ಒನ್ ಡೇ ಲೀಗ್‌ಗಾಗಿ ಮುಂಬೈ U-23 ತಂಡದಲ್ಲಿ ಅರ್ಜನ್ ತೆಂಡೂಲ್ಕರ್‌ಗೆ ಸ್ಥಾನ

ಮುಂಬೈ, ಫೆಬ್ರವರಿ 10: ಫೆಬ್ರವರಿ 14ರಿಂದ ಜೈಪರ್‌ನಲ್ಲಿ ಆರಂಭಗೊಳ್ಳಲಿರುವ ಬಿಸಿಸಿಐ ಒನ್‌ಡೇ ಲೀಗ್ ಟೂರ್ನಿಗಾಗಿ ಪ್ರಕಟಿಸಲಾಗಿರುವ ಮುಂಬೈ ಅಂಡರ್-23 ತಂಡದಲ್ಲಿ ಮಾಸ್ಟರ್ ಬ್ಲಾಸ್ಟರ್ ಪುತ್ರ ಅರ್ಜುನ್ ತೆಂಡೂಲ್ಕರ್ ಸ್ಥಾನ ಪಡೆದುಕೊಂಡಿದ್ದಾರೆ.
ಡಿವೈ ಪಾಟಿಲ್ ಟಿ20 ಕಪ್ ಮತ್ತು ಆರ್‌ಎಫ್‌ಎಸ್ ತಲಿಯರ್‌ಖಾನ್ ಮೊಮೋರಿಯಲ್ ಆಹ್ವಾನಿತ ಟೂರ್ನಿಯಲ್ಲಿ ಅರ್ಜುನ್ ತೆಂಡೂಲ್ಕರ್ ಉತ್ತಮ ಪ್ರದರ್ಶನ ನೀಡಿದ್ದನ್ನು ಪರಿಗಣಿಸಲಾಗಿದೆ. ಹೀಗಾಗಿ ಅರ್ಜುನ್ ಅವರನ್ನು ಜಯ್ ಬಿಸ್ತಾ ನಾಯಕತ್ವದ 15 ಜನರ ಮುಂಬೈ ಅಂಡರ್-23 ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.
19ರ ಹರೆಯದ ಅರ್ಜುನ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಮುಂಬೈ ಅಂಡರ್ 23 ತಂಡದ ಕೋಚ್ ಅಮಿತ್ ಪಾಗ್ನಿಸ್ ಮಾತನಾಡಿ, 'ಎರಡೂ ಟ್ರಯಲ್ ಪಂದ್ಯಗಳಲ್ಲಿ ಅರ್ಜುನ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಯಾರ್ಕರ್, ಬೌನ್ಸರ್ ಮತ್ತು ಸ್ಲೋವರ್ ಬೌಲಿಂಗ್ ಸಾಮರ್ಥ್ಯ ಅವರ ಶಕ್ತಿ' ಎಂದಿದ್ದಾರೆ.
ಮುಂಬೈ ಯು-23 ತಂಡ: ಜಯ್ ಬಿಸ್ತಾ (ನಾಯಕ), ಹಾರ್ದಿಕ್ ತಾಮೊರೆ (ವಿಕೆಟ್ ಕೀಪರ್), ಸುವೇದ್ ಪಾರ್ಕರ್, ಚಿನ್ಮಯ್ ಸೂತರ್, ಸಿದ್ಧಾರ್ಥ್ ಅಕ್ರೆ, ಕರ್ಶ್ ಕೊಠಾರಿ, ತನುಶ್ ಕೋಟಿಯಾನ್, ಅಕ್ವಿಬ್ ಕುರೇಶಿ, ಅಂಜುದೀಪ್ ಲಾಡ್, ಕೃತಿಕ್ ಹಾನಗವಾಡಿ, ಆಕಾಶ್ ಆನಂದ್, ಅಮನ್ ಖಾನ್, ಅಥರ್ವಾ ಅಂಕೋಲೆಕಾರ್, ಅರ್ಜುನ್ ತೆಂಡೂಲ್ಕರ್, ಸಾಯ್‌ರಾಜ್ ಪಾಟೀಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications