ಭಾರತದ ಈ ಪ್ಲೇಯರ್ ವಿಶ್ವದ ನಂ 1 ಆಗೋದ್ರಲ್ಲಿ ಅನುಮಾನವಿಲ್ಲ, ವಿಶ್ವಕಪ್‌ಗೆ ಆಯ್ಕೆ ಮಾಡಿ: ಕೃಷ್ಣಮಾಚಾರಿ ಶ್ರೀಕಾಂತ್

ಟೀಂ ಇಂಡಿಯಾ ಕಳೆದ ಟಿ20 ವಿಶ್ವಕಪ್‌ನಿಂದ ಈಚೆಗೆ ಬರೋಬ್ಬರಿ 11 ಬೌಲರ್‌ಗಳನ್ನ ಬಳಕೆ ಮಾಡಿದ್ದು, ಮುಂಬರುವ ಟಿ20 ವಿಶ್ವಕಪ್ ಸ್ಕ್ವಾಡ್‌ನಲ್ಲಿ ಅಂತಿಮ ಆಟಗಾರರ ಸೆಲೆಕ್ಷನ್ ಮಾಡಲು ಪ್ರಯತ್ನ ನಡೆಸುತ್ತಿದೆ. ಅಂತಿಮ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾರು ಅವಕಾಶ ಪಡೆಯಬಹುದು ಎಂಬುದು ಇನ್ನೂ ಕುತೂಹಲಕ್ಕೆ ಎಡೆಮಾಡಿರುವ ವಿಚಾರವಾಗಿದೆ.
ಐಪಿಎಲ್ 2021, 2022ರ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆಟಗಾರರು ಟೀಂ ಇಂಡಿಯಾ ಸ್ಕ್ವಾಡ್‌ನ ರೇಸ್‌ನಲ್ಲಿದ್ದಾರೆ. ಅದ್ರಲ್ಲೂ ಇತ್ತೀಚೆಗೆ ಚುಟುಕು ಕ್ರಿಕೆಟ್ ಫಾರ್ಮೆಟ್‌ನಲ್ಲಿ ಉತ್ತಮ ರನ್ ಕಲೆಹಾಕುತ್ತಿರುವ ಬ್ಯಾಟರ್ಸ್ ಮತ್ತು ವಿಕೆಟ್ ಪಡೆಯುತ್ತಿರುವ ಬೌಲರ್ಸ್ ಮೇಲೆ ಆಯ್ಕೆ ಸಮಿತಿಯು ಕಣ್ಣಿಟ್ಟಿದೆ.

ಇಬ್ಬರು ಯುವ ಬೌಲರ್‌ಗಳನ್ನ ಹೆಸರಿಸಿದ ಕೃಷ್ಣಮಾಚಾರಿ ಶ್ರೀಕಾಂತ್
ಟಿ20 ವಿಶ್ವಕಪ್ ಸ್ಕ್ವಾಡ್‌ನಲ್ಲಿ ಯಾವೆಲ್ಲಾ ಯುವ ಬೌಲರ್‌ಗಳಿಗೆ ಸ್ಥಾನ ನೀಡಬಹುದು ಎಂಬ ಚರ್ಚೆಗೆ ಟೀಂ ಇಂಡಿಯಾ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಇಬ್ಬರು ಬೌಲರ್‌ಗಳ ಸೇರಿಸಿದ್ದಾರೆ. ಭಾರತದ ಮಾಜಿ ನಾಯಕ ಹಾಗೂ ಮಾಜಿ ಆಯ್ಕೆಗಾರರ ಸಮಿತಿ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ಪ್ರಮುಖವಾಗಿ ಈ ಬೌಲರ್ ಅನ್ನು ವಿಶ್ವಕಪ್‌ಗೆ ತೆಗೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದ್ದಾರೆ.
ಕೊನೆಯ 2 ಟಿ20 ಪಂದ್ಯಗಳಿಗೆ ರೋಹಿತ್ ಅಲಭ್ಯ? ಹಾಗಿದ್ರೆ ಟೀಂ ಇಂಡಿಯಾ ಕ್ಯಾಪ್ಟನ್ ಯಾರು?

ಅರ್ಷ್‌ದೀಪ್ ಸಿಂಗ್‌ಗೆ ಅವಕಾಶ ಕೊಡಿ ಎಂದು ಶ್ರೀಕಾಂತ್ ಒತ್ತಾಯ
ಭಾರತದ ಯುವ ಬೌಲರ್ ಅರ್ಷ್‌ದೀಪ್ ಸಿಂಗ್‌ಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡಬೇಕು ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಒತ್ತಾಯ ಮಾಡಿದ್ದಾರೆ. ಆತನ ಇತ್ತೀಚಿನ ಪ್ರದರ್ಶನ, ಯಾರ್ಕರ್ ಹಾಕುವ ಕೌಶಲ್ಯ ಮತ್ತು ಕೂಲ್ ವ್ಯಕ್ತಿತ್ವದ ಕುರಿತಾಗಿ ಶ್ರೀಕಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
23 ವರ್ಷದ ಅರ್ಷ್‌ದೀಪ್ ಸಿಂಗ್ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಚೊಚ್ಚಲ ಪಂದ್ಯವನ್ನಾಡಿದರು. ಅದಾದ ಬಳಿಕ ಈತ ಕೇವಲ ನಾಲ್ಕು ಟಿ20 ಪಂದ್ಯಗಳಲ್ಲಿ ಭಾರತ ಪರ ಆಡುವ ಅವಕಾಶ ಪಡೆದಿದ್ದು 6.51ರ ಸರಾಸರಿಯಲ್ಲಿ 6 ವಿಕೆಟ್ ಕಬಳಿಸಿದ್ದಾರೆ.
ದಿನೇಶ್ ಕಾರ್ತಿಕ್ ಫಿನಿಷರ್ ಅಲ್ವೇ ಅಲ್ಲ: ಕೃಷ್ಣಮಾಚಾರಿ ಶ್ರೀಕಾಂತ್

ಕೊನೆಯ ಓವರ್‌ಗಳಲ್ಲಿ ಆರು ವಿಕೆಟ್ ಕಬಳಿಸಿರುವ ಅರ್ಷ್‌ದೀಪ್
ಅರ್ಷ್‌ದೀಪ್ ಸಿಂಗ್ ಉತ್ತಮ ಡೆತ್ ಓವರ್ ಆಗುವುದರಲ್ಲಿ ಅನುಮಾನವಿಲ್ಲ ಎಂಬುದು ಅವರ ಅಂಕಿ-ಅಂಶಗಳಲ್ಲಿ ಸಾಭೀತಾಗಿದೆ. ಅದ್ರಲ್ಲೂ 6.35 ರನ್‌ಗಳ ಸರಾಸರಿಯಲ್ಲಿ ಅರ್ಷ್‌ದೀಪ್ ಸಿಂಗ್ ಪ್ರತಿ 13 ಎಸೆತಗಳಲ್ಲಿ ಒಂದು ವಿಕೆಟ್ ಎಗರಿಸಿದ್ದಾರೆ.
ಕಳೆದ ಟಿ20 ವಿಶ್ವಕಪ್‌ನಿಂದ ಈಚೆಗೆ ಡೆತ್ ಓವರ್‌ಗಳಲ್ಲಿ ಕನಿಷ್ಠ ಐದು ಓವರ್‌ಗಳನ್ನ ಬೌಲಿಂಗ್ ಮಾಡಿರುವ ಬೌಲರ್‌ಗಳಲ್ಲಿ ಅತಿ ಕಡಿಮೆ ಎಕಾನಮಿಯನ್ನ ಹೊಂದಿರುವ ಬೌಲರ್‌ಗಳಲ್ಲಿ ಅರ್ಷ್‌ದೀಪ್ ಸಿಂಗ್ ಪ್ರಮುಖರಾಗಿದ್ದಾರೆ.
ಟಿ20 ವಿಶ್ವಕಪ್: ಈ ಸ್ಟಾರ್ ಆಟಗಾರನ ಫಾರ್ಮ್ ಭಾರತ ತಂಡಕ್ಕೆ ಸಕಾರಾತ್ಮಕ ಸಂಕೇತ; ಕಮ್ರಾನ್ ಅಕ್ಮಲ್

ಈತ ಟಿ20 ಫಾರ್ಮೆಟ್‌ನಲ್ಲಿ ನಂ 1 ಬೌಲರ್ ಆಗಲಿದ್ದಾರೆ: ಶ್ರೀಕಾಂತ್
ಮುಂಬರುವ ಟಿ20 ವಿಶ್ವಕಪ್‌ಗೆ ಅರ್ಷ್‌ದೀಪ್ ಸಿಂಗ್ ಹೆಸರನ್ನು ಕೃಷ್ಣಮಾಚಾರಿ ಶ್ರೀಕಾಂತ್ ಸೂಚಿಸಿದ್ದಾರೆ. ಇದರ ಜೊತೆಗೆ ಭವಿಷ್ಯದಲ್ಲಿ ಈತ ಚುಟುಕು ಫಾರ್ಮೆಟ್‌ನಲ್ಲಿ ನಂಬರ್ 1 ಬೌಲರ್ ಆಗೋದ್ರಲ್ಲಿ ಅನುಮಾನವಿಲ್ಲ ಎಂದಿದ್ದಾರೆ. ಜೊತೆಗೆ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾಗೆ ಆಗ್ರಹಿಸಿರುವ ಶ್ರೀಕಾಂತ್, ಈ ಯುವ ಬೌಲರ್ ಅನ್ನು ಮಿಸ್ ಮಾಡದೆ ಸೆಲೆಕ್ಟ್ ಮಾಡಿ ಎಂದಿದ್ದಾರೆ.
"ಅವರು T20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭವಿಷ್ಯದ ವಿಶ್ವದ ನಂ.1 ಬೌಲರ್ ಆಗಿರುತ್ತಾರೆ. ಆತ ಸರಳವಾಗಿ ಅದ್ಭುತವಾಗಿದ್ದಾರೆ. ಅರ್ಷದೀಪ್ ಸಿಂಗ್! ಹೆಸರನ್ನು ಟಿಪ್ಪಣಿ ಮಾಡಿಕೊಳ್ಳಿ. ಅವರು ಟಿ20 ವಿಶ್ವಕಪ್ ತಂಡದಲ್ಲಿ ಇರಲಿದ್ದಾರೆ. ಕಮ್ ಆನ್ ಚೇತು, ಆತನ ಹೆಸರನ್ನು ಸ್ಕ್ವಾಡ್‌ಗೆ ಸೇರಿಸಿಕೊಳ್ಳಿ'' ಎಂದು ಶ್ರೀಕಾಂತ್ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications