2020ರ ಐಪಿಎಲ್‌ಗೆ ಮತ್ತೊಂದು ಹಿನ್ನಡೆ, ಟೂರ್ನಿ ಆರಂಭ ವಿಳಂಬ ಸಾಧ್ಯತೆ!

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗೆ ಸಾಲು ಸಾಲಾಗಿ ಹಿನ್ನಡೆಯ ವಿಚಾರಗಳು ಎದುರಾಗುತ್ತಿವೆ. ಸದ್ಯ ತಿಳಿಸಲಾಗಿರುವ ದಿನಾಂಕದಂದು ಐಪಿಎಲ್ ಆರಂಭವಾಗುವ ಅನುಮಾನ ಬೆಳೆಯುತ್ತಾ ಹೋಗುತ್ತಿದೆ. ಐಪಿಎಲ್ ಪ್ರಸಾರ ಮಾಡುವ ಟಿವಿ ಸಿಬ್ಬಂದಿಯೊಬ್ಬರಿಗೆ ಕೊರೊನಾ ಇರುವುದು ಕಂಡುಬಂದಿದೆ. ಹೀಗಾಗಿ ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾಗಬೇಕಿರುವ ನಗದು ಶ್ರೀಮಂತ ಟೂರ್ನಿ ಮುಂದೂಡಲ್ಪಟ್ಟರೂ ಅಚ್ಚರಿಯಿಲ್ಲ.
ಐಪಿಎಲ್ ನಿಮಿತ್ತ ಆಗಸ್ಟ್ 31ರ ಸೋಮವಾರ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ತೆರಳಬೇಕಿದ್ದ 'ಸ್ಟಾರ್' ಪ್ರೊಡಕ್ಷನ್ ಸಿಬ್ಬಂದಿಯೊಬ್ಬರಿಗೆ ಕೊರೊನಾವೈರಸ್ ಸೋಂಕು ಪಾಸಿಟಿವ್ ಬಂದಿದೆ.
ಇದು ಐಪಿಎಲ್‌ನ ಅಧಿಕೃತ ಪ್ರಸಾರಕ ಸ್ಟಾರ್ ನೆಟ್ವರ್ಕ್ಸ್ ತಾನು ಪ್ರಸಾರ ಹಕ್ಕುಗಳನ್ನು ಮುಂದೂಡುವ ಸಾಧ್ಯತೆಗೆ ಎಡೆ ಮಾಡಿಕೊಟ್ಟಿದೆ.

13 ಮಂದಿಗೆ ಕೊರೊನಾ
ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್‌ಗಾಗಿ ತಯಾರಿಯಲ್ಲಿದ್ದ ಇಬ್ಬರು ಆಟಗಾರರು ಸೇರಿ ಒಟ್ಟು 13 ಮಂದಿಗೆ ಈಗಾಗಲೇ ಕೊರೊನಾ ಸೋಂಕು ತಗುಲಿರುವುದು ವರದಿಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರಾದ ದೀಪಕ್ ಚಹಾರ್ ಮತ್ತು ರುತುರಾಜ್ ಗಾಯಕ್ವಾಡ್‌ಗೆ ಕೊರೊನಾ ಪಾಸಿಟಿವ್ ಬಂದಿತ್ತು.

ಕೋವಿಡ್ 19 ಪರೀಕ್ಷೆ
'ಆಗಸ್ಟ್ 31ರಂದು ಯುಎಇಗೆ ತಲುಪುವಂತೆ ತನ್ನ ಸಿಬ್ಬಂದಿಗಳಿಗೆ ಸ್ಟಾರ್ ಹೇಳಿತ್ತು. ಕೊರೊನಾ ಪರೀಕ್ಷೆಯ ಬಳಿಕವೇ ಯುಎಇಗೆ ಹೊರಡುವಂತೆ ತಿಳಿಸಲಾಗಿದ್ದರಿಂದ ಪ್ರಸಾರಕದ ಮಾರ್ಗಸೂಚಿಯಂತೆ ಶನಿವಾರ ಕೋವಿಡ್ 19 ಪರೀಕ್ಷೆ ನಡೆಸಲಾಗಿತ್ತು,' ಎಂದು ಮೂಲವೊಂದು ಐಎಎನ್‌ಎಸ್‌ಗೆ ಹೇಳಿದೆ.

ವಿಮಾನಯಾನ ರದ್ದು
'ಕೊರೊನಾ ಪರೀಕ್ಷೆ ನಡೆಸಿದವರಲ್ಲಿ ಒಬ್ಬರಿಗೆ ಕೊರೊನಾವೈರಸ್ ಸೋಂಕು ಪಾಸಿಟಿವ್ ಬಂದಿದೆ. ಈ ವಿಚಾರ ತಿಳಿದ ತಕ್ಷಣ ಪ್ರಸಾರಕ ಎಲ್ಲಾ ಸಿಬ್ಬಂದಿಗಳಿಗೆ ಮತ್ತೊಂದು ಸೂಚನೆ ಕಳುಹಿಸಿ, ಆಗಸ್ಟ್ 31ರಂದು ಯುಎಇಗೆ ಹೊರಡಲಿದ್ದ ವಿಮಾನಯಾವನ್ನು ಮುಂದೂಡಲು ಹೇಳಿದೆ,' ಎಂದು ಅದೇ ಮೂಲ ಮಾಹಿತಿ ನೀಡಿದೆ.

ಸಮಸ್ಯೆಯಲ್ಲಿ ಸಿಎಸ್‌ಕೆ
ಈ ಮೊದಲು ಕೊರೊನಾ ತಗುಲಿದ್ದ 13 ಮಂದಿಯೂ ಸಿಎಸ್‌ಕೆಯವರಾಗಿದ್ದರು. ಇಬ್ಬರು ಆಟಗಾರರ ಜೊತೆ 11 ಸಿಬ್ಬಂದಿಗಳು ಕೋವಿಡ್ 19ಗೆ ಈಡಾಗಿದ್ದರು. ಇದರ ಜೊತೆಗೆ ಸಿಎಸ್‌ಕೆ ಆಟಗಾರ ಸುರೇಶ್ ರೈನಾ ಫ್ರಾಂಚೈಸಿ ಜೊತೆಗಿನ ಮನಸ್ತಾಪದಿಂದಾಗಿ ಟೂರ್ನಿಯಿಂದಲೇ ದೂರ ಉಳಿಯಲಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಂದಾಗಿ ಐಪಿಎಲ್ ಆರಂಭಿಕ ಪಂದ್ಯದಲ್ಲಿ ಸಿಎಸ್‌ಕೆ ಬದಲು ಎಂಐ-ಆರ್‌ಸಿಬಿ ಕಾದಾಡಲಿದೆ ಎನ್ನುವ ಮಾತುಗಳೂ ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications