IPL ಇತಿಹಾಸದಲ್ಲಿಯೇ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ ಡೆಲ್ಲಿ ಬೌಲರ್: 156.22kmph

ಐಪಿಎಲ್ 13ನೇ ಆವೃತ್ತಿಯ 30ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 13ರನ್‌ಗಳ ಗೆಲುವನ್ನು ದಾಖಲಿಸಿತು. ಇದೇ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಅನ್ರಿಕ್ ನೊರ್ಕಿಯಾ ವಿಶೇಷ ದಾಖಲೆಯೊಂದನ್ನ ಸೃಷ್ಟಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಓಪನರ್ ಜೋಸ್ ಬಟ್ಲರ್‌ನನ್ನು ತನ್ನ ಖಡಕ್ ಯಾರ್ಕರ್ ಮೂಲಕ ಔಟ್ ಮಾಡಿದ್ದ ಅನ್ರಿಕ್ ನೊರ್ಕಿಯಾ ತನ್ನ ನಾಲ್ಕು ಓವರ್‌ಗಳ ಸ್ಪೆಲ್ ವೇಗದ ಬೌಲಿಂಗ್ ದಾಖಲೆ ಮಾಡಿದ್ದಾರೆ.
ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ವೇಗದ ಬೌಲಿಂಗ್ (156.22kmph) ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಇದು ಐಪಿಎಲ್‌ನಲ್ಲಿ ಅತ್ಯಂತ ವೇಗದ ಬೌಲ್ ಆದರೆ ಎರಡು ಮತ್ತು ಮೂರನೇ ಸ್ಥಾನವನ್ನೂ ಕೂಡ ಈತನೇ ಆಕ್ರಮಿಸಿದ್ದಾನೆ.
ಎರಡನೇ ವೇಗದ ಎಸೆತ 155.21kmph ಮತ್ತು 154.74kmph ಮೂರನೇ ವೇಗದ ಎಸೆತವಾಗಿ ದಾಖಲಾಗಿದೆ. ಈತನಿಗೂ ಮೊದಲು ಪ್ರಸ್ತುತ ಆರ್‌ಸಿಬಿ ತಂಡದಲ್ಲಿರುವ ದಕ್ಷಿಣ ಆಫ್ರಿಕಾದ ಹಿರಿಯ ವೇಗಿ ಡೇಲ್ ಸ್ಟೇಟ್ ದಾಖಲೆಯನ್ನು ಹೊಂದಿದ್ದರು(154.40 kmph). ಇದೀಗ ಅವರದ್ದೇ ದೇಶದ ಮತ್ತೋರ್ವ ಬೌಲರ್ ಆದ ಈ ಸಾಧನೆ ಮಾಡಿರುವುದು ವಿಶೇಷ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications