Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆತ ಟೆಸ್ಟ್ ಕ್ರಿಕೆಟ್‌ನ ಸರ್ವಶ್ರೇಷ್ಠ ವೇಗಿ: ಆಂಡರ್ಸನ್ ಬೆಂಬಲಕ್ಕೆ ಇಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್

ಆಶಸ್ ಸರಣಿಯ ಅಂತಿಮ ಪಂದ್ಯ ಮಾತ್ರವೇ ಬಾಕಿಯಿದ್ದು ನಾಲ್ಕನೇ ಪಂದ್ಯ ಡ್ರಾದಲ್ಲಿ ಅಂತ್ಯವಾಗಿರುವ ಕಾರಣ ಸರಣಿಯನ್ನು ಸಮಬಲಗೊಳಿಸುವ ಅವಕಾಶ ಮಾತ್ರವೇ ಇಂಗ್ಲೆಂಡ್ ಮುಂದಿದೆ. ಈ ಸಂದರ್ಭದಲ್ಲಿ ಈ ಸರಣಿಯಲ್ಲಿ ವೈಫಲ್ಯ ಅನುಭವಿಸಿರುವ ಜೇಮ್ಸ್ ಆಂಡರ್ಸನ್ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಅಂತಿಮ ಪಂದ್ಯದಲ್ಲಿ ಆಡುವ ವಿಚಾರವಾಗಿ ಹಾಗೂ ದಿಗ್ಗಜ ಆಟಗಾರನ ನಿವೃತ್ತಿಯ ವಿಚಾರವಾಗಿ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಕೂಡ ಈ ವಿಚಾರವಾಗಿ ಮಾತನಾಡಿದ್ದು ಆಂಡರ್ಸನ್ ಬೆಂಬಲಕ್ಕೆ ನಿಂತಿದ್ದಾರೆ. ಅಲ್ಲದೆ ಆಶಸ್ ಸರಣಿಯಲ್ಲಿ ದಿಗ್ಗಜ ಕ್ರಿಕೆಟಿಗ ಉತ್ತಮ ಪ್ರದರ್ಶನ ನೀಡದ ಹೊರತಾಗಿಯೂ ತಂಡದಲ್ಲಿ ಆತನಿಗೆ ಸ್ಥಾನ ಇರುವ ಬಗ್ಗೆಯೂ ಅವರು ಸ್ಪಷ್ಟನೆ ನೀಡಿದ್ದಾರೆ.

Ashes 2023: Ben Stokes on James Anderson he is greatest fast bowler to play

ಆ್ಯಶಸ್ 2023 ಸರಣಿಯಲ್ಲಿ ಆಂಡರ್ಸನ್ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದು ಇದರಲ್ಲಿ ಅವರು ಕೇವಲ ನಾಲ್ಕು ವಿಕೆಟ್‌ಗಳನ್ನು ಪಡೆಯುವಲ್ಲಿ ಮಾತ್ರವೇ ಯಶಸ್ವಿಯಾಗಿದ್ದಾರೆ. ಈ ನೀರಸ ಪ್ರದರ್ಶನ ಅವರ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನವಲ್ಲ. ಹೀಗಾಗಿ ಸರಣಿಯಲ್ಲಿ ಅವರ ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಬೆನ್ ಸ್ಟೋಕ್ಸ್ ಮಾತನಾಡಿದ್ದಾರೆ. "ಕ್ರಿಕೆಟ್ ಆಡಿರುವ ಶ್ರೇಷ್ಠ ವೇಗದ ಬೌಲರ್ ಜೇಮ್ಸ್ ಆಂಡರ್ಸನ್. ಅವರು ಈ ಸರಣಿಯಲ್ಲಿ ಪ್ರಭಾವ ಬೀರಲಿಲ್ಲ ಮತ್ತು ಅವರು ಇಷ್ಟಪಟ್ಟಿರುವ ವಿಕೆಟ್‌ಗಳನ್ನು ಹೊಂದಿಲ್ಲ. ಈ ಸರಣಿಯಲ್ಲಿ ಅವರು ಹಿನ್ನಡೆ ಅನುಭವಿಸಿದ್ದರೂ ಅವರು ಗುಣಮಟ್ಟದ ಆಟಗಾರ ಏನ್ನುವುದನ್ನು ಮರೆಯಬಾರದು" ಎಂದಿದ್ದಾರೆ.

ಇನ್ನು ಆಂಡರ್ಸನ್ ಪ್ರದರ್ಶನದ ಬಗ್ಗೆ ಮಾತನಾಡಿರುವ ರಿಕಿ ಪಾಂಟಿಂಗ್ ಈ ಸರಣಿಯುದ್ದಕ್ಕೂ ಅವರು ಕಳಗುಂದಿಂತೆ ಕಂಡುಬಂದರು ಎಂದಿದ್ದಾರೆ. ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಅವರಿಗೆ ಮತ್ತೊಂದು ಅವಕಾಶ ನೀಡಲಾಯಿತು ಅಲ್ಲಿಯೂ ಅವರು ವಿಫಲವಾದರು ಎಂದು ಉಲ್ಲೇಖಿಸಿದ್ದಾರೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್.

"ಅವರು ಸರಣಿಯುದ್ದಕ್ಕೂ ಕಳೆಗುಂದಿದಂತಿದ್ದರು. ಈಗ ಇಗ್ಲೆಂಡ್ ತಂಡ ಕೊನೆಯ ಪಂದ್ಯವನ್ನಾಡಲು ಕಣಕ್ಕಿಳೀಯುತ್ತಿರುವ ಕಾರಣ ಅವರ ನಿರ್ಧಾರ ಕುತೂಹಲಕಾರಿಯಾಗಿರುತ್ತದೆ. ಅವರು ವಿಕೆಟ್‌ಗಳನ್ನು ಪಡೆದುಕೊಂಡಿದ್ದರೂ ಅದು ಬಾಲಂಗೋಚಿಗಳ ವಿಕೆಟ್. ಹೊಸ ಚೆಂಡುಗಳನ್ನು ನೀಡಿ ವಿಕೆಟ್‌ಗಳನ್ನು ಪಡೆಯಲು ಅವಕಾಶ ನಿಡಿದ್ದರೂ ಅದು ಸಫಲವಾಗಿರಲಿಲ್ಲ. ಇಷ್ಟು ಅದ್ಭಿತವಾದ ವೃತ್ತಿ ಜೀವನ ಹೊಂದಿರುವ ಜೇಮ್ಸ್ ಆಂಡರ್ಸನ್ ಅವರಿಂದ ಇಂತಾ ಕಳೆಗುಂದಿದ ಪ್ರದರ್ಶನ ನಿರೀಕ್ಷಿಸಿರಲಿಲ್ಲ" ಎಂದಿದ್ದಾರೆ ಆಸ್ಟ್ರೇಲಿಯಾದ ಮಾಜಿ ನಾಯಕ ಪಾಂಟಿಂಗ್.

Story first published: Wednesday, July 26, 2023, 19:09 [IST]
Other articles published on Jul 26, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+