Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್‌ನಲ್ಲಿ ಸಚಿನ್‌ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಮಿಂಚಿನ ಬೌಲಿಂಗ್‌!

ICC World Cup 2019 : ಸಚಿನ್ ಪುತ್ರ ಅರ್ಜುನ್ ಮಾಡಿದ್ದೇನು ಗೊತ್ತಾ..? | Oneindia Kannada
Arjun Tendulkars pace too hot for Surrey 2nd XI opener

ಲಂಡನ್‌, ಜೂನ್‌ 18: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತನ್ನು ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಸಾಬೀತು ಪಡಿಸುತ್ತಿದ್ದು, ಇದೀಗ ಇಂಗ್ಲೆಂಡ್‌ನಲ್ಲೂ ತಮ್ಮ ಮಿಂಚಿನ ವೇಗದ ಬೌಲಿಂಗ್‌ ಮೂಲಕ ಇಡೀ ಕ್ರಿಕೆಟ್‌ ಜಗತ್ತೇ ತಮ್ಮತ್ತ ತಿರುಗುವಂತೆ ಮಾಡಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಸದ್ಯ ಇಂಗ್ಲೆಂಡ್‌ನಲ್ಲಿ ಸೆಕೆಂಡ್‌ ಇಲೆವೆನ್‌ ಚಾಂಪಿಯನ್‌ಷಿಪ್‌ನಲ್ಲಿ ಎಂಸಿಸಿ ಯಂಗ್‌ ಕ್ರಿಕೆಟರ್ಸ್‌ ಪರ ಆಡುತ್ತಿರುವ 19 ವರ್ಷದ ಎಡಗೈ ಬೌಲರ್‌ ಅರ್ಜುನ್‌ ತೆಂಡೂಲ್ಕರ್‌ ಸರ್ರೆ ಸೆಕೆಂಡ್‌ ಇಲೆವೆನ್‌ ತಂಡದ ವಿರುದ್ಧದ ಪಂದ್ಯದಲ್ಲಿ ಎರಡು ವಿಕೆಟ್‌ ಪಡೆದು ಮಿಂಚಿದ್ದಾರೆ.

ಅದರಲ್ಲೂ ಸರ್ರೆ ತಂಡದ ಅನುಭವಿ ಮತ್ತು ಆರಂಭಿಕ ಬ್ಯಾಟ್ಸ್‌ಮನ್‌ ನೇಥನ್‌ ಟೈಲೀ ಅವರನ್ನು ಅರ್ಜುನ್‌ ಕ್ಲೀನ್‌ ಬೌಲ್ಡ್‌ ಮಾಡಿರುವ ವಿಡಿಯೊ ಸಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಎಡಗೈ ವೇಗದ ಬೌಲರ್‌ ಆಗಿರುವ ಅರ್ಜುನ್‌, ಬಲಗೈ ಬ್ಯಾಟ್ಸ್‌ಮನ್‌ ಟೈಲೀ ಅವರನ್ನು ಅದ್ಭುತ ಇನ್‌ಸ್ವಿಂಗಿಂಗ್‌ ಎಸೆತದೊಂದಿಗೆ ಕ್ಲೀನ್‌ ಬೌಲ್ಡ್‌ ಮಾಡಿದ್ದರು. ಲಾರ್ಡ್‌ ಕ್ರಿಕೆಟ್‌ ಗ್ರೌಂಡ್‌ ತನ್ನ ಅಧಿಕೃತ ಟ್ವಿಟರ್‌ ಖಾತೆ ಮೂಲಕ ಅರ್ಜುನ್‌ ಅವರ ಬೆಂಕಿಯಂತಹ ಬೌಲಿಂಗ್‌ ಪ್ರದರ್ಶನದ ವಿಡಿಯೊ ಟ್ವೀಟ್‌ ಮಾಡಿದ್ದು, "ಟೇಕ್‌ ಅ ಬೌ ಅರ್ಜುನ್‌ ತೆಂಡೂಲ್ಕರ್‌. ಇಂದು ಮುಂಜಾನೆ ಅವರು ಈ ಅದ್ಭುತ ವಿಕೆಟ್‌ ಪಡೆದರು,'' ಎಂದು ವಿವರಿಸಿದೆ.

ತಂದೆ ಸಚಿನ್‌ ತೆಂಡೂಲ್ಕರ್‌ ಬ್ಯಾಟಿಂಗ್‌ ಮಾತ್ರಿಕರಾದರೆ, ಪುತ್ರ ಅರ್ಜುನ್‌ ಅವರ ಗಮನ ಸಂಪೂರ್ಣ ಬೌಲಿಂಗ್‌ ಕಡೆಗಿದೆ. ಎಂಸಿಸಿ ತಂಡದ ಪರ ಒಟ್ಟು 11 ಓವರ್‌ಗಳನ್ನು ಎಸೆದ ಅರ್ಜುನ್‌, 55ಕ್ಕೆ 2 ವಿಕೆಟ್‌ಗಳನ್ನು ಉರುಳಿಸಿದ್ದರು.

2018ರ ಜುಲೈನಲ್ಲಿ ಅರ್ಜುನ್‌ ಭಾರತದ 19 ವರ್ಷದೊಳಗಿನವರ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆದು ಶ್ರೀಲಂಕಾ ವಿರುದ್ಧದ ಚೊಚ್ಚಲ ಯೂತ್‌ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ಆಡಿ ಎರಡು ವಿಕೆಟ್‌ ಪಡೆದಿದ್ದರು. ಇದಕ್ಕೂ ಮುನ್ನ ಅರ್ಜುನ್‌ಗೆ ಕ್ರಿಕೆಟ್‌ ಆಡುವಂತೆ ನಾನೆಂದೂ ಒತ್ತಾಯ ಮಾಡಿಲ್ಲ. ಆತ ಏನಾಗಬೇಕು ಎಂಬುದನ್ನು ನಿರ್ಧರಿಸಲು ಆತನಿಗೇ ಬಿಟ್ಟಿದ್ದೇನೆ.

"ಕ್ರಿಕೆಟ್‌ ಆಡುವ ತುಡಿತ ಆತನಲ್ಲೇ ಇದೆ. ಆತನನ್ನು ನಾನೆಂದೂ ಒತ್ತಾಯ ಮಾಡಿಲ್ಲ. ಇದಕ್ಕೂ ಮೊದಲು ಫುಟ್ಬಾಲ್‌ ಆಡುತ್ತಿದ್ದ. ಬಳಿಕ ಚೆಸ್‌ನಲ್ಲೂ ಆಸಕ್ತಿ ಬೆಳೆಸಿಕೊಂಡಿದ್ದ. ಇದೀಗ ಕ್ರಿಕೆಟ್‌ ಆಡುತ್ತಿದ್ದಾನೆ. ಜೀವನದಲ್ಲಿ ಏನಾದರೂ ಸಾಧಿಸುವ ತುಡಿತವಿದ್ದರೆ, ಎಲ್ಲಿಯೂ ಅಡ್ಡದಾರಿ ತುಳಿಯಬೇಡ. ನನ್ನ ತಂದೆ (ರಮೇಶ್‌ ತೆಂಡೂಲ್ಕರ್‌) ಕೂಡ ನನಗೆ ಇದೇ ಮಾತನ್ನು ಹೇಳಿದ್ದರು ಎಂದು ಕಿವಿಮಾತು ಹೇಳಿದ್ದೇನೆ. ಕಠಿಣ ಪರಿಶ್ರಮವಿದ್ದರೆ ಯಸಸ್ಸು ಸಿಗುತ್ತದೆ,'' ಎಂದು ಸಚಿನ್‌ ತಮ್ಮ ಪುತ್ರನ ಕುರಿತಾಗಿ ಮಾತನಾಡಿದ್ದರು.

Story first published: Tuesday, June 18, 2019, 16:42 [IST]
Other articles published on Jun 18, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+