Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Arshdeep Singh: ಅರ್ಷದೀಪ್ ಒಂದು ವಿಕೆಟ್‌ ಪಡೆಯುತ್ತಲೇ ದೊಡ್ಡ ದಾಖಲೆ

ಇನ್ನೇನು ಮೂರು ದಿನಗಳಲ್ಲಿ ಯುಎಇನಲ್ಲಿ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿ ನಡೆಯಲಿದೆ. ಈ ಟೂರ್ನಿಯಲ್ಲಿ ಭಾಗವಹಿಸಲು 8 ರಾಷ್ಟ್ರಗಳು ಈಗಾಗಲೇ ಯುಎಇನತ್ತ ಮುಖ ಮಾಡಿವೆ. ಇನ್ನು ಭಾರತ ಈ ಬಾರಿಯ ಟೂರ್ನಿಯನ್ನು ಆಯೋಜಿಸಲಿದೆ. ಮುಂದಿನ ವರ್ಷ ದಕ್ಷಿಣ ಆಫ್ರಿಕಾದ ಆತಿಥ್ಯದಲ್ಲಿ ಟಿ20 ವಿಶ್ವಕಪ್‌ ನಡೆಯಲಿದ್ದು, ಹೀಗಾಗಿ ಈ ಬಾರಿ ಏಷ್ಯಾ ಕಪ್‌ ಟಿ20 ಮಾದರಿಯಲ್ಲಿ ಆಡಿಸಲಾಗುತ್ತಿದೆ. ಈ ವೇಳೆ ಟೀಮ್ ಇಂಡಿಯಾ ಕಪ್ ಗೆಲ್ಲುವ ನೆಚ್ಚಿನ ತಂಡ ಎಂದು ಗುರುತಿಸಲಾಗಿದೆ. ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್‌ಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇದೇ ವೇಳೆ ಸೂಪರ್ ಸ್ಟಾರ್ ಬೌಲರ್‌ ಅರ್ಷದೀಪ್‌ ಸಿಂಗ್ ದೊಡ್ಡ ದಾಖಲೆ ಮೇಲೆ ಕಣ್ಣು ನೆಟ್ಟಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ಅರ್ಷದೀಪ್‌ ಸಿಂಗ್‌ಗೆ , ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಲಭಿಸಿರಲಿಲ್ಲ. ಆದರೆ ಇವರು ಟಿ20 ಕ್ರಿಕೆಟ್‌ ತಂಡದ ಅವಿಭಾಜ್ಯ ಬೌಲರ್‌ ಆಗಿದ್ದಾರೆ. ಇವರು ತಮ್ಮ ಬಿಗುವಿನ ದಾಳಿಯಿಂದ ಎದುರಾಳಿ ಬ್ಯಾಟರ್‌ಗಳ ಚಿತ್ತ ಕದಿಯುವ ಕ್ಷಮತೆಯನ್ನು ಹೊಂದಿದ್ದಾರೆ. ಇವರು ಪವರ್‌ ಪ್ಲೇ ಹಾಗೂ ಡೆತ್‌ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಬಲ್ಲರು. ಇವರು ಏಷ್ಯಾ ಕಪ್‌ನಲ್ಲಿ ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

Arshdeep Singh Eyes Historic 100 T20I Wickets Set to Break Record in Asia Cup

2025 ರ ಏಷ್ಯಾ ಕಪ್ ಸೆಪ್ಟೆಂಬರ್ 9 ರಿಂದ ಆರಂಭವಾಗಲಿದೆ. ಈ ಬಾರಿ ಈ ಟೂರ್ನಮೆಂಟ್ ಟಿ20 ಮಾದರಿಯಲ್ಲಿ ನಡೆಯಲಿದೆ. ಏಷ್ಯಾ ಕಪ್ ನಲ್ಲಿ ಭಾರತ ತಂಡ ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ, ಟೀಮ್ ಇಂಡಿಯಾದ ವೇಗಿ ಅರ್ಶ್ದೀಪ್ ಸಿಂಗ್ ಇತಿಹಾಸ ಸೃಷ್ಟಿಸುವ ಅವಕಾಶವನ್ನು ಪಡೆಯಲಿದ್ದಾರೆ. ಅರ್ಶ್ದೀಪ್ ಸಿಂಗ್ ಟಿ20 ಮಾದರಿಯಲ್ಲಿ ಅತ್ಯುತ್ತಮ ಬೌಲರ್ ಗಳಲ್ಲಿ ಒಬ್ಬರಾಗಿದ್ದು, ಅವರು ಟಿ20ಐನಲ್ಲಿ 99 ವಿಕೆಟ್ ಪಡೆದಿದ್ದಾರೆ.

ಅರ್ಷದೀಪ್‌ ಸಿಂಗ್ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಯಾರು ಮಾಡದ ಸಾಧನೆಯನ್ನು ಮಾಡಲಿದ್ದಾರೆ. ಈಗಾಗಲೇ ಟೀಮ್ ಇಂಡಿಯಾದ ಪರ ಚುಟುಕು ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿರುವ ಅರ್ಷದೀಪ್‌ ಮತ್ತೊಂದು ವಿಕೆಟ್‌ ಪಡೆದಿದ್ದೇ ಆದಲ್ಲಿ, ಈ ಹಿಂದೆ ಭಾರತೀಯ ಬೌಲರ್‌ ಮಾಡದ ಸಾಧನೆ ಮಾಡಲಿದ್ದಾರೆ. ಸದ್ಯ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ವಿಕೆಟ್‌ ಕಬಳಿಸಿರುವ ಅರ್ಷದೀಪ್‌ ಸಿಂಗ್, ಮತ್ತೊಂದು ಅಪರೂಪದ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

Arshdeep Singh Eyes Historic 100 T20I Wickets Set to Break Record in Asia Cup

ವಿಶೇಷ ದಾಖಲೆಯ ಮೇಲೆ ಅರ್ಷದೀಪ್ ಕಣ್ಣು

ಅರ್ಷದೀಪ್ ಸಿಂಗ್‌ 63 ಟಿ20 ಪಂದ್ಯಗಳಲ್ಲಿ 99 ವಿಕೆಟ್‌ ಕಬಳಿಸಿದ್ದಾರೆ. ಇವರು ಏಷ್ಯಾ ಕಪ್‌ನಲ್ಲಿ ಒಂದು ವಿಕೆಟ್‌ ಕಬಳಿಸಿದರೆ, ತಿಹಾಸ ಸೃಷ್ಟಿಸುವ ಅವಕಾಶವನ್ನು ಪಡೆಯಲಿದ್ದಾರೆ. ಏಷ್ಯಾ ಕಪ್‌ನ ಮೊದಲ ಪಂದ್ಯದಲ್ಲೇ ಒಂದು ವಿಕೆಟ್‌ ಪಡೆಯುವಲ್ಲಿ ಸಫಲರಾದರೆ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ವೇಗವಾಗಿ 100 ವಿಕೆಟ್‌ ಪಡೆದ ಸಾಧನೆ ಮಾಡಲಿದ್ದಾರೆ. ರಶೀದ್ ಖಾನ್, ಸಂದೀಪ್ ಲಮಿಚಾನೆ ಮತ್ತು ವನಿಂದು ಹಸರಂಗ ವೇಗವಾಗಿ 100 ವಿಕೆಟ್‌ಗಳನ್ನು ಪಡೆದ ಟಾಪ್ -3 ಬೌಲರ್‌ಗಳಾಗಿದ್ದಾರೆ.ಕವಾಗಿದೆ.

ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ ಪಡೆದ ಬೌಲರ್ಸ್‌

ಅರ್ಷದೀಪ್ ಸಿಂಗ್, 99
ಯುಜ್ವೇಂದ್ರ ಚಹಾಲ್, 96
ಹಾರ್ದಿಕ್ ಪಾಂಡ್ಯ, 94
ಭುವನೇಶ್ವರ್ ಕುಮಾರ್, 90
ಜಸ್ಪ್ರೀತ್ ಬುಮ್ರಾ, 89

Story first published: Saturday, September 6, 2025, 12:08 [IST]
Other articles published on Sep 6, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+