ಆಶಾ ಭೋಸ್ಲೆ ನಿಧನಕ್ಕೆ ಕ್ರಿಕೆಟ್ ಆಟಗಾರರ ಸಂತಾಪ
ಭಾನುವಾರ ಬೆಳಗ್ಗೆ ಸಂಗೀತ ಲೋಕಕ್ಕೆ ದುಃಖದ ದಿನವಾಗಿತ್ತು. ದಂತಕಥೆ ಗಾಯಕಿ ಆಶಾ ಭೋಸ್ಲೆ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು. ಇವರು ತಮ್ಮ ಕಂಚಿನ ಕಂಠದಿಂದಲೇ ವಿಶ್ವದಾದ್ಯಂತ ಹೆಸರುವಾಸಿಯಾಗಿದ್ದ ಗಾಯಕಿ. ಇವರು ಶನಿವಾರ (ಏ.11) ರಂದು ಹೃದಾಯಘಾತದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ವಿಶ್ವದ ಗಣ್ಯರು ಹಾಗೂ ಕ್ರೀಡಾಭಿಮನಿಗಳು ಸಂತಾಪ ಸೂಚಿಸಿದರು.
ಸಂಗಿತ ಲೋಕದ ದೃವತಾರೆ ಸಚಿನ್ ಪೋಸ್ಟ್ ಬರೆದಿದ್ದಾರೆ. ಆಶಾ ತಾಯ್ ನಮ್ಮ ಕುಟುಂಬದ ಭಾಗವಾಗಿದ್ದರು. ಈ ದುಃಖವನ್ನು ಹೇಳಲು ಪದಗಳು ಸಾಲದು. ಸಂಗಿತ ದಿಗ್ಗಜೆಯ ನಿಧನಕ್ಕೆ ಕ್ರಿಕೆಟ್ ಲೋಕದ ದಿಗ್ಗಜ ಆಟಗಾರರು ನುಡಿ ನಮನ ಸಲ್ಲಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಪೋಸ್ಟ್‌ನಲ್ಲಿ ಆಶಾ ಬೋಸ್ಲೆ ನಮ್ಮ ಅಕ್ಕ ಎಂದು ಪರಿಗಣಿಸಲಾಗಿತ್ತು ಎಂದು ಬರೆದುಕೊಂಡಿದ್ದು, ಸಮಯವೇ ನಿಂತುಹೋದಂತೆ ಭಾಸವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಅವರು ಸಹ ಆಶಾ ಭೋಸ್ಲೆ ಅವರ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಆಶಾ ತಾಯಿ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಧ್ವನಿ ಲಕ್ಷಾಂತರ ಜನರ ಹೃದಯಗಳನ್ನು ಮುಟ್ಟಿದೆ ಎಂದು ಬರೆದಿದ್ದಾರೆ.
ಮಾಜಿ ಆಟಗಾರ ಶಿಖರ್ ಧವನ್ ಕೂಡ ಆಶಾ ಭೋಸ್ಲೆ ಅವರು ಸಹ ನುಡಿನಮನ ತಿಳಿಸಿದ್ದಾರೆ. ಎಂದಿಗೂ ಹಳೆಯದಾಗದ ಕಾಲಾತೀತ ಧ್ವನಿ ಎಂದು ಬರೆದುಕೊಂಡಿದ್ದಾರೆ. ಇನ್ನು ಟೀಮ್ ಇಂಡಿಯಾದ ಆಟಗಾರ ಅಜಿಂಕ್ಯ ರಹಾನೆ ಸಹ ಸಂತಾಪ ಸೂಚಿಸಿದ್ದಾರೆ.
ಪಂದ್ಯಕ್ಕೂ ಮುನ್ನ ಗೌರವ
ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಆರಂಭಕ್ಕೂ ಮುನ್ನವೇ ಖ್ಯಾತ ಸಂಗಿತಗಾರ್ತಿ ಆಶಾ ಭೋಸ್ಲೆ ಅವರ ನಿಧನಕ್ಕೆ ಒಂದು ನಿಮಿಷ ಮೌನ ಆಚರಿಸುವ ಮೂಲಕ ಗೌರವ ಸಲ್ಲಿಸಿದರು. ಇದಲ್ಲದೆ, ಮುಂಬೈ ಮತ್ತು ಆರ್‌ಸಿಬಿ ತಂಡಗಳ ಆಟಗಾರರು ಈ ಪಂದ್ಯದಲ್ಲಿ ಕಪ್ಪು ಪಟ್ಟಿಗಳನ್ನು ಧರಿಸಿ ಮೈದಾನದಲ್ಲಿ ಆಡಲು ಬಂದರು. ಅಲ್ಲದೆ ಅಭಿಮಾನಿಗಳು ಹಾಗೂ ಆಟಗಾರರು ಪಂದ್ಯಕ್ಕೂ ಮುನ್ನ ಒಂದು ನಿಮಿಷ ಮೌನ ಆಚರಿಸಿ ವಿಶ್ವ ವಿಖ್ಯಾತ ಗಾಯಕಿಗೆ ಗೌರವ ಸಲ್ಲಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications