ಹನಿಮೂನ್‌ಗಾಗಿ ಬಂಗಾಳ ತಂಡದ ಕೋಚ್ ಸ್ಥಾನ ತ್ಯಜಿಸಿದ ಅರುಣ್ ಲಾಲ್; ಹನಿಮೂನ್ ಈ ದೇಶದಲ್ಲಿ!

'ನಾನು ಸುಸ್ತಾಗಿದ್ದಾನೆ, ಹೀಗಾಗಿ ಕ್ರಿಕೆಟ್‌ನಿಂದ ತಾತ್ಕಾಲಿಕ ವಿರಾಮ ತೆಗೆದುಕೊಳ್ಳುತ್ತಿದ್ದೇನೆ,' ಬಂಗಾಳ ಕ್ರಿಕೆಟ್ ತಂಡದ ಕೋಚ್ ಸ್ಥಾನದಿಂದ ಕೆಳಗಿಳಿದ ನಂತರ ಮಾಜಿ ಕ್ರಿಕೆಟಿಗ ಅರುಣ್ ಲಾಲ್ ಹೀಗೆ ಪ್ರತಿಕ್ರಿಯಿಸಿದ್ದಾರೆ.
ಖಾಸಗಿ ಮಾಧ್ಯಮಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಬಂಗಾಳ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅರುಣ್ ಲಾಲ್ ತಮ್ಮ ಭವಿಷ್ಯದ ಯೋಜನೆಗಳನ್ನು ಬಹಿರಂಗಪಡಿಸಿದ್ದಾರೆ.
"ನಾನು ದಣಿದಿದ್ದೇನೆ, ಕಳೆದ 9 ತಿಂಗಳಿಂದ ನಾನು ಕ್ರಿಕೆಟ್ ಬಗ್ಗೆ ಎಲ್ಲಾ ಸಮಯದಲ್ಲೂ ಯೋಚಿಸಬೇಕಾಗಿತ್ತು. ಒಂದು ಕ್ಷಣವೂ ನಾನು ಆಟದಿಂದ ಆಚೆಗೆ ಏನನ್ನೂ ಯೋಚಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಈ ಬಾರಿ ನಾನು ನನಗೆ ಸ್ವಲ್ಪ ಸಮಯ ಕೊಡಲು ಬಯಸುತ್ತೇನೆ. ನಾನು ನನ್ನ ಕುಟುಂಬಕ್ಕೆ ಸಮಯ ನೀಡಲು ಬಯಸುತ್ತೇನೆ. ಅದಕ್ಕಾಗಿಯೇ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ," ಎಂದರು.

2-3 ವರ್ಷಗಳಲ್ಲಿ ಬಂಗಾಳ ತಂಡ ರಣಜಿ ಟ್ರೋಫಿ ಗೆಲ್ಲುವುದು ಖಚಿತ
ಬಂಗಾಳ ಕ್ರಿಕೆಟ್ ತಂಡದ ಕೋಚ್ ಹುದ್ದೆ ತ್ಯಜಿಸುವುದಕ್ಕೂ ಬಂಗಾಳ ತಂಡದ ಪ್ರದರ್ಶನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅರುಣ್ ಲಾಲ್ ಹೇಳಿಕೊಂಡಿದ್ದು, ಕಳೆದ ಕೆಲವು ವರ್ಷಗಳಿಂದ ಬೆಂಗಾಲ್ ತಂಡ ಉತ್ತಮ ಪ್ರದರ್ಶನ ನೀಡಿದೆ. ಮುಂದಿನ 2-3 ವರ್ಷಗಳಲ್ಲಿ ಬಂಗಾಳ ತಂಡ ರಣಜಿ ಟ್ರೋಫಿಯನ್ನು ಗೆಲ್ಲುವುದು ಖಚಿತವೆಂದು ತಿಳಿಸಿದರು.
ಈ ಬಾರಿ ಫೈನಲ್‌ನಲ್ಲಿ ಆಡಿದ ಎರಡು ತಂಡಗಳು ಮುಂಬೈ ಮತ್ತು ಮಧ್ಯಪ್ರದೇಶ ಕಳೆದ ವರ್ಷ ಸೆಮಿಫೈನಲ್‌ಗೆ ಬರಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಚಾಂಪಿಯನ್ ಆಗಿದ್ದ ಸೌರಾಷ್ಟ್ರ ಈ ಬಾರಿ ಸೆಮಿಸ್‌ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಬಂಗಾಳ ಕ್ರಿಕೆಟ್ ತಂಡವು ಇಲ್ಲಿನ ಇತರ ತಂಡಗಳಿಗಿಂತ ಹೆಚ್ಚು ಸ್ಥಿರವಾಗಿದೆ ಎಂದು ಹೇಳಿದರು.

66ನೇ ವಯಸ್ಸಿನಲ್ಲಿ ಎರಡನೇ ಬಾರಿಗೆ ವಿವಾಹವಾದ ಅರುಣ್ ಲಾಲ್
ಭಾರತದ ಮಾಜಿ ಕ್ರಿಕೆಟಿಗ ಅರುಣ್ ಲಾಲ್ ಅವರು ತಮ್ಮ 66ನೇ ವಯಸ್ಸಿನಲ್ಲಿ ಎರಡನೇ ಬಾರಿಗೆ ವಿವಾಹವಾದರು. ವಿವಾಹ ಸಮಾರಂಭವು ಅರುಣ್ ಲಾಲ್ ತವರು ನಗರವಾದ ಕೋಲ್ಕತ್ತಾದಲ್ಲಿ 2ನೇ ಮೇ 2022ರಂದು ನಡೆದ ಖಾಸಗಿಯಾಗಿ ನಡೆದಿತ್ತು. ಗಮನಾರ್ಹ ವಿಷಯವೆಂದರೆ, ಅರುಣ್ ಲಾಲ್ ಅವರು ತಮ್ಮ ದೀರ್ಘಕಾಲದ ಸ್ನೇಹಿತೆ ಬುಲ್‌ಬುಲ್ ಸಹಾ ಅವರನ್ನು ವಿವಾಹವಾಗಿದ್ದು, ಅವರಿಗೆ 38 ವರ್ಷ ವಯಸ್ಸಾಗಿದೆ. ಏಪ್ರಿಲ್‌ನಲ್ಲಿ ದಂಪತಿಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂದು ವರದಿಯಾಗಿದೆ. ಕೋಲ್ಕತ್ತಾದ ಪೀರ್‌ಲೆಸ್ ಇನ್ ಹೋಟೆಲ್‌ನಲ್ಲಿ ಮದುವೆಯ ನಂತರ ಆರತಕ್ಷತೆಯನ್ನು ಆಯೋಜಿಸಲಾಗಿತ್ತು.

ಬುಲ್‌ಬುಲ್ ಸಹಾ ಒಂದು ಶಾಲಾ ಶಿಕ್ಷಕಿ
ಅರುಣ್ ಲಾಲ್ ಸದ್ಯಕ್ಕೆ ಕ್ರಿಕೆಟ್‌ನಿಂದ ಸಂಪೂರ್ಣ ವಿರಾಮ ತೆಗೆದುಕೊಳ್ಳಲು ಬಯಸಿದ್ದು, ಅವರೇ ಹೇಳಿದಂತೆ, ""ನಾನು ನನ್ನ ಹೆಂಡತಿಯೊಂದಿಗೆ ಟರ್ಕಿಗೆ ಪ್ರಯಾಣಿಸಲು ಬಯಸುತ್ತೇನೆ. ಮದುವೆಯ ನಂತರ ನಾನು ಎಲ್ಲಿಯೂ ಪ್ರಯಾಣಿಸಿಲ್ಲ. ನನಗೆ ಮತ್ತು ನನ್ನ ಹೆಂಡತಿಗೆ ಸ್ವಲ್ಪ ಸಮಯ ಕೊಡಲು ಬಯಸುತ್ತೇನೆ. ಜೊತೆಗೆ ನಾನು ಶೀಘ್ರದಲ್ಲೇ ಡಾರ್ಜಿಲಿಂಗ್, ಕಾಲಿಂಪಾಂಗ್‌ಗೆ ಹೋಗುತ್ತಿದ್ದೇನೆ. ಬುಲ್‌ಬುಲ್ ಸಹಾ ಒಂದು ಶಾಲಾ ಶಿಕ್ಷಕಿಯಾಗಿದ್ದು, ಅವರ ಶಾಲೆಗೆ ರಜೆ ಸಿಕ್ಕಿದ ತಕ್ಷಣ ನಾವು ಹೊರಗೆ ಹೋಗುತ್ತೇವೆ ಎಂದಯ ಹನಿಮೂನ್ ಬಗ್ಗೆ ಅರುಣ್ ಲಾಲ್ ಬಹಿರಂಗಪಡಿಸಿದರು.
ಆದಾಗ್ಯೂ ಅರುಣ್ ಲಾಲ್ ಅವರು ಮಾರ್ಗದರ್ಶನ ನೀಡಲು ಬಯಸುತ್ತಾರೆ ಎಂದು ವಿವರಿಸಿದರು. ಬಂಗಾಳ ಅಥವಾ ಇತರ ಯಾವುದೇ ತಂಡವು ತಮ್ಮನ್ನು ಮಾರ್ಗದರ್ಶಕರನ್ನಾಗಿ ತೆಗೆದುಕೊಳ್ಳಲು ಬಯಸಿದರೆ, ಅವರು ಅದರ ಬಗ್ಗೆ ಯೋಚಿಸುತ್ತಾರೆ. ಅಲ್ಲದೇ ಅರುಣ್ ಲಾಲ್ ಮತ್ತೆ ಕಾಮೆಂಟರಿ ಬಾಕ್ಸ್‌ಗೆ ಹಿಂತಿರುಗಬಹುದು ಎಂದು ಹೇಳಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications