Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶ್ರೀಲಂಕಾದಲ್ಲಿ ಸಸಿ ನೆಟ್ಟ ಕೊಹ್ಲಿ- ಅನುಷ್ಕಾ ಜೋಡಿ

ದಂಬುಲಾ, ಆಗಸ್ಟ್ 20: ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಹಾಗೂ ಅವರ ಗೆಳತಿ ಅನುಷ್ಕಾ ಶರ್ಮ ಅವರು ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಒಂದೊಳ್ಳೆ ಕಾರ್ಯ ಮಾಡಿದ್ದಾರೆ.

ಏಕದಿನ ಸರಣಿಗೆ ಶ್ರೀಲಂಕಾ ತಂಡ

ಅನುಷ್ಕಾ ಹಾಗೂ ಕೊಹ್ಲಿ ಒಟ್ಟಾಗಿ ಓಡಾಡುವುದು, ಹೋಟೆಲ್, ಮಾಲ್ ಗಳಲ್ಲಿ ಸುತ್ತಾಡಿ ಸೆಲ್ಫಿ ಫೋಟೊ ಹಾಕಿಕೊಳ್ಳುವುದು ಮಾಮೂಲಿ. ಆದರೆ, ಈ ಬಾರಿ ಇಬ್ಬರೂ ಪರಿಸರ ಕಾಳಜಿ ಮೆರೆದು, ದಂಬುಲ್ಲಾದಲ್ಲಿ ಸಸಿ ನೆಟ್ಟಿದ್ದಾರೆ.

ಏಕದಿನ & ಟಿ20 ತಂಡಕ್ಕೆ ಮರಳಿದ ಪಾಂಡೆ, ಯುವಿ ಔಟ್


ಇಬ್ಬರು ಸಸಿಗೆ ನೀರು ಹಾಕುತ್ತಿರುವ ಫೋಟೋ ಸದ್ಯ ವೈರಲ್‌ ಆಗಿದೆ. ವಿರಾಟ್ ಕೊಹ್ಲಿ ಅವರ ಅಭಿಮಾನಿ ಬಳಗದಿಂದ ಮೊದಲಿಗೆ ಹಂಚಿಕೆಯಾದ ಈ ಫೋಟೋಗಳು ಟ್ವಿಟ್ಟರ್ ನಲ್ಲಿ ಹರಿದಾಡುತ್ತಿವೆ.

ಗ್ಯಾಲರಿ: ಶ್ರೀಲಂಕಾ ಪ್ರವಾಸದಲ್ಲಿ ಮಿಂಚುತ್ತಿರುವ ಟೀಂ ಇಂಡಿಯಾ

ಆಗಸ್ಟ್ 20ರಿಂದ ಸೆಪ್ಟೆಂಬರ್ 03ರ ತನಕ ಏಕದಿನ ಪಂದ್ಯಗಳು ನಡೆಯಲಿದ್ದು, ಏಕೈಕ ಟಿ20 ಪಂದ್ಯ ಸೆಪ್ಟೆಂಬರ್ 06ರಂದು ನಡೆಯಲಿದೆ.

ವಿದೇಶದಲ್ಲಿ ಭಾರತಕ್ಕೆ ಸಂಪೂರ್ಣ ಸರಣಿ ಜಯ

ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿರುವ ಕೊಹ್ಲಿ ಪಡೆ ಈಗ ಏಕದಿನ ಸರಣಿ ಹಾಗೂ ಏಕೈಕ ಟಿ20 ಪಂದ್ಯವಾಡಲು ಸಜ್ಜಾಗಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+