Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೋಲ್ಕತ್ತಾದಲ್ಲಿ ಕ್ರೀಡಾ ದುರಂತ: ಮತ್ತೆ ಕ್ರಿಕೆಟರ್ ತಲೆಗೆ ಪೆಟ್ಟು

ಕೋಲ್ಕತ್ತಾ, ಏ.21: ಯುವ ಕ್ರಿಕೆಟರ್ ಅಂಕಿತ್ ಕೇಶ್ರಿ ಸಾವಿನ ಸುದ್ದಿ ಬೆನ್ನಲ್ಲೇ ಮತ್ತೊಬ್ಬ ಆಟಗಾರನಿಗೆ ಮೈದಾನದಲ್ಲಿ ಪೆಟ್ಟು ತಗುಲಿದ ಘಟನೆ ನಡೆದಿದೆ. ರಾಹುಲ್ ಘೋಶ್ ಎಂಬ ಆಟಗಾರರ ತಲೆಗೆ ಭಾರಿ ಹೊಡೆತ ಬಿದ್ದಿದ್ದು ಸದ್ಯಕ್ಕೆ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಸ್ಥಳೀಯ ಲೀಗ್ ಪಂದ್ಯವೊಂದರಲ್ಲಿ ಆಡುತ್ತಿದ್ದ ರಾಹುಲ್ ಘೋಶ್ ಅವರ ತಲೆಯ ಎಡಭಾಗಕ್ಕೆ ಪೆಟ್ಟು ತಗುಲಿದೆ. ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿದ ರಾಹುಲ್ ರನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. [ಕ್ರಿಕೆಟ್ ಆಟವಾಡುವಾಗ ಡಿಕ್ಕಿ, ಆಟಗಾರ ದುರಂತ ಸಾವು]

Another cricketer hospitalised in Kolkata with head injury

ಸಿಟಿ ಸ್ಕ್ಯಾನ್ ಮಾಡಿಸಿದಾಗ ರಕ್ತ ಹೆಪ್ಪುಗಟ್ಟಿರುವುದು ಕಂಡು ಬಂದಿದೆ. ಅದರೆ, ರಾಹುಲ್ ಅಪಾಯದಿಂದ ಪಾರಾಗಿದ್ದು, ಎಂಟು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿರಿಸಿ ಗಮನಿಸಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. [ದುರಂತ ಅಂತ್ಯ ಕಂಡ ಕ್ರಿಕೆಟರ್ಸ್ ಪಟ್ಟಿ: ಹ್ಯೂಸ್ #12]

ಅಂಕಿತ್ ಸಾವಿನ ಸೂತಕ : ಪಶ್ಚಿಮ ಬಂಗಾಲ ಕ್ರಿಕೆಟ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೂ ಅಂಕಿತ್ ಸಾವಿನ ಸೂತಕ ತಗುಲಿತ್ತು. ಕೆಕೆಆರ್ ಗೆಲುವಿನ ನಡುವೆಯೂ ಅಂಕಿತ ಸಾವಿನ ದುಃಖದ ಶ್ರದ್ಧಾಂಜಲಿ ಅರ್ಪಿಸಿದರು. ಈ ನಡುವೆ ಆಟಗಾರರ ಸುರಕ್ಷತೆ ಬಗ್ಗೆ ಕ್ರಿಕೆಟ್ ಮಂಡಳಿ ಸರಿಯಾದ ಕ್ರಮ ಜರುಗಿಸುತ್ತಿಲ್ಲ ಎಂದು ಸಿಎಬಿ ವಿರುದ್ಧ ಮಾಜಿ ಆಟಗಾರರು ಕಿಡಿ ಕಾರಿದ್ದಾರೆ.

ಅಂಕಿತ್ ಸಾವಿಗೆ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ ಸೇರಿದಂತೆ ಮಾಜಿ ಕ್ರಿಕೆಟರ್ಸ್ ಕಂಬನಿ ಮಿಡಿದಿದ್ದಾರೆ.(ಐಎಎನ್ಎಸ್)

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+