For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ಗೂ ಮುನ್ನ ಅರ್ಜುನ್‌ ತೆಂಡೂಲ್ಕರ್ ಹೊಸ ಇನಿಂಗ್ಸ್‌: ಸಾನಿಯಾ ಜೊತೆ ವಿವಾಹ

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಗುರುವಾರ (ಮಾರ್ಚ್ 5)ರಂದು ಗೆಳತಿ ಸಾನಿಯಾ ಚಾಂದೋಕ್ ಅವರನ್ನು ವಿವಾಹವಾದರು. ಈ ವಿವಾಹಕ್ಕೆ ಕ್ರಿಕೆಟ್‌ ಜಗತ್ತಿನ ಖ್ಯಾತನಮ ಆಟಗಾರರು, ಚಿತ್ರೋದ್ಯಮದ ಗಣ್ಯರು ಸಹ ಭಾಗವಹಿಸಿದ್ದರು. ಈ ಮದುವೆಯ ಫೋಟೋಗಳು ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

ಹಲವಾರು ಮಾಜಿ ಕ್ರಿಕೆಟಿಗರು ಅರ್ಜುನ್ ಅವರ ವಿವಾಹದ ಫೋಟೋಗಳನ್ನು ತಮ್ಮ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ನವ ಜೋಡಿಗೆ ಅಭಿನಂದಿಸಿದ್ದಾರೆ. ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಾಂದೋಕ್ ದೀರ್ಘಕಾಲದ ಕುಟುಂಬ ಬಂಧವನ್ನು ಹೊಂದಿದ್ದರು. ಈ ಕಾರ್ಯಕ್ರಮಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರರ ಸುರೇಶ್ ರೈನಾ, ಆಕಾಶ್ ಚೋಪ್ರಾ ಭಾಗವಹಿಸಿದ್ದರು. ಭಾರತದ ಮಾಜಿ ನಾಯಕ ಹಾಗೂ ಟೀಮ್ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಮತ್ತು ಅವರ ಪತ್ನಿ ಕೂಡ ಅರ್ಜುನ್ ತೆಂಡೂಲ್ಕರ್ ಅವರ ವಿವಾಹದಲ್ಲಿ ಭಾಗವಹಿಸಿದ್ದರು.

Arjun Tendulkar

ವಿವಾಹ ಕಾರ್ಯಕ್ರಮದಲ್ಲಿ ರವಿಶಾಸ್ತ್ರಿ, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಜಹೀರ್ ಖಾನ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಮತ್ತು ಅಜಿತ್ ಅಗರ್ಕರ್ ಅವರಂತಹ ಮಾಜಿ ಕ್ರಿಕೆಟಿಗರು ಉಪಸ್ಥಿತರಿದ್ದರು.

ಅರ್ಜುನ್‌ ತೆಂಡೂಲ್ಕರ್ ಅವರ ಪತ್ನಿ ಸಾನಿಯಾ ಅವರ ಉದ್ಯಮ ಕುಟುಂಬದಿಂದ ಬಂದವರು. ಇವರು ಆರಂಭದಲ್ಲಿ ಸಾರಾ ತೆಂಡೂಲ್ಕರ್ ಅವರಿಗೆ ಪರಿಚಯವಾದರು ಎಂದು ನಂಬಲಾಗಿದೆ. ಈ ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿತು. ರಜೆಯ ಸಮಯವನ್ನು ಕಳೆಯುವುದು, ಊಟಕ್ಕೆ ಹೊರಗೆ ಹೋಗುವುದನ್ನು ಇವರು ಮಾಡುತ್ತಿದ್ದರು. ಇದೇ ಸಮಯದಲ್ಲಿ ಅರ್ಜುನ್ ತೆಂಡೂಲ್ಕರ್ ಅವರ ಪರಿಚಯ ಸಾನಿಯಾ ಅವರಿಗೆ ಆಗಿ, ಆರಂಭದಲ್ಲಿದ್ದ ಸ್ನೇಹ ನಂತರ, ಸಂಬಂಧವಾಗಿ ಅರಳಿತು.

ಅರ್ಜುನ್, ಸಾನಿಯಾ ಇಬ್ಬರ ಸಂಬಂಧ ಬಗ್ಗೆ ಹಲವು ದಿನಗಳಿಂದ ಊಹಾಪೋಹಗಳು ಎದ್ದಿದ್ದವು. ಆದರೆ ಆಗಸ್ಟ್‌ 13, 2025 ರಂದು ಈ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು. ಈ ಕಾರ್ಯಕ್ರಮದಲ್ಲಿ ಆಪ್ತ ಸ್ನೇಹಿತರು, ಕುಟುಂಬಸ್ಥರು ಮಾತ್ರ ಹಾಜರಿದ್ದರು.

ವಿಡಿಯೋ ವೈರಲ್‌

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಅರ್ಜುನ್ ತೆಂಡೂಲ್ಕರ್ ಮೊದಲು ಸಾನಿಯಾ ಚಾಂದೋಕ್‌ಗೆ ಮಾಲೆ ತೊಡಿಸಿದರು. ನಂತರ ಅರ್ಜುನ್ ಮತ್ತು ಸಾನಿಯಾ ಪರಸ್ಪರ ಅಪ್ಪಿಕೊಳ್ಳುತ್ತಾರೆ. ಈ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅರ್ಜುನ್ ಸಾಧನೆ

26 ವರ್ಷದ ಅರ್ಜುನ್ ತೆಂಡೂಲ್ಕರ್ ಈ ಬಾರಿ ನಡೆಯಲಿರುವ ಐಪಿಎಲ್‌ನಲ್ಲಿ ಭಾಗವಹಿಸಲಿದ್ದಾರೆ. ಇವರು ಮಿನಿ ಹರಾಜಿಗೂ ಮೊದಲು ಮುಂಬೈ ಇಂಡಿಯನ್ಸ್ ನಿಂದ ಲಕ್ನೋ ಸೂಪರ್ ಜೈಂಟ್ಸ್ ಗೆ ಟ್ರೇಡ್ ಮಾಡಿಕೊಳ್ಳಲಾಗಿತ್ತು. ಇವರು 2023ರಲ್ಲಿ ಐಪಿಎಲ್‌ ಆಡುತ್ತಿದ್ದಾರೆ. ಈ ವರೆಗೆ ಇವರು 3 ವಿಕೆಟ್‌ ಕಬಳಿಸಿದ್ದಾರೆ. 19ನೇ ಆವೃತ್ತಿಯಲ್ಲಿ ಇವರು ಎಲ್‌ಎಸ್‌ಜೆ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರು ಈಗಾಗಲೇ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 24 ಪಂದ್ಯಗಳನ್ನು ಆಡಿದ್ದು 24 ವಿಕೆಟ್‌ ಪಡೆದಿದ್ದಾರೆ. ಇನ್ನು ಲಿಸ್ಟ್‌ ಎ ನಲ್ಲಿ ಆಡಿದ 24 ಪಂದ್ಯಗಳಲ್ಲಿ 26 ವಿಕೆಟ್‌ ಕಬಳಿಸಿದ್ದಾರೆ.

Story first published: Thursday, March 5, 2026, 16:56 [IST]
Other articles published on Mar 5, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+