Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ashes 2023: ಸತತ ಎರಡು ಪಂದ್ಯ ಸೋತ ಇಂಗ್ಲೆಂಡ್‌ಗೆ ಮತ್ತೊಂದು ಆಘಾತ: ಪ್ರಮುಖ ಆಟಗಾರ ಸರಣಿಯಿಂದ ಔಟ್

ಆಶಸ್ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳು ಈಗಾಗಲೇ ಅಂತ್ಯವಾಗಿದ್ದು ಮೂರನೇ ಪಂದ್ಯಕ್ಕೆ ಎರಡು ತಂಡಗಳು ಕೂಡ ಸಜ್ಜಾಗುತ್ತಿದೆ. ಇನ್ನು ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಆತಿಥೇಯ ಇಂಗ್ಲೆಂಡ್ ತಂಡ ಸೋಲು ಅನುಭವಿಸಿದ್ದು ಐದು ಪಂದ್ಯಗಳ ಸರಣಿಯಲ್ಲಿ 0-2 ಅಂತರದ ಹಿನ್ನಡೆಯಲ್ಲಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಹಿನ್ನಡೆಯೊಂದು ಉಂಟಾಗಿದ್ದು ತಂಡದ ಪ್ರಮುಖ ಆಟಗಾರ ಉಪನಾಯಕ ಒಲಿ ಪೋಪ್ ಸರಣಿಯ ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ.

ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಫಿಲ್ಡಿಂಗ್ ಮಾಡುತ್ತಿದ್ದಾಗ ಪೊಪ್ ಭುಜದ ನೋವಿಗೆ ತುತ್ತಾದರು. ಮೂರನೇ ದಿನದಾಟದಲ್ಲಿ ಪೊಪ್ ಮತ್ತೆ ಕಣಕ್ಕಿಳಿದ ಕಾರಣ ಈ ಗಾಯ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ ಎನ್ನಲಾಗಿದೆ. ಇನ್ನು ಇಂಗ್ಲೆಂಡ್ ಮೂರನೇ ಪಂದ್ಯಕ್ಕೆ ಹೆಸರಿಸಿದ ತಂಡದಲ್ಲಿ ಮೊದಲಿಗೆ ಒಲಿ ಪೊಪ್ ಸ್ಥಾನವನ್ನು ಪಡೆದುಕೊಂಡಿದ್ದರು. ಗುರುವಾರದಿಂದ ಈ ನಿರ್ಣಾಯಕ ಟೆಸಟ್ ಪಂದ್ಯ ಆರಂಭವಾಗಲಿದ್ದು ಈ ಪಂದ್ಯದಲ್ಲಿ ಪೊಪ್ ಕಣಕ್ಕಿಳಿಯಲಿದ್ದಾರೆ ಎಂದೇ ನಿರೀಕ್ಷಿಸಲಾಗಿತ್ತು.

England player Ollie Pope ruled out due to injury

ಆದರೆ ಇದೀಗ ಇಸಿಬಿ ಮಾಹಿತಿ ನೀಡಿದ್ದು ಇಂಗ್ಲೆಂಡ್ ಪಾಲಿಗೆ ನಿರ್ಣಾಯಕವಾಗಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಒಲಿ ಪೊಪ್ಹೊರಗುಳಿಯುವುದು ದೃಢಪಟ್ಟಿದೆ. ಮಾತ್ರವಲ್ಲ ಸರಣಿಯ ಇನ್ನುಳಿದ ಮೂರು ಪಂದ್ಯಗಳಿಂದಲೂ ಈ ಅಗ್ರಕ್ರಮಾಂಕದ ಆಟಗಾರ ಹೊರಬೀಳಲಿದ್ದಾರೆ. ಇದು ಇಂಗ್ಲೆಂಡ್ ತಂಡಕ್ಕೆ ಹಿನ್ನಡೆಯುಂಟು ಮಾಡಲಿದೆ.

ಇಂಗ್ಲೆಂಡ್ ತಂಡದ ಉಪನಾಯಕನಾಗಿರುವ ಒಲಿ ಪೊಪ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಪರಿಣಾಮಕಾರಿ ಇನ್ನಿಂಗ್ಸ್ ಆಡಲು ವಿಫಲವಾಗಿದ್ದರು. ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಪೊಪ್ 90 ರನ್‌ಗಳನ್ನು ಬಾರಿಸಿದ್ದಾರೆ. ಪೊಪ್ ಗಾಯದ ಬಗ್ಗೆ ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕ್ಕಲಮ್ ಪ್ರತಿಕ್ರಿಯೆ ನೀಡಿ ಚೇತರಿಕೆಯ ಬಗ್ಗೆ ನಿಗಾವಹಿಸಲಾಗುತ್ತಿದೆ ಎಂದಿದ್ದಾರು.

ಒಲಿ ಪೊಪ್‌ಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಕಾರಣದಿಂದಾಗಿ ಈ ಸರಣಿಯ ಉಳಿದ ಪಂದ್ಯಗಳಿಂದ ಒಲಿ ಪೊಪ್ ಹೊರಗುಳಿಯುವುದನ್ನು ಇಂಗ್ಲೆಂಡ್ ತಂಡ ಖಚಿತಪಡಿಸಿದೆ. ಇನ್ನು ಇದೇ ಸಂದರ್ಭದಲ್ಲಿ ಹೆಡಿಂಗ್ಲೆಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಒಲಿ ಪೊಪ್ ಬದಲಿಗೆ ಯಾರನ್ನೂ ಹೆಸರಿಸುವುದಿಲ್ಲ ಎಂದು ತಿಳಿಸಿದೆ.

ಇಂಗ್ಲೆಂಡ್ ಸ್ಕ್ವಾಡ್: ಬೆನ್ ಸ್ಟೋಕ್ಸ್ (ನಾಯಕ), ಜೇಮ್ಸ್ ಆಂಡರ್ಸನ್, ಜಾನಿ ಬೈರ್‌ಸ್ಟೋವ್, ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಡಾನ್ ಲಾರೆನ್ಸ್, ಮೊಯಿನ್ ಅಲಿ, ಆಲಿ ರಾಬಿನ್ಸನ್, ಜೋ ರೂಟ್, ಜೋಶ್ ಟಂಗ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್

Story first published: Tuesday, July 4, 2023, 18:02 [IST]
Other articles published on Jul 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+