Ashes 2023: ಕೊನೆಯ ದಿನದ ಕುತೂಹಲ: ಆಸಿಸ್ ಗೆಲ್ಲಲು ಬೇಕು 174 ರನ್: ಇಂಗ್ಲೆಂಡ್‌ಗೆ ಬೇಕು 7 ವಿಕೆಟ್!
ಆಶಸ್ ಟೆಸ್ಟ್ ಸರಣಿಯ ಕೊನೆಯ ದಿನದಾಟ ಅತ್ಯಂತ ಕುತೂಹಲ ಕೆರಳಿಸಿದೆ. ಎರಡು ತಂಡಗಳಿಗೂ ಈ ಪಂದ್ಯದಲ್ಲಿ ಗೆಲುವಿನ ಅವಕಾಶ ಸಮಾನವಾಗಿದ್ದು ಅಂತಿಮ ದಿನದಾಟದಲ್ಲಿ ಯಾವೆಲ್ಲಾ ರೀತಿಯ ತಿರುವುಗಳು ಪಡೆಯುತ್ತವೆ ಎಂಬುದನ್ನು ಕಾದು ನೋಡಬೇಕಿದೆ. ನಾಲ್ಕನೇ ದಿನದಾಟದಲ್ಲಿಯೂ ಎರಡು ತಂಡಗಳು ಕೂಡ ತೀವ್ರ ಪೈಪೋಟಿ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ.
ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 273 ರನ್‌ಗಳನ್ನು ಕಲೆಹಾಕಲು ಮಾತ್ರವೇ ಯಶಸ್ವಿಯಾಗಿತ್ತು. ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್ ಪರವಾಗಿ ಬ್ಯಾಟಿಂಗ್ ನಡೆಸುವಾಗ ಜೋ ರೂಟ್ ಹ್ಯಾರಿ ಬ್ರೂಕ್ ಮತ್ತು ನಾಯಕ ಬೆನ್ ಸ್ಟೋಕ್ಸ್ ಹೊರತುಪಡಿಸಿದರೆ ಉಳಿದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಬಾರಲಿಲ್ಲ. ಹೀಗಾಗಿ 66.2 ಓವರ್‌ಗಳಲ್ಲಿ ಇಂಗ್ಲೆಂಡ್ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 273 ರನ್‌ಗಳನ್ನು ಮಾತ್ರವೇ ಯಶಸ್ವಿಯಾಯಿತು.

ಈ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ 281 ರನ್‌ಗಳನ್ನು ಗಳಿಸುವ ಸವಾಲು ನೀಡಿತು. ಈ ಗುರಿಯನ್ನು ಬೆನ್ನ್ಟಲು ಆರಂಭಿಸಿದ ಆಸ್ಟ್ರೇಲಿಯಾ ತಂಡ ಮೊದಲ ವಿಕೆಟ್‌ಗೆ 17.4 ಓವರ್‌ಗಳಲ್ಲಿ 61 ರನ್‌ಗಳ ಜೊತೆಯಾಟ ನೀಡುವ ಉತ್ತಮ ಆರಂಭ ನೀಡಿತು. ಆದರೆ ಈ ಸಂದರ್ಭದಲ್ಲಿ 36 ರನ್‌ಗಳಿಸಿದ್ದ ಡೇವಿಡ್ ವಾರ್ನರ್ ಬಾಬಿನ್ಸನ್‌ಗೆ ವಿಕೆಟ್ ನೀಡಿ ನಿರ್ಗಮಿಸಿದರು.
ನಂತರ ಬಂದ ಮಾರ್ನಸ್ ಲ್ಯಾಬುಶೇನ್ ಹಾಗೂ ಸ್ಟೀವ್ ಸ್ಮಿತ್ ಇಬ್ಬರು ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಸ್ಟುವರ್ಟ್ ಬ್ರಾಡ್ ಈ ಇಬ್ಬರು ಅಪಾಯಕಾರಿ ದಾಂಡಿಗರನ್ನು ಕೂಡ ಔಟ್ ಮಾಡುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಮೇಲುಗೈ ದೊರೆಯುವಂತೆ ಮಾಡಿದರು. ಈ ಮೂಲಕ ಆಸ್ಟ್ರೇಲಿಯಾ ನಾಲ್ಕನೇ ದಿನದಾಟದ ಅಂತ್ಯದಲ್ಲಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದೆ.
ಎಡ್ಜ್‌ಬಾಸ್ಟನ್ ಟೆಸ್ಟ್‌ನ ಕೊನೆಯ ದಿನದಾಟದಲ್ಲಿ ಈಗ ಎರಡು ತಂಡಗಳು ಕೂಡ ಗೆಲುವಿನ ಮೇಲೆ ಕಣ್ಣಿಟ್ಟಿದ್ದು ಎರಡು ತಂಡಗಳಿಗೂ ಸಮಾನವಾದ ಅವಕಾಶವಿದೆ. ಉಸ್ಮಾನ್ ಖವಾಜ 34 ರನ್‌ಗಳನ್ನು ಗಳಿಸಿ ಕ್ರೀಸ್‌ನಲ್ಲಿದ್ದರೆ ಸ್ಕಾಟ್ ಬೋಲಂಡ್ ಅವರೊಂದಿಗೆ ಕೊನೆಯ ದಿನದಾಟನ ಬ್ಯಾಟಿಂಗ್ ಆರಂಭಿಸಲಿದ್ದಾರೆ. ಆಸ್ಟ್ರೇಲಿಯಾ ತಂಡ ಈ ಪಂದ್ಯದಲ್ಲಿ ಗೆಲುವು ಸಾಧಿಸಬೇಕಿದ್ದರೆ ಅಂತಿನಮ ದಿನ 174 ರನ್‌ಗಳನ್ನು ಗಳಿಸುವ ಸವಾಲು ಮುಂದಿದ್ದರೆ ಇಂಗ್ಲೆಂಡ್ ತಂಡ ಉಳಿದ 7 ವಿಕೆಟ್‌ಗಳನ್ನು ಕಿತ್ತರೆ ಆಶಸ್ ಸರಣಿಯ ಮೊದಲ ಪಂದ್ಯವನ್ನು ಗೆದ್ದಂತ್ತಾಗುತ್ತದೆ.
ಇಂಗ್ಲೆಂಡ್ ಆಡುವ ಬಳಗ: ಬೆನ್ ಡಕೆಟ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಮೊಯಿನ್ ಅಲಿ, ಸ್ಟುವರ್ಟ್ ಬ್ರಾಡ್, ಒಲ್ಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್
ಬೆಂಚ್: ಡೇನಿಯಲ್ ಲಾರೆನ್ಸ್, ಜೋಶ್ ಟಂಗ್, ಮ್ಯಾಥ್ಯೂ ಪಾಟ್ಸ್, ಮಾರ್ಕ್ ವುಡ್, ಕ್ರಿಸ್ ವೋಕ್ಸ್
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಜೋಶ್ ಹ್ಯಾಜಲ್ವುಡ್, ಸ್ಕಾಟ್ ಬೋಲ್ಯಾಂಡ್
ಬೆಂಚ್: ಮಿಚೆಲ್ ಮಾರ್ಷ್, ಮಿಚೆಲ್ ಸ್ಟಾರ್ಕ್, ಟಾಡ್ ಮರ್ಫಿ, ಜೋಶ್ ಇಂಗ್ಲಿಸ್, ಮ್ಯಾಟ್ ರೆನ್ಶಾ, ಮಾರ್ಕಸ್ ಹ್ಯಾರಿಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications