ಕಲೋನ್ ಸ್ಪರ್ಧೆಯಿಂದ ಹೊರ ನಡೆದ ಆ್ಯಂಡಿ ಮರ್ರೆ

ಬರ್ಲಿನ್: ಬ್ರಿಟಿಷ್ ಸ್ಟಾರ್ ಟೆನಿಸ್ ಆಟಗಾರ ಆ್ಯಾಂಡಿ ಮರ್ರೆ ಜರ್ಮನಿಯಲ್ಲಿ ನಡೆಯುತ್ತಿರುವ ಅಸೋಸಿಯೇಶನ್ ಟೆನಿಸ್ ಪ್ರೊಫೆಶನಲ್ಸ್ (ಎಟಿಪಿ) ಟೂರ್ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ಮತ್ತೆ ಗಾಯಕ್ಕೀಡಾಗಿರುವ ಮರ್ರೆ ಟೂರ್ನಿಯಿಂದ ಹಿಂದೆ ಸರಿಯುವಂತಾಗಿದೆ.
ಸೊಂಟ ಭಾಗದ ಗಾಯದಿಂದಾಗಿ ಮಾಜಿ ವಿಶ್ವ ನಂ.1 ಆಟಗಾರ ಟೂರ್ನಿಯಿಂದ ದೂರ ಉಳಿಯು ನಿರ್ಧಾರ ತಾಳಿದ್ದಾರೆ. ಈ ವರ್ಷ ಇನ್ನುಳಿದ ಯಾವುದೇ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ಮರ್ರೆ ಸಂದೇಹ ವ್ಯಕ್ತಪಡಿಸಿದ್ದಾರೆ. ಸೊಂಟ ಭಾಗದ ಸರ್ಜರಿ ಮಾಡಿಕೊಂಡಿದ್ದ ಮರ್ರೆ 2019ರಲ್ಲಷ್ಟೇ ವಾಪಸ್ಸಾಗಿದ್ದರು.
ಕಳೆದ ನವೆಂಬರ್‌ನಲ್ಲಿ ಡೇವಿಸ್ ಕಪ್ ವೇಳೆಯೂ ಮರ್ರೆ ಅವರನ್ನು ಗಾಯದ ಸಮಸ್ಯೆ ಕಾಡಿತ್ತು. ಕೊರೊನಾವೈರಸ್ ಬ್ರೇಕ್‌ನ ನಂತರ ಮರ್ರೆ ಕಣಕ್ಕಿಳಿಯಲು ಮುಂದಾಗಿದ್ದರಾದರೂ ಆಗಲೂ 33ರ ಹರೆಯದ ಮರ್ರೆಗೆ ಗಾಯದ ಬರೆ ಹಿನ್ನಡೆ ತಂದಿತ್ತು.
ಅಂತೂ ಹೆಸರಾಂತ ಆಟಗಾರ ಮರ್ರೆಗೆ ಗಾಯದ ಸಮಸ್ಯೆ ಬಿಡುವಂತೆ ಕಾಣುತ್ತಿಲ್ಲ. ಅವರೇ ತಿಳಿಸಿರುವಂತೆ ಈ ವರ್ಷ ಮರ್ರೆಗೆ ಮತ್ತೆ ಬೇರೆ ಟೂರ್ನಿಗಳಲ್ಲಿ ಭಾಗವಹಿಸಲು ಆಗುತ್ತೋ ಇಲ್ಲವೊ ಎನ್ನುವ ಪ್ರಶ್ನೆ ಎದುರಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications