ಕುಂಬ್ಳೆ ನಿರ್ಗಮನ, ಯಾರಾಗಲಿದ್ದಾರೆ ಹೊಸ ಕೋಚ್?
ಬೆಂಗಳೂರು, ಜೂನ್ 21 : ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುಂಚಿತವಾಗಿ ಕೋಚ್ ಅನಿಲ್ ಕುಂಬ್ಳೆ ಹಾಗೂ ನಾಯಕ ವಿರಾಟ್ ಕೊಹ್ಲಿ ನಡುವೆ ಕಿತ್ತಾಟ ಭುಗಿಲೆದ್ದು, ನಂತರ ಸ್ಫೋಟಗೊಂಡು, ಕುಂಬ್ಳೆ ರಾಜೀನಾಮೆಯಲ್ಲಿ ಅಂತ್ಯ ಕಂಡಿದೆ.
ಈ ನಡುವೆ ಟೀಂ ಇಂಡಿಯಾವು ಕೋಚ್ ಇಲ್ಲದೆ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಿದೆ. ಹೊಸ ಕೋಚ್ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಕಾಡಿದೆ.
ಚಾಂಪಿಯನ್ಸ್ ಟ್ರೋಫಿ ನಂತರ ಅನಿಲ್ ಕುಂಬ್ಳೆ ಅವರ ಕೋಚ್ ಅವಧಿ ಮುಗಿಯಲಿದ್ದು, ಹೊಸ ಕೋಚ್ ಹುಡುಕಾಟ ಜಾರಿಯಲ್ಲಿದೆ. ಈ ನಡುವೆ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಕುಂಬ್ಳೆ ಅವರೇ ಕೋಚ್ ಆಗಿ ಮುಂದುವರೆಯಲಿದ್ದಾರೆ ಎಂದು ಬಿಸಿಸಿಐ ದೃಢ ಪಡಿಸಿತ್ತು. ಆದರೆ, ಬಿಸಿಸಿಐ ಆಫರ್ ತಿರಸ್ಕರಿಸುವ ಕುಂಬ್ಳೆ ಅವರು ತಮ್ಮ ಸ್ಥಾನ ತೊರೆದಿದ್ದಾರೆ.
46 ವರ್ಷ ವಯಸ್ಸಿನ ಕುಂಬ್ಳೆ ಅವರ ನಿರ್ಗಮನದಿಂದಾಗಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರಿರುವ ಕ್ರಿಕೆಟ್ ಸಮಿತಿಯು ತ್ವರಿತವಾಗಿ ಹೊಸ ಕೋಚ್ ಹುಡುಕಬೇಕಿದೆ. ಸದ್ಯಕ್ಕೆ ಐವರು ಅಭ್ಯರ್ಥಿಗಳು ರೇಸಿನಲ್ಲಿದ್ದಾರೆ.

ಸೆಹ್ವಾಗ್ ಆಯ್ಕೆ ಸಾಧ್ಯತೆ
ಅನಿಲ್ ಕುಂಬ್ಳೆ ಅವರಿಂದ ತೆರವಾಗಿರುವ ಸ್ಥಾನಕ್ಕೆ ವೀರೇಂದ್ರ ಸೆಹ್ವಾಗ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಆದರೆ, ಅನುಭವದ ಮಟ್ಟಿಗೆ ಸೆಹ್ವಾಗ್ ಅವರು ಇನ್ನೂ ಜ್ಯೂನಿಯರ್ ಲೆವಲ್ ನಲ್ಲಿದ್ದಾರೆ ಸ್ಫೋಟಕ ಬ್ಯಾಟ್ಸ್ ಮನ್ ಆಗಿದ್ದ ಸೆಹ್ವಾಗ್ ಅವರು ಕಿಂಗ್ಸ್ XI ಪಂಜಾಬ್ ತಂಡದ ಮಾರ್ಗದರ್ಶಿಯಾಗಿದ್ದಷ್ಟೇ ಅನುಭವದ ಲೆಕ್ಕ ಎಂದು ತೆಗೆದುಕೊಂಡರೆ ಟೀಂ ಇಂಡಿಯಾಕ್ಕೆ ಮುಂದೆ ಅಪಾಯ ಗ್ಯಾರಂಟಿ.

ಟಾಮ್ ಮೂಡಿ ಸಮರ್ಥ
ಕೋಚ್ ಆಯ್ಕೆ ವಿಷಯಕ್ಕೆ ಬಂದರೆ ಆಸ್ಟ್ರೇಲಿಯಾದ ಟಾಮ್ ಮೂಡಿ ಒಳ್ಳೆ ಅನುಭವಿ. ಶ್ರೀಲಂಕಾ ತಂಡದ ಕೋಚ್ ಆಗಿದ್ದವರು, ಆಸ್ಟೇಲಿಯಾದ ತಂಡಗಳು, ಸನ್ ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಆಗಿ ಯಶಸ್ಸು ಕಂಡವರು. ಭಾರತೀಯ ಆಟಗಾರರ ಮನಸ್ಥಿತಿಯನ್ನು ಹತ್ತಿರದಿಂದ ಬಲ್ಲವರು.

ಲಾಲ್ ಚಂದ್ ರಜಪೂತ್
ಟೀಂ ಇಂಡಿಯಾದ ಮಾಜಿ ಆಟಗಾರ, ಅಫ್ಘಾನಿಸ್ತಾನ ತಂಡದ ಹಾಲಿ ಕೋಚ್ ಆಗಿರುವ ಲಾಲ್ ಚಂದ್ ರಜಪೂತ್ ಅವರು ಕೂಡಾ ಉತ್ತಮ ಅನುಭವ ಹೊಂದಿದ್ದಾರೆ. ಆದರೆ, ಶಿಸ್ತಿಲ್ಲದ ಟೀಂ ಇಂಡಿಯಾ ಆಟಗಾರರ ಜತೆ ಹೇಗೆ ಹೊಂದಾಣಿಕೆ ಸಾಧಿಸುತ್ತಾರೆ ಎಂಬುದು ಯಕ್ಷ ಪ್ರಶ್ನೆ. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಸಿಸಿ ವಿಶ್ವ ಟಿ20 ಟೂರ್ನಮೆಂಟ್ ನಲ್ಲಿ ಟೀಂ ಇಂಡಿಯಾದ ಮ್ಯಾನೇಜರ್ ಆಗಿದ್ದರು. ಆದರೆ, ಈಗ ಇರುವುದು ಕೊಹ್ಲಿ ಪಡೆ.

ರಿಚರ್ಡ್ ಪೈಬಸ್
ಇಂಗ್ಲೆಂಡ್ ಮೂಲದ ರಿಚರ್ಡ್ ಪೈಬಸ್ ಅವರು ಈ ಹಿಂದೆ ಪಾಕಿಸ್ತಾನ ಹಾಗು ಬಾಂಗ್ಲಾದೇಶ ತಂಡಗಳ ಕೋಚ್ ಆಗಿ ಅನುಭವ ಹೊಂದಿದ್ದಾರೆ. 2013ರಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಸಮಿತಿಯ ನಿರ್ದೇಶಕರಾಗಿದ್ದರು. ಹೀಗಾಗಿ ಮಂಡಳಿ ಹಾಗೂ ಆಟಗಾರ ಒಳ ಜಗಳಗಳು ಪೈಬಸ್ ಗೆ ಹೊಸದೇನಲ್ಲ.

ದೊಡ್ಡ ಗಣೇಶ್
ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಹಾಕಿರುವ ಕರ್ನಾಟಕ ಮೂಲದ ಟೀಂ ಇಂಡಿಯಾದ ಮಾಜಿ ಬೌಲರ್ ದೊಡ್ಡ ಗಣೇಶ್ ಅವರ ಆಯ್ಕೆ ಕ್ಷೀಣ. ಬೌಲಿಂಗ್ ಕೋಚ್ ಹುದ್ದೆ ಇದ್ದಿದ್ದರೆ ಸಾಧ್ಯವಿತ್ತು ಅಷ್ಟೇ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications