For Quick Alerts
ALLOW NOTIFICATIONS  
For Daily Alerts
 

Ashes 2023: ಮೂರನೇ ಪಂದ್ಯಕ್ಕೆ ಆಂಡರ್ಸನ್ ಕೈಬಿಡುವಂತೆ ರಿಕಿ ಪಾಂಟಿಂಗ್ ಸಲಹೆ

ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ಒದಲ ಎರಡು ಪಂದ್ಯಗಳಲ್ಲಿಯೂ ಸೋಲು ಅನುಭವಿಸಿ ಹೀನಾಯ ಸ್ಥಿತಿಯಲ್ಲಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ಇಂಗ್ಲೆಂಡ್ ಈ ಹಿನ್ನಡೆಯಿಂದ ಹೊರಬರಲು ಸಲಹೆಯೊಂದನ್ನು ನೀಡಿದ್ದಾರೆ. ತಂಡದ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್ ಅವರನ್ನು ಮೂರನೇ ಪಂದ್ಯದಿಂದ ಇಂಗ್ಲೆಂಡ್ ಹೊರಗಿಟ್ಟು ಅವರ ಬದಲಿಗೆ ಜೋಶ್ ಟಂಗ್‌ ಅವರನ್ನುಆಡುವ ಬಳಗದಲ್ಲಿ ಮುಂದುವರಿಸಬೇಕು ಎಂದಿದ್ದಾರೆ.

ಲಾರ್ಡ್ಸ್‌ ಟೆಸ್ಟ್‌ನ ವಿವಾದಗಳ ಸುಂಟರಗಾಳಿಯ ಬಳಿಕ ಮೂರನೇ ಪಂದ್ಯಕ್ಕಾಗಿ ಇತ್ತಂಡಗಳು ಕೂಡ ಲೀಡ್ಸ್‌ಗೆ ಪ್ರಯಾಣಿಸಿದ್ದು ಎರಡೂ ತಂಡಗಳಿಗೆ ಮೂರನೇ ಪಂದ್ಯದ ಸಿದ್ಧತೆಗೆ ಸಮಯಾವಕಾಶವಿದೆ. ಇನ್ನು ಆಸ್ಟ್ರೇಲಿಯಾವು 2001ರ ಬಳಿಕ ಮೊದಲ ಬಾರಿಗೆ ತವರಿನಾಚೆಗಿನ ಆಶಸ್ ಸರಣಿ ಗೆಲ್ಲುವ ಅವಕಾಶ ಹೊಂದಿದ್ದು 2-0 ಅಂತರದಿಂದ ಸದ್ಯ ಮುನ್ನಡೆಯಲ್ಲಿದೆ.

Ashes 2023: Ricky Ponting said England should drop James Anderson for 3rd Test

ಆಂಡರ್ಸನ್ ಈ ಸರಣಿಯಲ್ಲಿ ಹೆಚ್ಚು ನಿರಾಸೆ ಮೂಡಿಸಿದ ಬೌಲರ್ ಎಂದಿದ್ದಾರೆ ರಿಕಿ ಪಾಂಟಿಂಗ್. "ಆಂಡರ್ಸನ್ ಹೊಸ ಚೆಂಡು ಕೈಗೆತ್ತಿಕೊಂಡಾಗ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳು ಇರುತ್ತವೆ. ಆರಂಭದಲ್ಲಿಯೇ ಅವರು ವಿಕೆಟ್‌ಗಳನ್ನು ಪಡೆಯುತ್ತಾರೆ ಈ ಮೂಲಕ ಎದುರಾಳೀಗೆ ಒತ್ತಡ ಹೇರುತ್ತಾರೆ. ಅವರು ರನ್‌ಗಳನ್ನು ಬಿಟ್ಟುಕೊಡುವುದಿಲ್ಲ. ಆದರೆ ಅವರ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನವನ್ನು ಈ ಸರಣಿಯಲ್ಲಿ ನೋಡಿಲ್ಲ" ಎಂದಿದ್ದಾರೆ ರಿಕಿ ಪಾಂಟಿಂಗ್.

"ಇದು ಜೇಮ್ಸ್ ಆಂಡರ್ಸನ್ ಅವರ ಮೇಲೆ ನೇರವಾಗಿ ಟೀಕೆ ಮಾಡುವುದಲ್ಲ. ಅವರು ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರು. ಅವರ ಸುದೀರ್ಘ ಆಟ ಮತ್ತು ಅವರ ವಿಕೆಟ್-ತೆಗೆದುಕೊಳ್ಳುವ ಸಾಮರ್ಥ್ಯ ವಿಶೇಷವಾದದ್ದು. ಆದರೆ ನಾನು ಕಳೆದ ವಾರ ನೋಡಿದಾಗ ಅವರು ಹಿನ್ನಡೆಯನ್ನು ಅನುಭವಿಸುವುದು ಕಂಡು ಬಂದಿದೆ ಎಂದಿದ್ದಾರೆ ಪಾಂಟಿಂಗ್.

ಇನ್ನು ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಆತಿಥೇಯ ಇಂಗ್ಲೆಂಡ್ ತಂಡ ಸೋಲು ಅನುಭವಿಸಿದ್ದು ಐದು ಪಂದ್ಯಗಳ ಸರಣಿಯಲ್ಲಿ 0-2 ಅಂತರದ ಹಿನ್ನಡೆಯಲ್ಲಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಹಿನ್ನಡೆಯೊಂದು ಉಂಟಾಗಿದ್ದು ತಂಡದ ಪ್ರಮುಖ ಆಟಗಾರ ಉಪನಾಯಕ ಒಲಿ ಪೋಪ್ ಸರಣಿಯ ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ.

ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಫಿಲ್ಡಿಂಗ್ ಮಾಡುತ್ತಿದ್ದಾಗ ಪೊಪ್ ಭುಜದ ನೋವಿಗೆ ತುತ್ತಾದರು. ಮೂರನೇ ದಿನದಾಟದಲ್ಲಿ ಪೊಪ್ ಮತ್ತೆ ಕಣಕ್ಕಿಳಿದ ಕಾರಣ ಈ ಗಾಯ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ ಎನ್ನಲಾಗಿದೆ. ಇನ್ನು ಇಂಗ್ಲೆಂಡ್ ಮೂರನೇ ಪಂದ್ಯಕ್ಕೆ ಹೆಸರಿಸಿದ ತಂಡದಲ್ಲಿ ಮೊದಲಿಗೆ ಒಲಿ ಪೊಪ್ ಸ್ಥಾನವನ್ನು ಪಡೆದುಕೊಂಡಿದ್ದರು. ಗುರುವಾರದಿಂದ ಈ ನಿರ್ಣಾಯಕ ಟೆಸಟ್ ಪಂದ್ಯ ಆರಂಭವಾಗಲಿದ್ದು ಈ ಪಂದ್ಯದಲ್ಲಿ ಪೊಪ್ ಕಣಕ್ಕಿಳಿಯಲಿದ್ದಾರೆ ಎಂದೇ ನಿರೀಕ್ಷಿಸಲಾಗಿತ್ತು.

ಆದರೆ ಇದೀಗ ಇಸಿಬಿ ಮಾಹಿತಿ ನೀಡಿದ್ದು ಇಂಗ್ಲೆಂಡ್ ಪಾಲಿಗೆ ನಿರ್ಣಾಯಕವಾಗಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಒಲಿ ಪೊಪ್ಹೊರಗುಳಿಯುವುದು ದೃಢಪಟ್ಟಿದೆ. ಮಾತ್ರವಲ್ಲ ಸರಣಿಯ ಇನ್ನುಳಿದ ಮೂರು ಪಂದ್ಯಗಳಿಂದಲೂ ಈ ಅಗ್ರಕ್ರಮಾಂಕದ ಆಟಗಾರ ಹೊರಬೀಳಲಿದ್ದಾರೆ. ಇದು ಇಂಗ್ಲೆಂಡ್ ತಂಡಕ್ಕೆ ಹಿನ್ನಡೆಯುಂಟು ಮಾಡಲಿದೆ.

ಇಂಗ್ಲೆಂಡ್ ಸ್ಕ್ವಾಡ್: ಬೆನ್ ಸ್ಟೋಕ್ಸ್ (ನಾಯಕ), ಜೇಮ್ಸ್ ಆಂಡರ್ಸನ್, ಜಾನಿ ಬೈರ್‌ಸ್ಟೋವ್, ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಡಾನ್ ಲಾರೆನ್ಸ್, ಮೊಯಿನ್ ಅಲಿ, ಆಲಿ ರಾಬಿನ್ಸನ್, ಜೋ ರೂಟ್, ಜೋಶ್ ಟಂಗ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್

Story first published: Tuesday, July 4, 2023, 20:20 [IST]
Other articles published on Jul 4, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+