Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಚಿನ್ ಪುತ್ರ ಅರ್ಜುನ್ ಎಸೆತಕ್ಕೆ ಬೆಚ್ಚಿದ ಆಂಗ್ಲರುǃ

ಲಂಡನ್, ಜುಲೈ 06: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್ ಅವರು ಇಂಗ್ಲೆಂಡಿನ ಪ್ರಮುಖ ಬ್ಯಾಟ್ಸ್ ಮನ್ ಗಳನ್ನು ತಮ್ಮ ಬೌಲಿಂಗ್ ಮೂಲಕ ಕಾಡಿದ್ದಾರೆ.

ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವೆ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಸರಣಿಗೂ ಮುನ್ನ ನೆಟ್ ಅಭ್ಯಾಸ ನಿರತ ಇಂಗ್ಲೆಂಡಿನ ಬ್ಯಾಟ್ಸ್ ಮನ್ ಗಳಿಗೆ ಬೌಲ್ ಮಾಡುವ ಅವಕಾಶವನ್ನು ಅರ್ಜುನ್ ಪಡೆದಿದ್ದರು.

Arjun Tendulkar injures England player at Lord's nets

ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಸಕತ್ ಬೌಲಿಂಗ್ ಮಾಡಿದ್ದಲ್ಲದೆ, ಜಾನಿ ಬೈರ್ಸ್ಟೋ ಅವರು ಗಾಯಗೊಳ್ಳುವಂತೆ ಯಾರ್ಕರ್ ಎಸೆದು ಎಲ್ಲರ ಗಮನ ಸೆಳೆದರು. ಅರ್ಜುನ್ ಎಸೆದ ಮೊದಲ ಎಸೆತದಲ್ಲೇ ಇಂಗ್ಲೆಂಡ್ ವಿಕೆಟ್ ಕೀಪರ್ ಜಾನಿ ಬೇರ್ಸ್ಟೋವ್ ಗಾಯಗೊಂಡು, ನೆಟ್ ಅಭ್ಯಾಸ ಬಿಟ್ಟು ಚಿಕಿತ್ಸೆಗಾಗಿ ಪೆವಿಲಿಯನ್ ಗೆ ತೆರಳಬೇಕಾಯಿತು.

ಆದರೆ, ಗಾಯದಿಂದ ಗುಣಮುಖರಾದ 27 ವರ್ಷ ವಯಸ್ಸಿನ ಜಾನಿ ಅವರು ಮೊದಲ ಪಂದ್ಯಕ್ಕೆ ಲಭ್ಯರಾಗಿದ್ದಾರೆ. ಆದರೆ, 17 ವರ್ಷ ವಯಸ್ಸಿನ ಎಡಗೈ ವೇಗದ ಬೌಲರ್ ಅರ್ಜುನ್ ಅವರ ಬೌಲಿಂಗ್ ಬಗ್ಗೆ ಎಲ್ಲರೂ ಮೆಚ್ಚುಗೆ ಮಾತನ್ನಾಡಿದ್ದಾರೆ. ಈ ಹಿಂದೆ ಕೂಡಾ ಇಂಗ್ಲೆಂಡಿನಲ್ಲಿ ತರಬೇತಿ ಪಡೆಯುವಾಗ ಅರ್ಜುನ್ ಅವರ ಬೌಲಿಂಗ್ ಬಗ್ಗೆ ಪಾಕಿಸ್ತಾನದ ಕ್ರಿಕೆಟ್ ದಿಗ್ಗಜ ವಾಸೀಂ ಅಕ್ರಂ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+