'ಸ್ಪಿರಿಟ್ ಆಫ್ ಕ್ರಿಕೆಟ್': ಇಂಗ್ಲೆಂಡ್ ತಂಡಕ್ಕೆ ಮತ್ತೆ ಬಲವಾಗಿ ಕುಟುಕಿದ ಆಸಿಸ್ ನಾಯಕ ಪ್ಯಾಟ್ ಕಮ್ಮಿನ್ಸ್
ಆಶಸ್ ಸರಣಿಯ ಎರಡನೇ ಪಂದ್ಯ ಲಾರ್ಡ್ಸ್ ಟೆಸ್ಟ್ ಮುಗಿದು ಮೂರ್ನಾಲ್ಕು ದಿನಗಳು ಕಳೆದರೂ ಆ ಪಂದ್ಯದ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಲೇ ಇದೆ. ಅದರಲ್ಲೂ ಪಂದ್ಯದ ಅಂತಿಮ ದಿನ ಇಂಗ್ಲೆಂಡ್ ಬ್ಯಾಟರ್ ಜಾನಿ ಬೈರ್‌ಸ್ಟೋವ್ ಅವರನ್ನು ಔಟ್ ಮಾಡಿದ ರೀತಿಯ ಬಗ್ಗೆ ಟೀಕೆಗಳು ಜೋರಾಗಿ ನಡೆಯುತ್ತಿದೆ. ಇಂಗ್ಲೆಂಡ್ ಆಟಗಾರರು ಹಾಗೂ ಬೆಂಬಲಿಗರ ಆಸ್ಟ್ರೇಲಿಯಾದ ಕ್ರೀಡಾ ಸ್ಪೂರ್ತಿಯನ್ನು ಪ್ರಶ್ನಿಸುತ್ತಿದ್ದರೆ ಆಸ್ಟ್ರೇಲಿಯಾ ತನ್ನ ಆಟವನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ.
ಇದೀಗ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಈ ವಿಚಾರವಾಗಿ ಮತ್ತೊಮ್ಮೆ ಮಾತನಾಡಿದ್ದು ತಂಡದ ನಿಲುವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಅಲ್ಲದೆ ಇಂಗ್ಲೆಂಡ್ ತಂಡಕ್ಕೆ ಬಲವಾಗಿ ಕುಟುಕಿದ್ದಾರೆ ಆಸಿಸ್ ನಾಯಕ ಪ್ಯಾಟ್ ಕಮ್ಮಿನ್ಸ್. ಲಾರ್ಡ್ಸ್ ಪಂದ್ಯದ ಗೆಲುವಿನ ಬಳಿಕ ಮೊದಲಿಗೆ ಈ ಬಗ್ಗೆ ಮಾತನಾಡಿದ್ದ ಆಸಿಸ್ ನಾಯಕ ಇದೀಗ ಮತ್ತೊಮ್ಮೆ ಹೇಳಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕಮ್ಮಿನ್ಸ್ ಇಂಗ್ಲೆಂಡ್ ತಂಡಕ್ಕೆ ಸಲಹೆಯೊಂದನ್ನು ನೀಡಿದ್ದು ಸ್ಪಿರಿಟ್ ಆಫ್ ಕ್ರಿಕೆಟ್ ಅಪೇಕ್ಷೆ ಮಾಡುವಂತಾ ಸಂದರ್ಭವನ್ನು ಸೃಷ್ಟಿಸಿಕೊಳ್ಳುವ ಬದಲಿಗೆ ತಮ್ಮ ಆಟದ ಬಗ್ಗೆ, ಪ್ರದರ್ಶನದ ಬಗ್ಗೆ ಗಮನ ನೀಡಿ ಎಂದು ಸಲಹೆ ನೀಡಿದ್ದಾರೆ. ಕ್ರಿಕೆಟ್‌ನ ಈ ಸಾಮಾನ್ಯ ಬೆಳವಣಿಗೆಗೆ ಬರುತ್ತಿರುವ ಕಠಿಣ ಪ್ರತಿಕ್ರಿಯೆಗಳಿಗೆ ಆಸಿಸ್ ನಾಯಕ ಅಚ್ಚರಿ ವ್ಯಕ್ತಪಡಿಸಿದ್ದಾರೆ.
"ಈ ವಿಚಾರವಾಗಿ ಚರ್ಚಿಸುವಂಥಾದ್ದು ಏನಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅದು ಔಟ್.. ಅವರ ಭಾಗದಲ್ಲಿ ನಾನಿದ್ದರು ಕೂಡ ಇದಕ್ಕೆ ವಿರೋಧ ಮಾಡುತ್ತಿರಲಿಲ್ಲ. ಅಂಥಾ ಸಂದರ್ಭದಲ್ಲಿಯೂ ನಾನು ನಮ್ಮ ಬ್ಯಾಟರ್ ಬಗ್ಗೆಯೇ ಯೋಚಿಸುತ್ತಿದ್ದು ಅದು ನಮ್ಮ ಬ್ಯಾಟರ್‌ನ ಕ್ಷುಲ್ಲಕ ನಡೆ ಎಂದು ಭಾವಿಸುತ್ತಿದ್ದೆ" ಎಂದಿದ್ದಾರೆ ಪ್ಯಾಟ್ ಕಮ್ಮಿನ್ಸ್.
ಇನ್ನು ಈ ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಇಡೀ ಘಟನೆಯ ಬಗ್ಗೆ ತನ್ನ ನಿಲುವನ್ನು ಹಂಚಿಕೊಂಡಿದ್ದರು. ತಾನಾಗಿದ್ದರೆ ಈ ಪಂದ್ಯವನ್ನು ರೀತಿಯಾಗಿ ಬಯಸುತ್ತಿರಲಿಲ್ಲ ಎಂದು ಹೇಳುವ ಮೂಲಕ ಆಸ್ಟ್ರೇಲಿಯಾ ತಂಡದ ನಡೆಯ ಬಗ್ಗೆ ಭಿನ್ನಾಪ್ರಾಯವನ್ನು ವ್ಯಕ್ತಪಡಿಸಿದ್ದರು. "ಅದು ಔಟ್ ಎಂಬ ಸತ್ಯವನ್ನು ನಾನು ಅಲ್ಲಗಳೆಯುವುದಿಲ್ಲ ಯಾಕೆಂದರೆ ಅದು ಔಟ್. ಆದರೆ ನಾನು ಅವರ ಭಾಗದಲ್ಲಿದ್ದರೆ ಅಂಪಯರ್‌ಗಳ ಮೇಲೆ ಒತ್ತಡವನ್ನು ಹಾಕಿ ಬ್ಯಾಟರ್‌ಗೆ ಮತ್ತೆ ಆಡಿಸಲು ಅವಕಾಶ ನೀಡಿರುತ್ತಿದ್ದೆ. ನಾನು ಕ್ರೀಡಾಸ್ಪೂರ್ತಿಯ ಬಗ್ಗೆ ಆಳವಾದ ನಂಬಿಕೆಯನ್ನು ಹೊಂದಿದ್ದು ನಾನು ಅಂಥಾ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೆ" ಎಂದಿದ್ದರು ಬೆನ್ ಸ್ಟೋಕ್ಸ್.
ಇದಕ್ಕೆ ಪ್ರತಿಯಾಗಿ ಪ್ಯಾಟ್ ಕಮ್ಮಿನ್ಸ್ ಈ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಾ ಇದು ನಿಯಮದ ಒಳಗೇ ಇರುವ ಈತಿಯಲ್ಲಿ ಮಾಡಿರುವ ಔಟ್ ಎಂದು ಹೇಳಿಕೊಂಡಿದ್ದಾರೆ. "ಅಲೆಕ್ಸ್ ಕ್ಯಾರಿ ಇದಕ್ಕೂ ಮುನ್ನವೇ ಹಲವು ಬಾರಿ ಇದೇ ರೀತಿ ಆಗಿರುವುದನ್ನು ನೋಡಿದ್ದಾರೆ. ಅಲ್ಲಿ ಯಾವುದೇ ತಡೆ ಇರಲಿಲ್ಲ. ಕ್ಯಾಚ್ ಪಡೆದರು ಹಾಗೂ ನೇರವಾಗಿ ವಿಕೆಟ್‌ಗೆ ಚೆಂಡು ಎಸೆದಿದ್ದಾರೆ. ನನ್ನ ಪ್ರಕಾರ ಇದು ಸಂಪೂರ್ಣವಾಗಿ ನ್ಯಾಯಯುತವಾದ ಆಟ. ನಿಯಮ ಇರುವುದೇ ಹಾಗೆ. ಕೆಲವರು ಇದನ್ನು ಒಪ್ಪಿಕೊಳ್ಳದೆ ಇರಬಹುದು. ನಿನ್ನೆ ಕ್ಯಾಚ್ ವಿಚಾರದಲ್ಲಿ ಇದ್ದ ಹಾಗೆಯೇ ಇಲ್ಲಿಯೂ ನಿಯಮ ಇದೆ. ನಾನು ಇದನ್ನು ಆ ದೃಷ್ಟಿಕೋನದಲ್ಲಿ ನೋಡುತ್ತೇನೆ" ಎಂದು ಪಂದ್ಯದ ಮುಕ್ತಾಯದ ಸಂದರ್ಭದಲ್ಲಿಯೇ ಹೇಳಿಕೆ ನೀಡಿದ್ದರು ಪ್ಯಾಟ್ ಕಮ್ಮಿನ್ಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications