For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಆಟವಾಡುವಾಗ ಡಿಕ್ಕಿ, ಆಟಗಾರ ದುರಂತ ಸಾವು

By Mahesh

ಕೋಲ್ಕತ್ತಾ, ಏ.20: ಪಶ್ಚಿಮ ಬಂಗಾಲದ ಅಂಡರ್ 19 ತಂಡದ ನಾಯಕ ಅಂಕಿತ್ ಕೇಶ್ರಿ ದುರಂತ ಸಾವನ್ನಪ್ಪಿದ್ದಾರೆ. ಮೈದಾನದಲ್ಲಿ ಆಟವಾಡುವಾಗ ಪೆಟ್ಟು ತಿಂದು ತೀವ್ರವಾಗಿ ಗಾಯಗೊಂಡಿದ್ದ ಅಂಕಿತ್ ಅವರು ಸೋಮವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪೂರ್ವ ಬಂಗಾಲ ತಂಡದ ಪರ ಆಡುತ್ತಿದ್ದ ಪ್ರತಿಭಾವಂತ ಯುವ ಕ್ರಿಕೆಟರ್ ಅಂಕಿತ್ ಅವರು ಶುಕ್ರವಾರ ಕ್ಲಬ್ ಕ್ರಿಕೆಟ್ ಪಂದ್ಯವಾಡುವಾಗ ತಲೆಗೆ ಪೆಟ್ಟು ತಿಂದಿದ್ದರು. ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು. [ಕ್ರೀಡಾ ದುರಂತ: ಮತ್ತೆ ಕ್ರಿಕೆಟರ್ ತಲೆಗೆ ಪೆಟ್ಟು]

ಅದರೆ, ಚಿಕಿತ್ಸೆ ಫಲಕಾರಿಯಾಗಲಿಲ್ಲ. ಸೋಮವಾರ ಮುಂಜಾನೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದರು ಎಂದು ವೈದ್ಯರು ಹೇಳಿದ್ದಾರೆ.

Kolkata club cricketer dies after receiving injury on field


ಘಟನೆ ವಿವರ: ಈಸ್ಟ್ ಬೆಂಗಾಲ ಪರ ಅಂಕಿತ್ ಆಡುತ್ತಿದ್ದರು. ಸಿಎಎಬಿ ನಾಕೌಟ್ ಟೂರ್ನಿಯ ಪಂದ್ಯ ಭವಾನಿಪುರ್ ನಲ್ಲಿ ನಡೆದಿತ್ತು. ಮ್ಯಾಚ್ ನಡುವೆ ಕ್ಯಾಚ್ ವೊಂದನ್ನು ಹಿಡಿಯಲು ಅಂಕಿತ್ ಹಾಗೂ ಮತ್ತೊಬ್ಬ ಆಟಗಾರ ಸೌರವ್ ಮಂಡಲ್ ಇಬ್ಬರು ಓಡಿದ್ದಾರೆ.

ಕ್ಯಾಚ್ ಹಿಡಿಯುವ ಭರದಲ್ಲಿ ಅಂಕಿತ್ ತಲೆ ಹಾಗೂ ತೋಳಿಗೆ ಸೌರವ್ ಡಿಕ್ಕಿ ಹೊಡೆದಿದ್ದಾರೆ. ತಲೆಗೆ ತೀವ್ರ ಪೆಟ್ಟು ತಿಂದಿದ್ದಾರೆ. ಸ್ಥಳದಲ್ಲೇ ಕುಸಿದು ಬಿದ್ದ ಅಂಕಿತ್ ರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತು. [ದುರಂತ ಅಂತ್ಯ ಕಂಡ ಕ್ರಿಕೆಟರ್ಸ್ ಪಟ್ಟಿ: ಹ್ಯೂಸ್ #12]

ಬಲಗೈ ಬ್ಯಾಟ್ಸ್ ಮನ್ ಹಾಗೂ ಲೆಗ್ ಬ್ರೇಕ್ ಗೂಗ್ಲಿ ಬೌಲರ್ ಆಗಿದ್ದ ಅಂಕಿತ್ ಅವರ ಸಾವಿನ ಸುದ್ದಿ ಕೇಳಿ ಕೋಲ್ಕತ್ತಾದ ಯುವ ಕ್ರಿಕೆಟರ್ ಗಳು ಬೆಚ್ಚಿದ್ದಾರೆ.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಕಳೆದ ವರ್ಷ ನವೆಂಬರ್ ನಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಆಟಗಾರ ಫಿಲ್ ಹ್ಯೂಸ್ ಅವರು ಬೌನ್ಸರ್ ನಿಂದ ತಲೆಗೆ ಪೆಟ್ಟು ತಿಂದು ಸಾವನ್ನಪ್ಪಿದ್ದ ದುರ್ಘಟನೆ ಇನ್ನೂ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಿಂದ ಮಾಸಿಲ್ಲ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:02 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+