113 ವರ್ಷಗಳ ಹಿಂದಿನ ಕೆಟ್ಟ ದಾಖಲೆ ಮುರಿದ ಆಸ್ಟ್ರೇಲಿಯಾ-ಇಂಗ್ಲೆಂಡ್!

ಲಂಡನ್, ಸೆಪ್ಟೆಂಬರ್ 16: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಎರಡೂ ತಂಡಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಟ್ಟ ದಾಖಲೆಯೊಂದನ್ನು ಮುರಿದಿವೆ. ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಭಾನುವಾರ (ಸೆಪ್ಟೆಂಬರ್ 15) ಮುಕ್ತಾಯಗೊಂಡ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಣ 5ನೇ ಆ್ಯಷಸ್ ಟೆಸ್ಟ್ ಪಂದ್ಯದಲ್ಲಿ ಈ ದಾಖಲೆ ನಿರ್ಮಾಣವಾಗಿದೆ.
ಐದು ಅಥವಾ ಹೆಚ್ಚು ಪಂದ್ಯಗಳ ಟೆಸ್ಟ್ ಸರಣಿಯೊಂದರಲ್ಲಿ ಎರಡೂ ತಂಡಗಳ ಆರಂಭಿಕ ಬ್ಯಾಟ್ಸ್‌ಮನ್‌ಗಳು ಅತೀ ಕಡಿಮೆ ರನ್ ಸರಾಸರಿ ಗಳಿಸಿದ ಕೆಟ್ಟ ದಾಖಲೆಯೀಗ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಹಣೆಗೇರಿದೆ.
ಐದು ಪಂದ್ಯಗಳ ಈ ಟೆಸ್ಟ್ ಸರಣಿಯ 5ನೇ ಪಂದ್ಯದಲ್ಲಿ ಇಂಗ್ಲೆಂಡ್ 135 ರನ್ ಜಯ ಗಳಿಸಿದೆ. ಇದರೊಂದಿಗೆ (1 ಪಂದ್ಯ ಡ್ರಾ ಸೇರಿ) ಸರಣಿ 2-2ರಿಂದ ಸಮಬಲಗೊಂಡಿದೆ.

ಆಸ್ಟ್ರೇಲಿಯಾ ನೀರಸ ಬ್ಯಾಟಿಂಗ್
ಭಾನುವಾರ ನಡೆದ 5ನೇ ಟೆಸ್ಟ್ ಪಂದ್ಯದಲ್ಲಿ ಚೇಸಿಂಗ್‌ಗಿಳಿದಿದ್ದ ಆಸ್ಟ್ರೇಲಿಯಾದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆರಂಭಿಕ ಬ್ಯಾಟ್ಸ್ಮನ್ ಮಾರ್ಕಸ್ ಹ್ಯಾರೀಸ್ ಮೊದಲ ವಿಕೆಟ್ ಒಪ್ಪಿಸುವಾಗ ಆಸೀಸ್ ಖಾತೆಯಲ್ಲಿದ್ದುದು ಬರೀ 18 ರನ್. ಈ ವಿಕೆಟ್‌ನೊಂದಿಗೆ ಕೆಟ್ಟ ದಾಖಲೆ ಸೃಷ್ಟಿಯಾಗಿದೆ.

ಆರಂಭಿಕ ಸರಾಸರಿ ರನ್
5ನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ದ್ವಿತೀಯ ಇನ್ನಿಂಗ್ಸ್ ಮುಕ್ತಾಯದ ಬಳಿಕ, ಈ ಆ್ಯಷಸ್ ಸೀರೀಸ್‌ನಲ್ಲಿ ಎರಡೂ ತಂಡಗಳ ಆರಂಭಿಕ ಬ್ಯಾಟ್ಸ್ಮನ್‌ಗಳ ಸರಾಸರಿ ರನ್ 12.55 ಆಗಿದೆ. ಇದರಲ್ಲಿ ಅತೀ ಹೆಚ್ಚು ಕಳೆಪೆ ಆರಂಭಿಕ ಬ್ಯಾಟಿಂಗ್ ಪ್ರದರ್ಶಿಸಿದ್ದು ಆಸ್ಟ್ರೇಲಿಯಾ ತಂಡ.

113 ವರ್ಷಗಳ ಹಿಂದಿನ ದಾಖಲೆ
5 ಅಥವಾ ಹೆಚ್ಚು ಪಂದ್ಯಗಳಿರುವ ಟೆಸ್ಟ್ ಸರಣಿಯೊಂದರಲ್ಲಿ ಎರಡೂ ತಂಡಗಳ ಆರಂಭಿಕ ಬ್ಯಾಟ್ಸ್ಮನ್‌ಗಳು ಮೊದಲ ವಿಕೆಟ್ ಮುರಿಯುವುದಕ್ಕೂ ಮುನ್ನ ಬಾರಿಸಿದ ಅತೀ ಕಡಿಮೆ ರನ್ ಸರಾಸರಿ 14.16 ಆಗಿತ್ತು. ಅಂದ್ಹಾಗೆ ಈ ದಾಖಲೆ ಸೃಷ್ಟಿಯಾಗಿದ್ದು 1906ರಲ್ಲಿ, ದಕ್ಷಿಣ ಆಫ್ರಿಕಾ-ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ!

ವಾರ್ನರ್‌ಗೆ ಮುಖಭಂಗ
ಆ್ಯಷಸ್ 2019ರ ಟೆಸ್ಟ್ ಸರಣಿಯುದ್ದಕ್ಕೂ ಅತೀ ಕೆಟ್ಟ ಬ್ಯಾಟಿಂಗ್ ಪ್ರದರ್ಶಿಸಿದ್ದ ಆಸೀಸ್ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್, 6ಕ್ಕೂ ಹೆಚ್ಚು ಇನ್ನಿಂಗ್ಸ್‌ಗಳಲ್ಲಿ 10ರೊಳಗಿನ ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಅಷ್ಟೇ ಅಲ್ಲ, ಈ ಸರಣಿಯ ಹಿಂದಿನ 9 ಇನ್ನಿಂಗ್ಸ್‌ಗಳಲ್ಲಿ ವಾರ್ನರ್ 6 ಸಾರಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್‌ಗೆ ವಿಕೆಟ್ ನೀಡಿದ ಅನಗತ್ಯ ದಾಖಲೆಗಾಗಿಯೂ ಗುರುತಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications