For Quick Alerts
ALLOW NOTIFICATIONS  
For Daily Alerts
 

'ಕಣ್ಣು ಕಣ್ಣು ಕಲೆತಾಗ...': ಸಚಿನ್-ಅಂಜಲಿ ರೋಮ್ಯಾಂಟಿಕ್ ಲವ್ ಸ್ಟೋರಿ!

Anjali Tendulkar revealed her and Sachin Tendulkars love story

ಮುಂಬೈ, ಮಾರ್ಚ್ 24: ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಲು ಸಚಿನ್ ತೆಂಡೂಲ್ಕರ್ ಯಾವಾಗಲೂ ಅಂಜಿಕೊಳ್ಳುತ್ತಾರೆ. ಹೀಗಾಗಿಯೇ ಸಚಿನ್ ಮತ್ತು ಅವರ ಪತ್ನಿ ಅಂಜಲಿ ನಡುವಿನ ರೋಮ್ಯಾಂಟಿಕ್ ಲವ್ ಸ್ಟೋರಿ ಹೆಚ್ಚಿನವರಿಗೆ ಗೊತ್ತಿಲ್ಲ. ಲವ್ ಅಟ್ ಫಸ್ಟ್ ಸೈಟ್ ಅಂತಾರಲ್ಲ? ಸಚಿನ್ ಲವ್ ಸ್ಟೋರಿ ಶುರುವಾಗಿದ್ದೂ ಹೀಗೆಯೇ. ಅಸಲಿಗೆ ಸಚಿನ್ ಮತ್ತು ಅಂಜಲಿ ನಡುವಿನ ಪ್ರೇಮಕತೆ ನಿಜಕ್ಕೂ ಕುತೂಹಲಕಾರಿಯಾಗಿದೆ. ಲವ್ ಮಾಕ್ಟೆಲ್‌ನಲ್ಲಿ ಅದಿತಿಗೆ ಆದಿ ವಿವರಿಸುತ್ತಾ ಹೋಗ್ತಾನಲ್ಲ? ಒಂಥರಾ ಹಾಗೇ ಅನ್ಕೊಳ್ಳಿ.

ಏರ್‌ಪೋರ್ಟ್‌ನಲ್ಲಿ ನಿಂತಿದ್ದ ಅಂಜಲೀನ ಕಂಡೊಡನೆ ಸಚಿನ್‌ ಒಳಗೆ ಪ್ರೀತಿ ಟಿಸಿಲೊಡೆದುಬಿಟ್ಟಿತಂತೆ. ಸಂದರ್ಶನವೊಂದರ ವೇಳೆ ಅಂಜಲಿ ತೆಂಡೂಲ್ಕರ್ ಇವೆಲ್ಲವನ್ನು ಹರವಿಕೊಂಡಿದ್ದಾರೆ. ಹಾಗೆ ಹುಟ್ಟಿಕೊಂಡ ಪ್ರೀತಿ, ಎರಡು ದಶಕಕ್ಕೂ ಮಿಕ್ಕಿ ಸುಖಸಂಸಾರಕ್ಕೂ ನಾಂದಿಯಾಯ್ತಂತೆ. ಹಾಗಾದರೆ ಸಚಿನ್ ಪ್ರೀತಿ ಪಯಣ ಶುರುವಾಗಿದ್ದೆಲ್ಲಿ?

ಲಿಟ್ಲ್‌ ಮಾಸ್ಟರ್ ಸಚಿನ್ ತೆಂಡೂಲ್ಕರ್ ರೋಮ್ಯಾಂಟಿಕ್ ಲವ್ ಸ್ಟೋರಿ ತೆರೆದಿಡೋ ಪ್ರಯತ್ನ ಮಾಡ್ತೀವಿ. ಇದೇ ಸಾಲಿನ ಬೆನ್ನು ಹಿಡಿದು ಹಾಗೇ ಬಂದುಬಿಡಿ..

ಕಣ್ಣು ಕಣ್ಣು ಕಲೆತಾಗ..

ಕಣ್ಣು ಕಣ್ಣು ಕಲೆತಾಗ..

ಸಚಿನ್ ತೆಂಡೂಲ್ಕರ್, ಅಂಜಲಿಯವರನ್ನು ಮೊದಲ ಬಾರಿ ನೋಡಿದ್ದು 1990ರಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ. ಅಂತಾರಾಷ್ಟ್ರೀಯ ಕ್ರಿಕೆಟ್ ಟೂರೊಂದನ್ನು ಮುಗಿಸಿ ಸಚಿನ್ ತವರಿಗೆ ಹಿಂದಿರುಗುವಾಗ, ತನ್ನ ಅಮ್ಮನಿಗಾಗಿ ಕಾಯುತ್ತ ನಿಂತಿದ್ದ ಅಂಜಲಿ ಕಣ್ಣಿಗೆ ಬಿದ್ದುಬಿಟ್ಟರಂತೆ. ಆಗಲೇ ಒಂದರೆಕ್ಷಣ ಇಬ್ಬರ ಕಣ್ಣು ಕಣ್ಣು ಕಲೆತು ಪ್ರೀತಿ ಹುಟ್ಟಿಬಿಟ್ಟಿತಂತೆ. ಇಬ್ಬರಿಗೂ ಪರಸ್ಪರ ಇಷ್ಟವಾಗಿತ್ತಂತೆ. ಆ ಬಳಿಕ ಒಬ್ಬರಿಗೊಬ್ಬರು ಹೆಚ್ಚು ಅರ್ಥವಾಗಲು ಇಬ್ಬರೂ ಸ್ನೇಹಿತರು ಸಾಮಾನ್ಯವಾಗಿ ಭೇಟಿಯಾಗುವ ಜಾಗದಲ್ಲಿ ಜೊತೆಯಾಗಿ ಒಂದರೆಘಳಿಗೆ ಕಳೆಯುತ್ತಿದ್ದರಂತೆ.

'ಸಚಿನ್ ಯಾರೆಂದೇ ಗೊತ್ತಿರಲಿಲ್ಲ'

'ಸಚಿನ್ ಯಾರೆಂದೇ ಗೊತ್ತಿರಲಿಲ್ಲ'

'ಆತನಿಗೆ (ಸಚಿನ್‌ಗೆ) ನಾನು ಯಾಕೆ ಇಷ್ಟವಾದೆ ಎಂದು ಆರಂಭದಲ್ಲಿ ಅನೇಕ ಸಾರಿ ಯೋಚಿಸಿದ್ದೇನೆ. ಯಾಕೆಂದರೆ ಆತನನ್ನು ಮೊದಲ ಬಾರಿ ಭೇಟಿಯಾದಾಗ ನನಗೆ ಕ್ರಿಕೆಟ್ ಬಗ್ಗೆ ಗೊತ್ತಿರಲಿಲ್ಲ. ಅಷ್ಟೇ ಯಾಕೆ ನನಗೆ ಸಚಿನ್ ಯಾರೆಂದೇ ಗೊತ್ತಿರಲಿಲ್ಲ,' ಎಂದು ಸಂದರ್ಶನದ ವೇಳೆ ಮಾತನಾಡುತ್ತ ಅಂಜಲಿ ನಕ್ಕುಬಿಟ್ಟರು.

ಸಚಿನ್ ವೃತ್ತಿ ಬದುಕು ಆರಂಭವಾಗಿತ್ತಷ್ಟೇ

ಸಚಿನ್ ವೃತ್ತಿ ಬದುಕು ಆರಂಭವಾಗಿತ್ತಷ್ಟೇ

ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ಮೊದಲ ಭೇಟಿಯ ವೇಳೆ ಅಂಜಲಿ ವೈದ್ಯಕೀಯ ಅಭ್ಯಾಸ ನಡೆಸುತ್ತಿದ್ದರು. ಸಚಿನ್ ಅವರ ಕ್ರಿಕೆಟ್ ವೃತ್ತಿ ಬದುಕು ಆರಂಭವಾಗಿತ್ತಷ್ಟೇ. ಓದಿನಲ್ಲಿ ಯಾವಾಗಲೂ ಮುಳುಗಿರುತ್ತಿದ್ದ ಅಂಜಲಿಗೆ ಕ್ರಿಕೆಟ್‌ ಬಗ್ಗೆ ಅಂಥ ಆಸಕ್ತಿಯೂ ಇರಲಿಲ್ಲ. ಕ್ರೀಡೆ ಮುಖ್ಯವಾಗಿ ಕ್ರಿಕೆಟ್‌ ಬಗ್ಗೆ ಅಂಜಲಿಗೆ ಏನೇನೂ ತಿಳಿದಿರಲಿಲ್ಲವಂತೆ. ಆದರೆ ಸಚಿನ್-ಅಂಜಲಿ ಡೇಟಿಂಗ್ ಶುರುವಾದ ಬಳಿಕ ಅಂಜಲಿ ಕೊಂಚ ಕೊಂಚವೇ ಕ್ರಿಕೆಟ್‌ ಬಗ್ಗೆ ತಿಳಿದುಕೊಳ್ಳಲು ಆರಂಭಿಸಿದರಂತೆ.

ರೋಜಾ ಸಿನಿಮಾ ವೀಕ್ಷಣೆ

ರೋಜಾ ಸಿನಿಮಾ ವೀಕ್ಷಣೆ

ಸಚಿನ್ ತೆಂಡೂಲ್ಕರ್ ಖ್ಯಾತ ವ್ಯಕ್ತಿಯಾದ್ದರಿಂದ ಅಲ್ಲದೆ ಸಚಿನ್ ವೃತ್ತಿ ಬದುಕು ಆಗಷ್ಟೇ ಆರಂಭವಾಗಿದ್ದರಿಂದ ಸಚಿನ್-ಅಂಜಲಿಗೆ ಡೇಟಿಂಗ್‌ಗೆ ಹೆಚ್ಚಿನ ಅವಕಾಶ ಲಭಿಸುತ್ತಿರಲಿಲ್ಲವಂತೆ. ಹಾಗಾಗಿ ಡೇಟಿಂಗ್ ವೇಳೆಯ ಕೆಲವೇ ಕ್ಷಣಗಳಷ್ಟೇ ನೆನಪಿಗೆ ಬರುತ್ತವೆ ಎಂದ ಅಂಜಲಿ, ಸಚಿನ್ ಮತ್ತು ಕೆಲ ಸ್ನೇಹಿತರೊಂದಿಗೆ 'ರೋಜಾ' ಸಿನಿಮಾ ನೋಡಲು ಹೋಗಿದ್ದನ್ನು ಸ್ಮರಿಸಿಕೊಂಡರು.

ಥಿಯೇಟರ್‌ನಲ್ಲೊಂದು ಫಜೀತಿ

ಥಿಯೇಟರ್‌ನಲ್ಲೊಂದು ಫಜೀತಿ

ಸಚಿನ್ ಖ್ಯಾತ ಕ್ರಿಕೆಟಿಗರಾಗಿದ್ದರಿಂದ ಸಚಿನ್ ಜೊತೆ ಸುತ್ತಾಡುವಾಗ ಅವರಿವರು ಗುರುತು ಹಿಡಿಯುತ್ತಾರೆ ಅನ್ನೋ ಭಯವೂ ಸಚಿನ್-ಅಂಜಲಿಗೆ ಇತ್ತಂತೆ. ಹೀಗಾಗಿ ರೋಜಾ ಸಿನಿಮಾ ನೋಡಲು ಹೋಗಿದ್ದಾಗ ಸಚಿನ್, ಫೇಕ್ ಗಡ್ಡ ಮತ್ತು ಕನ್ನಡಕ ಧರಿಸಿ, ವೇ‍ಷ ಬದಲಿಸಿ ಹೋಗಿದ್ದರು. ಇಬ್ಬರೂ ಥಿಯೇಟರ್ ಬಳಿ ಹೋಗುವಾಗ ಸಿನಿಮಾ ಆಗಲೇ ಚಾಲೂ ಆಗಿತ್ತು. ಆದರೆ ಇಂಟರ್ವಲ್ ವೇಳೆ ಸಚಿನ್ ಕನ್ನಡಕ ಕೆಳಗೆ ಬಿತ್ತು. ಸಿನಿಮಾ ವೀಕ್ಷಣೆಗೆ ಬಂದಿದ್ದವರಿಗೆಲ್ಲ ಸಚಿನ್ ಗುರುತು ಸಿಕ್ಕಿತು. ಸಚಿನ್ ಅಭಿಮಾನಿಗಳೆಲ್ಲ ಆಗ ಸುತ್ತುವರೆದಿದ್ದರು. ಹೀಗಾಗಿದ್ದರಿಂದ ಇಬ್ಬರೂ ಅರ್ಧದಿಂದಲೇ ಸಿನಿಮಾದಿಂದ ಎದ್ದುಬರಬೇಕಾಗಿತ್ತು ಎಂದು ಅಂಜಲಿ ಹಿಂದಿನ ಫಜೀತಿಯ ಕ್ಷಣವೊಂದನ್ನು ನೆನಪಿಸಿಕೊಂಡರು.

ಅಂಜಲಿ, ಸಚಿನ್‌ಗೆ 6 ವರ್ಷ ದೊಡ್ಡವರು

ಅಂಜಲಿ, ಸಚಿನ್‌ಗೆ 6 ವರ್ಷ ದೊಡ್ಡವರು

ಜನಪ್ರಿಯ ಕೈಗಾರಿಕೋದ್ಯಮಿ ಅಶೋಕ್ ಮೆಹ್ತಾ ಮಗಳಾಗಿದ್ದ ಅಂಜಲಿ, ಸಚಿನ್ ರನ್ನು ವರಿಸಿದ್ದು 24 ಮೇ 1995ರಂದು. ಅಂದರೆ ಡೇಟಿಂಗ್ ಆರಂಭಿಸಿ ಸುಮಾರು 5 ವರ್ಷಗಳ ಬಳಿಕ. ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿರಿಸಿ ಈಗ ಸುಮಾರು 22 ವರ್ಷಗಳೇ ಕಳೆದಿವೆ. ಅಂಜಲಿ ತೆಂಡೂಲ್ಕರ್, ಸಚಿನ್ ಗೆ 6 ವರ್ಷ ದೊಡ್ಡವರು. ಆದರೆ ವಯಸ್ಸಿನ ಅಂತರ ಇಬ್ಬರಿಗೂ ಯಾವತ್ತಿಗೂ ಅಡ್ಡಿಎನಿಸಿಲ್ಲ ಎಂದು ಖುಷಿಯಲ್ಲೇ ಹೇಳುತ್ತಾರೆ ಅಂಜಲಿ.

ಅಪ್ಪ-ಅಮ್ಮನಾದ ಖುಷಿ

ಅಪ್ಪ-ಅಮ್ಮನಾದ ಖುಷಿ

ಸಚಿನ್-ಅಂಜಲಿ ಜೋಡಿಗೆ ಮೊದಲ ಮಗುವಾಗಿದ್ದು 12 ಅಕ್ಟೋಬರ್ 1997ರಲ್ಲಿ. ಪುತ್ರಿ ಸರಾ ಆಗ ಜನಿಸಿದ್ದರು. ಅದಾಗಿ 24 ಸೆಪ್ಟೆಂಬರ್ 1999 ಪುತ್ರ ಅರ್ಜುನ್ ಜನಿಸಿದರು. ಮಕ್ಕಳು ಜನಿಸಿದ ಕೆಲ ವರ್ಷಗಳ ಬಳಿಕ ಅಂಜಲಿ ತನ್ನ ಉದ್ಯೋಗವನ್ನು ತ್ಯಜಿಸಿದರಂತೆ. ಪತಿ ಮತ್ತು ಮಕ್ಕಳೊಂದಿಗೆ ಕಳೆಯುವ ಅಭಿಲಾಷೆಯಿಂದ ಉದ್ಯೋಗ ಬಿಟ್ಟು ಬಿಟ್ಟೆ ಎನ್ನುತ್ತಾರೆ ಅಂಜಲಿ. ಇವಿಷ್ಟು ಸಚಿನ್-ಅಂಜಲಿ ನಡುವಿನ ಲವ್ ಸ್ಟೋರಿಯ ಕೆಲ ಪ್ರಮುಖ ಸಂಗತಿಗಳು. ಇನ್ನುಳಿದಂತೆ ಸಚಿನ್ ಅವರ ಕ್ರಿಕೆಟ್‌ನಲ್ಲಿನ ಸಾಧನೆ, ದಾಖಲೆಗಳು ನಿಮಗೇ ಗೊತ್ತಿವೆ.

Story first published: Tuesday, March 24, 2020, 15:45 [IST]
Other articles published on Mar 24, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+