Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Arshdeep Singh: ಒಂದೇ ಓವರ್‌ನಲ್ಲಿ 7 ವೈಡ್ ಎಸೆದು ಬೇಡದ ದಾಖಲೆ ಬರೆದ ಅರ್ಷದೀಪ್‌

ಭಾರತದ ಸ್ಟಾರ್ ವೇಗದ ಬೌಲರ್‌ ಅರ್ಷದೀಪ್‌ ಸಿಂಗ್, ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಬೇಡವಾದ ದಾಖಲೆಗೆ ತಮ್ಮ ಹೆಸರನ್ನು ನಮೂದಿಸಿದ್ದಾರೆ. ಈ ಪಂದ್ಯದಲ್ಲಿ ವೇಗಿ ಅರ್ಶ್‌ದೀಪ್ ಸಿಂಗ್ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದರು, ಇದರಲ್ಲಿ ಅವರು ತಮ್ಮ ಒಂದು ಓವರ್‌ನಲ್ಲಿ ಒಟ್ಟು 13 ಎಸೆತಗಳನ್ನು ಎಸೆದರು ಮತ್ತು ತಮ್ಮ ಹೆಸರಿಗೆ ಬೇಡವಾದ ಕೆಟ್ಟ ದಾಖಲೆಯನ್ನು ನಮೂದಿಸಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅರ್ಷದೀಪ್‌ ಸಿಂಗ್ ಪವರ್‌ ಪ್ಲೇನಲ್ಲಿ ಕೇವಲ 2 ಓವರ್ ಬೌಲಿಂಗ್ ಮಾಡಿದರು. ಈ ವೇಳೆ 20 ರನ್‌ ಬಿಟ್ಟು ಕೊಟ್ಟು ವಿಕೆಟ್‌ ಪಡೆಯುವಲ್ಲಿ ವಿಫಲರಾದರು. ಬಳಿಕ ಇವರಿಗೆ ಸೂರ್ಯ ಇನಿಂಗ್ಸ್‌ನ 11ನೇ ಓವರ್‌ ನೀಡಿದರು. ಆದರೆ ಈ ಓವರ್‌ ಅರ್ಷದೀಪ್‌ ಅವರಿಗೆ ಬಹುವಾಗಿ ಕಾಡುವಂತೆ ಮಾಡಿತು. ಈ ಓವರ್‌ನಲ್ಲಿ ಅರ್ಶದೀಪ್‌ ಲೈನ್ ಮತ್ತು ಲೆಂಗ್ತ್ ಮೇಲೆ ನಿಯಂತ್ರಣವನ್ನು ಸಂಪೂರ್ಣವಾಗಿ ಕಳೆದುಕೊಂಡರು. ಈ ವೇಳೆ ಅರ್ಷದೀಪ್‌ ಬ್ಯಾಕ್‌ ಟು ಬ್ಯಾಕ್‌ ವೈಡ್‌ಗಳನ್ನು ಎಸೆದರು.

Arshdeep Singh Bowls Record 13-Ball Over Equaling Naveen-ul-Haq s T20I Record

11 ಓವರ್‌ನಲ್ಲಿ ಅರ್ಷದೀಪ್‌ 7 ವೈಡ್‌ಗಳನ್ನು ಮಾಡಿದರು. ಅಂದರೆ ಈ ಓವರ್‌ನಲ್ಲಿ ಅರ್ಷದೀಪ್‌ ಒಟ್ಟು 13 ಎಸೆತಗಳನ್ನು ಬೌಲ್ ಮಾಡಿದರು. ಈ ಓವರ್‌ನಲ್ಲಿ ಅರ್ಷದೀಪ್‌ ಒಟ್ಟು 18 ರನ್‌ ಬಿಟ್ಟು ಕೊಟ್ಟರು. ಈ ಮೂಲಕ ಅರ್ಷದೀಪ್‌ ಬೇಡದ ದಾಖಲೆಗೆ ತಮ್ಮ ಹೆಸರನ್ನು ನಮೂದಿಸಿದರು.

13 ವೈಡ್‌

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಎಸೆದ ಬೌಲರ್‌ಗಳ ಪಟ್ಟಿಯಲ್ಲಿ ಅರ್ಷದೀಪ್‌ ಸಿಂಗ್‌ ಅಫ್ಘಾನಿಸ್ತಾನದ ನವೀನ್‌ ಉಲ್‌ ಹಕ್‌ ಅವರಷ್ಟೇ ಎಸೆತಗಳನ್ನು ಎಸೆದರು. ನವೀನ್‌ ಉಲ್ ಹಕ್ ಜಿಂಬಾಬ್ವೆ ವಿರುದ್ಧ 2024ರಲ್ಲಿ 13 ವೈಡ್‌ ಎಸೆತಗಳನ್ನು ಮಾಡಿದ್ದರು. ಈ ದಾಖಲೆಯ ಸಮಕ್ಕೆ ಈಗ ಅರ್ಷದೀಪ್‌ ನಿಂತಿದ್ದಾರೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 213 ರನ್‌ ಸೇರಿಸಿತು. ಈ ವೇಳೆ ಆರಂಭಿಕ ಕ್ವಿಂಟನ್‌ ಡಿಕಾಕ್‌ 5 ಬೌಂಡರಿ, 7 ಸಿಕ್ಸರ್ ಸಹಾಯದಿಂದ 90 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

Story first published: Thursday, December 11, 2025, 21:15 [IST]
Other articles published on Dec 11, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+