Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ashes 2023: ಅಂತಿಮ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ: ದಿಗ್ಗಜನಿಗೆ ದೊರೆಯಿತು ಮತ್ತೊಂದು ಅವಕಾಶ

ಆಶಸ್ ಸರಣಿಯ ನಾಲ್ಕನೇ ಪಂದ್ಯ ಮಳೆಯಿಂದಾಗಿ ಡ್ರಾಗೊಂಡಿದ್ದು ಗೆಲುವಿನ ಸನಿಹದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಭಾರೀ ನಷ್ಟವಾಗಿದೆ. ಈ ಡ್ರಾ ಫಲಿತಾಂಶದಿಂದಾಗಿ ಆಸ್ಟ್ರೇಲಿಯಾ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಂತಾಗಿದೆ. ಇದೀಗ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದತ್ತ ಎಲ್ಲರ ಚಿತ್ತ ನೆಟ್ಟಿದ್ದು ಈ ಪಂದ್ಯಕ್ಕೆ ಇಂಗ್ಲೆಂಡ್ ತಂಡ ತನ್ನ 15 ಆಟಗಾರರ ಬಳಗವನ್ನು ಘೋಷಣೆ ಮಾಡಿದೆ.

ಜುಲೈ 27ರಿಂದ ಈ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು ಈ ಪಂದ್ಯಕ್ಕೆ ಯಾವುದೇ ಬದಲಾವಣೆ ಮಾಡದೆ 15 ಆಟಗಾರರ ತಂಡವನ್ನು ECB ಪ್ರಕಟಿಸಿದೆ. ಇಂಗ್ಲೆಂಡ್‌ನ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಈ ಕೊನೆಯ ಪಂದ್ಯದಲ್ಲಿಯೂ 15ರ ಬಳಗದಲ್ಲಿ ಸ್ಥಾನ ಉಳಿಸಿಕೊಳ್ಲುವಲ್ಲಿ ಸಫಲವಾಗಿದ್ದಾರೆ. ಈ ಬಾರಿಯ ಆಶಸ್‌ನಲ್ಲಿ ಮೂರು ಪಂದ್ಯಗಳನ್ನಾಡಿರುವ ಆಂಡರ್ಸನ್ ಪರಿಣಾಮಕಾರಿ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ.

Ashes 2023: England announced unchanged 15 members squad for final Ashes test

ಈ ಸರಣಿ ಸಾಖಷ್ಟು ಏರಿಳಿತಗಳನ್ನು ಕಂಡದ್ದರೂ ಎರಡು ತಂಡಗಳು ಕೂಡ ಸಮಬಲದ ಹೋರಾಟ ನೀಡಿದೆ. ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಮಳೆಯಿಂದಾಗಿ ಡ್ರಾದಲ್ಲಿ ಅಂತ್ಯಕಂಡ ಕಾರಣ ಆಸ್ಟ್ರೇಲಿಯಾ ಆಶಸ್ ಟ್ರೋಫಿಯನ್ನು ತನ್ನಲ್ಲಿಯೇ ಉಳಿಸಿಕೊಂಡಿದೆ. ಈ ಆಘಾತಕಾರಿ ಹಿನ್ನಡೆಯ ಹೊರತಾಗಿಯೂ ಓವಲ್‌ನಲ್ಲಿ ನಡೆಯಲಿರುವ ಐದನೇ ಟೆಸ್ಟ್‌ಗೆ ತಯಾರಿ ನಡೆಸುತ್ತಿರುವ ಇಂಗ್ಲೆಂಡ್‌ನ ಉತ್ಸಾಹದಲ್ಲಿಯೇ ಇದ್ದು ಸರಣಿಯನ್ನು ಡ್ರಾ ಮಾಡುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.

ಈ ಬಾರಿಯ ಆಶಸ್ ಸರಣಿ ಈ ಹಿಂದೆಂದಿಗಿಂತಲೂ ಭಾರೀ ಪೈಪೋಟಿಯ ಸರಣಿಯಾಗಿ ಮಾರ್ಪಟ್ಟಿದೆ. ಮೊದಲ ಎರಡ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ರೋಚಕ ಗೆಲುವು ಸಾಧಿಸಿದ್ದರೆ ತಂಡತ ಅದ್ಭುತ ಕಮ್‌ಬ್ಯಾಕ್ ಮಾಡಿದ ಇಂಗ್ಲೆಂಡ್ ತಂಡ ಮೂರನೇ ಪಂದ್ಯದಲ್ಲಿ ಗೆದ್ದು ಬೀಗಿತ್ತು. ನಂತರ ನಾಲ್ಕನೇ ಪಂದ್ಯದಲ್ಲಿ ಬಹತೇಕ ಗೆಲುವಿನ ಸನಿಹಕ್ಕೆ ಬಂದಿದ್ದರೂ ಇಂಗ್ಲೆಂಡ್ ತಂಡಕ್ಕೆ ಮಳೆ ವಿಲನ್ ಆಗಿ ಕಾಡಿದ ಪರಿಣಾಮ ಪಂದ್ಯ ಡ್ರಾಗೊಂಡಿತು. ಹಾಗಿದ್ದರೂ ಒಟ್ಟಾರೆಯಾಗಿ ಈ ಬಾರಿಯ ಆಶಸ್ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿರುವುದರಲ್ಲಿ ಅನುಮಾನವಿಲ್ಲ.

ಇಂಗ್ಲೆಂಡ್ ಸ್ಕ್ವಾಡ್ ಹೀಗಿದೆ: ಬೆನ್ ಸ್ಟೋಕ್ಸ್ (ನಾಯಕ), ಮೊಯಿನ್ ಅಲಿ, ಜೇಮ್ಸ್ ಆಂಡರ್ಸನ್, ಜೊನಾಥನ್ ಬೈರ್‌ಸ್ಟೋ, ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಡಾನ್ ಲಾರೆನ್ಸ್, ಆಲಿ ರಾಬಿನ್ಸನ್, ಜೋ ರೂಟ್, ಜೋಶ್ ಟಂಗ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್

Story first published: Monday, July 24, 2023, 21:52 [IST]
Other articles published on Jul 24, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+