Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಕಿಂಗ್ಸ್‌ XI ಪಂಜಾಬ್‌ಗೆ ಕನ್ನಡಿಗ ಅನಿಲ್ ಕುಂಬ್ಳೆ ಮುಖ್ಯ ಕೋಚ್

Anil Kumble to become head coach of Kings XI Punjab

ಬೆಂಗಳೂರು, ಅಕ್ಟೋಬರ್ 11: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಕೆಲವೇ ಕೆಲವು ತಂಡಗಳು ಇನ್ನಷ್ಟೇ ಕಪ್ ಗೆಲ್ಲಬೇಕಿದೆ. ಐಪಿಎಲ್ ಕಪ್ ಗೆಲ್ಲದ ತಂಡಗಳಲ್ಲಿ ಕಿಂಗ್ಸ್‌ XI ಪಂಜಾಬ್ ಕೂಡ ಒಂದು. ಆದರೆ ಈ ಬಾರಿ ಕೆXIಪಿ ತಂಡದಲ್ಲಿ ಮಹತ್ವದ ಬದಲಾವಣೆಯಾಗಿದೆ. ತಂಡದ ಮುಖ್ಯ ಕೋಚ್ ಜವಾಬ್ದಾರಿಯನ್ನು ಕನ್ನಡಿಗ, ಮಾಜಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ವಹಿಸಿಕೊಂಡಿದ್ದಾರೆ.

2020ರ ಐಪಿಎಲ್ ಆವೃತ್ತಿಗಾಗಿ ಸಜ್ಜಾಗುತ್ತಿರುವ ಕಿಂಗ್ಸ್‌ ಇಲೆವೆನ್ ಪಂಜಾಬ್ ಈ ಬಾರಿ ಪ್ರಬಲ ಪೈಪೋಟಿ ನೀಡುವ ಉದ್ದೇಶದಿಂದ ಕೋಚಿಂಗ್ ವಿಭಾಗಕ್ಕೆ ದಂತಕತೆ ಅನಿಲ್ ಕುಂಬ್ಳೆ ಅವರನ್ನು ತಂದಿದೆ. ಕುಂಬ್ಳೆ ಇನ್ನು ಪಂಜಾಬ್ ಫ್ರಾಂಚೈಸಿ ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕರಾಗಿರಲಿದ್ದಾರೆ. ಅಂದ್ಹಾಗೆ ಐಪಿಎಲ್ ತಂಡಕ್ಕೆ ಮುಖ್ಯ ಕೋಚ್‌ ಆಗಿ ಆಯ್ಕೆಯಾಗುತ್ತಿರುವ ಮೊದಲ ಭಾರತೀಯ ಆಟಗಾರ ಕುಂಬ್ಳೆ.

ಕಳೆದೆರಡು ಸೀಸನ್‌ಗಳಲ್ಲಿ ಟೂರ್ನಿಯ ಆರಂಭದಲ್ಲಿ ಪಂಜಾಬ್ ಉತ್ತಮ ಪ್ರದರ್ಶನ ನೀಡಿತ್ತಾದರೂ ಕ್ವಾಲಿಫೈಯರ್‌ಗೆ ಪ್ರವೇಶಿಸುವಲ್ಲಿ ಎಡವಿತ್ತು. ಕೋಚಿಂಗ್ ವಿಭಾಗಕ್ಕೆ ಕುಂಬ್ಳೆ ಆಯ್ಕೆಯಾಗಿರುವುದರಿಂದ ಒಂದೂ ಬಾರಿಯೂ ಟ್ರೋಫಿ ಗೆದ್ದಿರದ ಪಂಜಾಬ್ ಈ ಬಾರಿ ಪ್ರಶಸ್ತಿ ಗೆಲ್ಲುವ ಭರವಸೆಯಲ್ಲಿದೆ. ಪ್ರಶಸ್ತಿ ಗೆಲ್ಲದ ಇನ್ನೆರಡು ತಂಡಗಳೆಂದರೆ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ಪರ ಅತ್ಯಧಿಕ ವಿಕೆಟ್ ದಾಖಲೆ ಹೊಂದಿರುವ ಅನಿಲ್ ಕುಂಬ್ಳೆ ಈ ಮೊದಲು ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ಗೆ ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಎಂಐಗೆ ಕುಂಬ್ಳೆ ಮೆಂಟರ್ ಆಗಿ ಆಯ್ಕೆಯಾಗಿದ್ದು 2013ರಲ್ಲಿ. ವಿಶೇಷವೆಂದರೆ ಅದೇ ವರ್ಷ ಮುಂಬೈ ಐಪಿಎಲ್ ಚೊಚ್ಚಲ ಟ್ರೋಫಿ ಗೆದ್ದಿತ್ತು.

Story first published: Friday, October 11, 2019, 17:09 [IST]
Other articles published on Oct 11, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+