ಪತಿ ವಿರಾಟ್ ಕೊಹ್ಲಿಯೊಂದಿಗಿನ ಸುಂದರ ಚಿತ್ರ ಹಂಚಿಕೊಂಡ ಅನುಷ್ಕಾ ಶರ್ಮಾ; ಫೋಟೊ ವೈರಲ್

ಭಾರತ ಹಿರಿಯರ ಕ್ರಿಕೆಟ್ ಆಯ್ಕೆ ಸಮಿತಿ ಸೋಮವಾರ ಸಭೆ ನಡೆಸಿದ ನಂತರ, ಮುಂಬರುವ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ 15 ಸದಸ್ಯರ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ರೋಹಿತ್ ಶರ್ಮಾ ಮೊದಲ ಬಾರಿಗೆ ಐಸಿಸಿ ಟೂರ್ನಮೆಂಟ್‌ನಲ್ಲಿ ಭಾರತವನ್ನು ಮುನ್ನಡೆಸಲಿದ್ದು, ಆರಂಭಿಕ ಬ್ಯಾಟರ್ ಕೆಎಲ್ ರಾಹುಲ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ.
ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ತಂಡದಲ್ಲಿರುವ ಇತರ ಇಬ್ಬರು ಅಗ್ರ ಕ್ರಮಾಂಕದ ಬ್ಯಾಟರ್‌ಗಳಾಗಿದ್ದು, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್ ದೀಪಕ್ ಹೂಡಾ ಕೂಡ ಹೆಸರಿಸಿದ್ದಾರೆ. ಹಾರ್ದಿಕ್ ಪಾಂಡ್ಯ ತಂಡದಲ್ಲಿ ಸ್ಟಾರ್ ಆಲ್‌ರೌಂಡರ್ ಆಗಿದ್ದು, ದಿನೇಶ್ ಕಾರ್ತಿಕ್ ಮತ್ತು ರಿಷಭ್ ಪಂತ್ ಜೋಡಿಯನ್ನು ವಿಕೆಟ್ ಕೀಪರ್ ಕಂ ಬ್ಯಾಟರ್ ಆಯ್ಕೆಯಾಗಿ ಸೇರಿಸಿಕೊಳ್ಳಲಾಗಿದೆ.
ಇನ್ನು ಇತ್ತ ಭಾರತದ ಹಿರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ತಮ್ಮ ಪತಿಯೊಂದಿಗಿನ ಸುಂದರವಾದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಇಬ್ಬರೂ ಕಾಫಿ ಅಥವಾ ಚಹಾ ಕಪ್ ನೀಡಿದು ಆನಂದಿಸುತ್ತಿದ್ದಾರೆ. ಭಾರತದ ಹೊರಗೆ ಎಲ್ಲೋ ತಮ್ಮ ಬಿಸಿ ಪಾನೀಯವನ್ನು ಆನಂದಿಸುತ್ತಿರುವ ರೊಮ್ಯಾಂಟಿಕ್ ಚಿತ್ರದಲ್ಲಿ ಕೊಹ್ಲಿ ಮತ್ತು ಅನುಷ್ಕಾ ಸಂಭಾಷಣೆ ನಡೆಸುತ್ತಿರುವುದು ಕಂಡುಬಂದಿದೆ.

ವಿರಾಟ್ ಕೊಹ್ಲಿ 1,020 ದಿನಗಳ ನಂತರ ಶತಕ
ಅನುಷ್ಕಾ ಶರ್ಮಾ ಪ್ರಸ್ತುತ ಲಂಡನ್‌ನಲ್ಲಿ ತನ್ನ ಮುಂಬರುವ ಚಿತ್ರ 'ಚಕ್ಡಾ ಎಕ್ಸ್‌ಪ್ರೆಸ್' ಚಿತ್ರೀಕರಣದಲ್ಲಿದ್ದಾರೆ. ಬಾಲಿವುಡ್ ನಟಿ ಚಿತ್ರವನ್ನು ಹಂಚಿಕೊಂಡ ತಕ್ಷಣ, ಪೋಸ್ಟ್‌ಗೆ ಅಭಿಮಾನಿಗಳು ಮತ್ತು ಸ್ನೇಹಿತರಿಂದ ಹೃದಯ ಎಮೋಜಿಗಳ ಮಳೆ ಸುರಿಯಿತು.
ಇತ್ತೀಚೆಗೆ, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ 1,020 ದಿನಗಳ ನಂತರ ತಮ್ಮ ಅಂತಾರಾಷ್ಟ್ರೀಯ ಶತಕದ ಬರವನ್ನು ಕೊನೆಗೊಳಿಸಿದರು. ಗುರುವಾರ (ಸೆಪ್ಟೆಂಬರ್ 8) ದುಬೈನಲ್ಲಿ ನಡೆದ ಏಷ್ಯಾ ಕಪ್ 2022ರ ತಮ್ಮ ಅಂತಿಮ ಸೂಪರ್ 4 ಘರ್ಷಣೆಯಲ್ಲಿ ಭಾರತವು ಅಫ್ಘಾನಿಸ್ತಾನವನ್ನು ಸೋಲಿಸುವ ಮೂಲಕ 61 ಎಸೆತಗಳಲ್ಲಿ 122 ರನ್ ಗಳಿಸಿದರು.
ನನಗೆ ಸರಿಯಾದ ರೀತಿಯ ಮಾರ್ಗದರ್ಶನವನ್ನು ನೀಡುತ್ತಿದ್ದಳು
ವಿರಾಟ್ ಕೊಹ್ಲಿ ತಮ್ಮ 71ನೇ ಅಂತಾರಾಷ್ಟ್ರೀಯ ಶತಕ ಮತ್ತು ಚೊಚ್ಚಲ ಟಿ20 ಶತಕವನ್ನು ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಾಮಿಕಾ ಅವರಿಗೆ ಅರ್ಪಿಸಿದ್ದಾರೆ.
"ನಾನು ಈ ಕಠಿಣ ಸಮಯದಲ್ಲಿ ನನ್ನೊಂದಿಗೆ ನಿಂತಿದ್ದ ಒಬ್ಬ ವಿಶೇಷ ವ್ಯಕ್ತಿಯನ್ನು ಉಲ್ಲೇಖಿಸುತ್ತೇನೆ, ಅದು ಅನುಷ್ಕಾ. ಅವರು ಈ ಎಲ್ಲಾ ತಿಂಗಳುಗಳಲ್ಲಿ ನನ್ನ ಸಂಪೂರ್ಣ ಕಳಪೆ ಪ್ರದರ್ಶನ ನೋಡಿದ್ದರಿಂದ ನಾನು ಅವಳನ್ನು ಉಲ್ಲೇಖಿಸಿದೆ. ಅವಳು ನನಗೆ ಪರಿಸ್ಥಿತಿಗಳನ್ನು ದೃಷ್ಟಿಕೋನದಲ್ಲಿ ಇರಿಸುತ್ತಿದ್ದಳು, ನನಗೆ ಸರಿಯಾದ ರೀತಿಯ ಮಾರ್ಗದರ್ಶನವನ್ನು ನೀಡುತ್ತಿದ್ದಳು. ದೃಷ್ಟಿ ಮುಂದೆ ಇಡುವಂತೆ ಹೇಳುತ್ತಿದ್ದಳು ಮತ್ತು ನಾನು ಶಾಂತ ವ್ಯಕ್ತಿಯಾಗಿ ಫಾರ್ಮ್‌ಗೆ ಮರಳಿದೆ," ಎಂದು ವಿರಾಟ್ ಕೊಹ್ಲಿ ತಿಳಿಸಿದರು.

ಪತ್ನಿ ಮತ್ತು ಮಗಳಿಗೆ ಶತಕ ಅರ್ಪಿಸಿದ ವಿರಾಟ್ ಕೊಹ್ಲಿ
"ಹೊರಗೆ ಬಹಳಷ್ಟು ಸಂಗತಿಗಳು ಹೋಗುತ್ತಿವೆ ಎಂದು ನನಗೆ ತಿಳಿದಿದೆ ಮತ್ತು ನಾನು ನನ್ನ ಉಂಗುರವನ್ನು ಚುಂಬಿಸಿದೆ. ನಾನು ಇಲ್ಲಿ ನಿಂತಿರುವುದನ್ನು ನೀವು ನೋಡುತ್ತಿದ್ದಿರೆಂದರೆ, ಅದಕ್ಕೆ ಆನುಷ್ಕಾ ಕಾರಣ. ಈ ಶತಕ ಅವಳಿಗೆ ಮತ್ತು ನಮ್ಮ ಪುಟ್ಟ ಮಗಳು ವಾಮಿಕಾಗೆ. ಆರು ವಾರಗಳ ರಜೆ ನನಗೆ ರಿಫ್ರೆಶ್ ಆಯಿತು. ನಾನು ಎಷ್ಟು ದಣಿದಿದ್ದೇನೆ ಎಂದು ನನಗೆ ಅರಿವಾಯಿತು," ಎಂದು ಅಫ್ಘಾನ್ ವಿರುದ್ಧ ಶತಕ ಬಾರಿಸಿದ ನಂತರ ಕೊಹ್ಲಿ ಹೇಳಿದ್ದರು.
ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಕೂಡ ಶತಕದ ನಂತರ ಪತಿ ವಿರಾಟ್ ಕೊಹ್ಲಿಗೆ ರೊಮ್ಯಾಂಟಿಕ್ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಈಗಾಗಲೇ 1.7 ಮಿಲಿಯನ್ ಲೈಕ್‌ಗಳೊಂದಿಗೆ ವೈರಲ್ ಆಗುತ್ತಿದೆ. "ಯಾವುದೇ ಹಂತದಲ್ಲಿ ಮತ್ತು ಎಲ್ಲ ಸನ್ನಿವೇಶದಲ್ಲಿ ಶಾಶ್ವತವಾಗಿ ನಿಮ್ಮೊಂದಿಗಿರುತ್ತೇನೆ" ಎಂದು ಅನುಷ್ಕಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications