ಈ ಬಾರಿಯ ಐಪಿಎಲ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕೆ ಇಳಿಯಲಿದ್ದಾರೆ. ಇವರ ಮೇಲೆ ಅಪಾರ ನಿರೀಕ್ಷೆಗಳ ಭಾರ ಇದೆ. ಇವರು ಕಣಕ್ಕೆ ಇಳಿದಾಗಲೆಲ್ಲಾ ಅಭಿಮಾನಿಗಳ ಕಣ್ಣು ಇವರ ಮೇಲೆ ನೆಟ್ಟಿರಲಿವೆ. ಈ ಬಾರಿಯ ಐಪಿಎಲ್ ವೇಳೆ ಅರ್ಜುನ್ ತೆಂಡೂಲ್ಕರ್ ಶುಭಂಕರ್ ಮಿಶ್ರಾ ಅವರ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನವನ್ನು ನೀಡಿದ್ದಾರೆ. ಈ ಸಂದರ್ಶನದಲ್ಲಿ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಯಿತು. ಈ ವೇಳೆ ಸಂದರ್ಶಕ ಕೇಳಿದ್ದ ಆ ಒಂದು ಪ್ರಶ್ನೆ ಈಗ ಸಖತ್ ವೈರಲ್ ಆಗುತ್ತಿದೆ.
ಈ ವೇಳೆ ಸಂದರ್ಶಕ ನಿಮ್ಮ ತಂದೆಯನ್ನು ಬಿಟ್ಟು ನೀವು ಇಷ್ಟ ಪಡುವ ಕ್ರಿಕೆಟ್ ಆಟಗಾರ ಎಂದು ಕೇಳಿದರು. ಅವರು "ಯುವರಾಜ್ ಸಿಂಗ್" ಎಂದು ಉತ್ತರಿಸಿದರು. ಯುವರಾಜ್ ಸಿಂಗ್ ಅವರಲ್ಲಿ ನಿಮಗೆ ಇಷ್ಟವಾದ ಗುಣವೇನು ಎಂದು, ಅರ್ಜುನ್, ಅವರಲ್ಲಿ ಕೇಳಲಾಯಿತು. ಆಗ ಅರ್ಜುನ್ "ಅವರು ಸ್ಪಿನ್ನರ್ ಆಗಿದ್ದರು, ಮತ್ತು ನಾನು ಪೇಸರ್" ಎಂದು ಉತ್ತರಿಸಿದರು.

ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಲಕ್ನೋ ತಂಡ ಅವರಿಗೆ ಅವಕಾಶ ನೀಡಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಇವರು ಆರಂಭದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಕಣಕ್ಕೆ ಇಳಿದಿದ್ದರು. ಆದರೆ ಇವರಿಗೆ ಮುಂಬೈ ತಂಡದಲ್ಲಿ ಸ್ಥಿರವಾಗಿ ಸ್ಥಾನ ಲಭಿಸದ ಕಾರಣ ಅವರನ್ನು ಬಿಟ್ಟುಬಿಡಲಾಯಿತು. ಈ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ, "ಯಾವುದೇ ಆಟಗಾರನು ಬೆಂಚ್ ಮೇಲೆ ಕುಳಿತುಕೊಳ್ಳಲು ಇಷ್ಟಪಡುವುದಿಲ್ಲ; ಎಲ್ಲರೂ ಸಾಧ್ಯವಾದಷ್ಟು ಪಂದ್ಯಗಳನ್ನು ಆಡಲು ಬಯಸುತ್ತಾರೆ. ಇದರಿಂದ ಅವಕಾಶ ಸಿಕ್ಕಾಗಲೆಲ್ಲಾ ಅವರು ಅದನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಅರ್ಜುನ್ ತೆಂಡೂಲ್ಕರ್ ಅವರನ್ನು 2021 ರಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸಹಿ ಮಾಡಿತು. ಅವರು 2025 ರವರೆಗೆ ತಂಡದಲ್ಲೇ ಇದ್ದರು. ಆದಾಗ್ಯೂ, ಅವರಿಗೆ ಮುಂಬೈ ತಂಡದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ.
ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ, ಕ್ರಿಕೆಟಿಗ ಅರ್ಜುನ್ ತೆಂಡೂಲ್ಕರ್ ಅವರು ಇತ್ತೀಚಿಗೆ ಉದ್ಯಮಿ ಸಾನಿಯಾ ಚಾಂದೋಕ್ ಅವರನ್ನು ವಿವಾಹವಾದರು. ಇವರ ವಿವಾಹದಲ್ಲಿ ಕ್ರಿಕೆಟ್ ದಿಗ್ಗಜರು, ಸಿನಿಮಾ ತಾರೆಯರು, ರಾಜಕೀಯ ಜಗತ್ತಿನ ಗಣ್ಯರು ಭಾಗವಹಿಸಿದ್ದರು.
26 ವರ್ಷದ ಅರ್ಜುನ್ ತೆಂಡೂಲ್ಕರ್ ಅವರು ಈಗಾಗಲೇ 24 ಪ್ರಥಮ ದರ್ಜೆ ಪಂದ್ಯಗಳು 24 ಲೀಸ್ಟ್ ಎ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಇಷ್ಟೇ ಅಲ್ಲದೆ ಇವರು ಐಪಿಎಲ್‌ನಲ್ಲಿ 5 ಪಂದ್ಯಗಳನ್ನು ಆಡಿದ್ದಾರೆ. ಒಟ್ಟಾರೆ ಇವರು 81 ವಿಕೆಟ್ ಪಡೆದಿದ್ದಾರೆ.