Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Arshdeep Singh: ವಾಸಿಮ್ ಅಕ್ರಮ್ ಸಹ ಅರ್ಷದೀಪ್‌ ಸಿಂಗ್‌ ಗುರು: ಇಲ್ಲಿದೆ ವಿಡಿಯೋ

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬೌಲರ್ ಅರ್ಷದೀಪ್ ಸಿಂಗ್ ತಮ್ಮ ಬಿಗುವಿನ ದಾಳಿಯ ಮೂಲಕ ಈಗಾಗಲೇ ಟಿ20 ಕ್ರಿಕೆಟ್‌ನಲ್ಲಿ ಸದ್ದು ಮಾಡಿರುವ ಆಟಗಾರ. ಭಾರತದ ಪರ ಅತಿ ಹೆಚ್ಚು ಟಿ20 ವಿಕೆಟ್‌ಗಳನ್ನು ಪಡೆದ ದಾಖಲೆ ಅರ್ಷದೀಪ್‌ ಹೆಸರಿನಲ್ಲಿದೆ. ಇವರು ಪವರ್‌ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ತಂಡಕ್ಕೆ ನೆರವಾಗುವ ಅರ್ಷದೀಪ್‌ ತಮ್ಮ ಬೌಲಿಂಗ್‌ನಿಂದ ಹೆಸರು ಮಾಡಿರುವ ಆಟಗಾರ. ಇತ್ತೀಚಿಗೆ ಆಸೀಸ್‌ ಮುಕ್ತಾಯಗೊಂಡಿತು. ಈ ವೇಳೆ ಅವರು ನೀಡಿರುವ ಸಂದರ್ಶನವೊಂದು ಸಖತ್ ವೈರಲ್ ಆಗುತ್ತಿದೆ.

ಅರ್ಷದೀಪ್‌ ಸಿಂಗ್ ಅವರು ಭಾರತ ತಂಡದ ಟಿ20 ಅವಿಭಜ್ಯ ಅಂಗ. ಇವರು ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಾಡಬಲ್ಲ ಪ್ಲೇಯರ್‌. ಇವರು ಐಪಿಎಲ್‌ನಲ್ಲಿ ಮಿಂಚು ಹರಿಸಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಇವರು ತಮ್ಮ ಬೌಲಿಂಗ್ ಗುಣ ಮಟ್ಟ ಸುಧಾರಣೆಗೆ ಈ ಪಾಕ್‌ ವೇಗಿ ಕಾರಣ ಎಂದು ತಿಳಿಸಿದ್ದಾರೆ.

Arshdeep Singh Credits Legendary Wasim Akram for Improving His Swing Bowling

ಸಂದರ್ಶನದ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್‌ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅರ್ಷದೀಪ್‌ ಸಿಂಗ್ ಸ್ವಿಂಗ್‌ ಕಿಂಗ್ ಎಂದೇ ಖ್ಯಾತಿ ಪಡೆದಿರುವ ವಾಸಿಮ್‌ ಅಕ್ರಮ್‌ ಅವರ ವಿಡಿಯೋಗಳನ್ನು ನೋಡಿ ಕಲಿತಿದ್ದೇನೆ. ಪಾಕ್‌ ತಂಡದ ಮಾಜಿ ಆಟಗಾರ ಅಕ್ರಮ್‌ ವಿಶ್ವದ ಶ್ರೇಷ್ಠ ಬೌಲರ್‌ ಎಂದಿದ್ದಾರೆ. ಇವರು ವಿಶ್ವದ ಅದೆಷ್ಟೋ ಯುವಕರಿಗೆ ಮಾರ್ಗದರ್ಶಕರು. ಅಲ್ಲದೆ ಹಲವು ಯುವ ಬೌಲರ್‌ಗಳ ರೋಲ್‌ ಮಾಡೆಲ್ ಆಗಿದ್ದಾರೆ. ಇನ್ನು ಬೌಲ್‌ ಸ್ವಿಂಗ್ ಮಾಡುವ ಬಗ್ಗೆಯೂ ಮಾತನಾಡಿರುವ ಅರ್ಷದೀಪ್‌ ಶೈನ್‌ ಇರುವ ಪಾರ್ಟ್‌ನ್ನು ನಾನು ಎಡಭಾಗದಲ್ಲಿ ಹಿಡಿದುಕೊಂಡು ಇನ್‌ಸ್ವಿಂಗ್ ಮಾಡುವೆ. ಇದು ಇನ್‌ಸ್ವಿಂಗ್ ಮಾಡುವ ಸುಲಭ ವಿಧಾನವಾಗಿದೆ. ಇನ್ನು ಔಟ್‌ ಸ್ವಿಂಗ್ ಮಾಡಲು ನಾನು ಚೆಂಡನ್ನು ಮೊದಲು ಸ್ಲೀಪ್‌ ನತ್ತ ಕೊಂಚ ತಿರುಗಿಸುವೆ ಎಂದು ತಿಳಿಸಿದ್ದಾರೆ.

ಇನ್ನು ತಮ್ಮ ಬೌಲಿಂಗ್ ಬಗ್ಗೆ ಮಾತನಾಡಿರುವ ಅವರು ನಾನು ನನ್ನ ಮಣಿಕಟ್ಟುಗಳಿಂದ ಸ್ಲಿಪ್‌ ಕಡೆಗೆ ತಿರುಗಿಸುವೆ. ವಾಸಿಮ್ ಅಕ್ರಮ್‌ ಮಣಿಕಟ್ಟಿನ ಮೂಲಕ ಹೇಗೆ ತಿರುಗಿಸಬೇಕು ಎಂಬುದನ್ನು ವಿಡಿಯೋದಲ್ಲಿ ತೋರಿಸಿದ್ದಾರೆ. ಅದನ್ನೇ ನಾನು ಪ್ರಯತ್ನ ಮಾಡುತ್ತಿರುವೆ ಎಂದು ಅರ್ಷ್‌ದೀಪ್ ಹೇಳಿದ್ದಾರೆ.

ಅರ್ಷದೀಪ್ ಸಾಧನೆ

ಭಾರತದ ಪರ ಅರ್ಷದೀಪ್‌ ಸಿಂಗ್‌ ಇಂಗ್ಲೆಂಡ್‌ ವಿರುದ್ಧ 2022ರಲ್ಲಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಇವರು ಈ ವರೆಗೆ ಭಾರತದ ಪರ 68 ಟಿ20 ಪಂದ್ಯಗಳನ್ನು ಆಡಿದ್ದು, 105 ವಿಕೆಟ್‌ ಕಬಳಿಸಿದ್ದಾರೆ. ಅಲ್ಲದೆ ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್‌ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Story first published: Monday, November 10, 2025, 7:55 [IST]
Other articles published on Nov 10, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+