ ಉಲ್ ಹಕ್ ಬದಲು ಜಿಂಬಾಬ್ವೆ ಮಾಜಿ ಕ್ರಿಕೆಟಿಗ, ಮಾಜಿ ಕೋಚ್ ಆ್ಯಂಡಿ ಫ್ಲವರ್ ಅವರು ಶೀಘ್ರ ಆಯ್ಕೆಯಾಗಲಿದ್ದಾರೆ ಎಂದು ಪಾಕಿಸ್ಥಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿದ್ದಾರೆ.
'ಮಿಸ್ಬಾ ಉಲ್ ಹಕ್ ಅವರನ್ನು ಪಾಕ್ ತಂಡದ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಶೀಘ್ರ ಮಿಸ್ಬಾ ಜಾಗಕ್ಕೆ ಆ್ಯಂಡ್ ಫ್ಲವರ್ ಬರಲಿದ್ದಾರೆ. ಸದ್ಯ ಪಾಕಿಸ್ತಾನ್ ಸೂಪರ್ ಲೀಗ್‌ನ ತಂಡ ಮುಲ್ತಾನ್ ಸುಲ್ತಾನ್ಸ್‌ಗೆ ಕೋಚ್ ಆಗಿರುವುದರಿಂದ ಫ್ಲವರ್ ನಮ್ಮ ಆಫರ್ ಸ್ವೀಕರಿಸಿಲ್ಲ. ಆದರೆ ಪಿಎಸ್‌ಎಲ್ ಮುಕ್ತಾಯದ ಬಳಿಕ ಫ್ಲವರ್ ಕೋಚ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ,' ಎಂದು ಅಖ್ತರ್ ಹೇಳಿದ್ದಾರೆ.
'ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ (ಪಿಸಿಬಿ) ಸಮಿತಿ ಏನೂ ಮಾಡುತ್ತಿಲ್ಲ. ಅವರು ನಾನ್‌ಸೆನ್ಸ್ ಮಾತನಾಡುತ್ತಾರೆ. ಅವರನ್ನು ಬಿಟ್ಟುಬಿಡಿ. ಸಮಿತಿ ಮಿಸ್ಬಾಗೆ ಇನ್ನಷ್ಟು ಅವಕಾಶ ನೀಡಲು ಬಯಸಿದೆ. ಆದರೆ ಸತ್ಯ ಏನಂದರೆ ನಾಳೆ, ಮಿಸ್ಬಾ ಅವರನ್ನು ಸ್ಥಾನ ತೊರೆಯುವಂತೆ ಹೇಳಲಾಗುತ್ತದೆ,' ಎಂದು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಖ್ತರ್ ಹೇಳಿದ್ದಾರೆ.
'ಪಿಸಿಬಿ ಇಂಥ ವಿಚಾರದಲ್ಲಿ ತುಂಬಾ ಜಾಣತನ ತೋರುತ್ತದೆ. ಅದು ಸುಮಾರು 20-25 ವರ್ಷಗಳಿಗೊಮ್ಮೆ ಸಾಧಾರಣ ವ್ಯಕ್ತಿಯನ್ನು ಪಾಕ್ ಸಿಬ್ಬಂದಿ ತಂಡದೊಳಗೆ ತರುತ್ತಿರುತ್ತದೆ,' ಎಂದು ಅಖ್ತರ್ ಮಾರ್ಮಿಕವಾಗಿ ನುಡಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications